ಕಲಬುರಗಿ: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರನ್ನು ವಿಚಾರಣೆಗೆ ಕರೆದಿರುವ ಹಿನ್ನೆಲೆಯಲ್ಲಿ ನಗರದ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಮೌನ ಸತ್ಯಾಗ್ರಹ ಹಮ್ಮಿಕೊಂಡ ಪ್ರಯುಕ್ತ ನಗರದ ಇಂಧಿರಾಗಾಂಧಿ ಸ್ಮಾರಕ ಭವನ (ಟೌನ್ಹಾಲ್) ಅನ್ನಪೂರ್ಣ ವೃತ್ತದ ಹತ್ತಿರ ವಿರುವ ಮಹಾತ್ಮಗಾಂಧಿಜಿ – ಪ್ರತಿಮೆ ಬಳಿ ಜಿಲ್ಲಾ ಕಾಂಗ್ರೆಸ್ನಿಂದ ಸತ್ಯಾಗ್ರಹ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರು, ಹಿರಿಯ ಮುಖಂಡರಾದ ರಾಜಗೋಪಾಲರೆಡ್ಡಿ, ಸುಭಾಶ ಪಾಂಚಾಳ, ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೊನಗುಂಟಿ, ಈರಣ್ಣ ಝಳಕಿ, ಧರ್ಮರಾಜ ಬಿ.ಹೇರೂರ, ಪರಶುರಾಮ ನಾಟೇಕಾರ, ಕಾರ್ತಿಕ ನಾಟೇಕಾರ, ಶಫೀಕ್ ಹುಂಡೇಕಾರ, ಶಿವುಕುಮಾರ ಬಾಳಿ, ಲತಾ ರಾಠೋಡ, ರೇಣುಕಾ ಸಿಂಗೆ, ಸ್ವೇತಾ ಹಾಗೂ ಕಾರ್ಯಕರ್ತರು ಇದ್ದರು.