ಕಲಬುರಗಿ: ಕ್ರಾಂತಿಕಾರಿ ರೈತ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಮುಸ್ತಾಕ್ ಅಹ್ಮದ್ ಅವರ ಆದೇಶದ ಮೇರೆಗೆ ಸೇನೆಯ ಕಲ್ಯಾಣ ಕರ್ನಾಟಕದ ಅಧ್ಯಕ್ಷರಾಗಿ ರಜಾಕ್ ಚೌದ್ರಿ ಮಂದೇವಾಲ್ ಅವರನ್ನು ನೇಮಕ ಮಾಡಲಾಗಿದೆ.
ರೈತರ ಪರ ಜಮೀನು, ನೆಲ, ಜಲ, ರಕ್ಷಣೆಗಾಗಿ ಸಂಘಟನೆಯು ಕಂಕಣಬದ್ಧವಾಗಿ ಕರುನಾಡಿನ ಜನಪರ ನಿಲುವಿನೊಂದಿಗೆ ಸಮಾಜಮುಖಿ ಚಿಂತನೆ ಜೊತೆ ವರ್ತಮಾನದ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ಸಕ್ರಿಯವಾಗಿ ರೈತಪರ ಹೋರಾಟ ಮಾಡುವ ಮೂಲಕ ಭೂಮಿ ತಾಯಿಯ ಋಣವನ್ನು ತೀರಿಸುತ್ತಾ ಬಂದಿದ್ದು, ಪ್ರಗತಿಪರ ವಿವಿಧತೆಯಲ್ಲಿ ಏಕತೆ, ಮತ್ತು ಶಾಂತಿ, ಸರ್ವಧರ್ಮ, ಸಮಾನತೆಯೊಂದಿಗೆ ಸಕ್ರಿಯವಾಗಿ ರೈತ ಪರವಾಗಿದ್ದು, ರೈತರಿಗೆ ನ್ಯಾಯ ದೊರಕಿಸಿ ಕೊಡುವುದು ಈ ಸಂಘಟನೆಯ ಉದ್ದೇಶವಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸಮಿತಿಯ ಒಪ್ಪಿಗೆ ಮೇರೆಗೆ ರೈತ ಚಿಂತಕ, ರೈತರ ಸಮಸ್ಯೆಗಳಿಗೆ ಯಾವತ್ತು ಜೊತೆಗೂಡಿ ಕೆಲಸ ಮಾಡುತ್ತಿರುವದನ್ನು ನಿಮ್ಮನ್ನು ಗುರುತಿಸಿ ನೇಮಕ ಆದೇಶ ಹೋರಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.