ಕಲಬುರಗಿ: ಕಲಬುರಗಿದಕ್ಷಿಣ ಮತಕ್ಷೇತ್ರದಲ್ಲಿಜೆಡಿಎಸ್ ಪಕ್ಷದ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಸಮಾವೇಶದ ಬೃಹತ್ ಶಕ್ತಿ ಪ್ರದರ್ಶನ ಮಾಡಲಾಗುವುದುಎಂದುರಾಜ್ಯಜಾತ್ಯತೀತ ಜನತಾದಳದ ಯುವಘಟಕದಉಪಾಧ್ಯಕ್ಷ ಕೃಷ್ಣಾ ರೆಡ್ಡಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯನ್ನು ನಡೆಸಿ ಮಾಹಿತಿ ನೀಡಿದಅವರು, ಜುಲೈ ೩೦ರಂದು ಬೆಳಗ್ಗೆ ೧೧ ಗಂಟೆಗೆಜೆಡಿಎಸ್ದಕ್ಷಿಣ ಮತಕ್ಷೇತ್ರದ ಸುಮಾರು ೨೦ ಸಾವಿರಕಾರ್ಯಕರ್ತರ ಬೃಹತ್ ಸಮಾವೇಶಏರ್ಪಡಿಸಲಾಗಿದೆ.
ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕ ಬಂಡೆಪ್ಪಾಖಾಶೇಂಪುರ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಸಾಕ್ಷಿಯಾಗಲಿದ್ದಾರೆಎಂದರು. ಶ್ಯಾಮರಾವ್ ಸೂರನ್, ಮಲಿಕ್ ನಾಗನಳ್ಳಿ, ಶಿವಲಿಂಗಪ್ಪಾ ಪಾಟೀಲ್, ರಾಜುಕುಲಕರ್ಣಿಇದ್ದರು.