ಶಹಾಬಾದ: ಇಂಗಳಗಿ ಗ್ರಾಮಕ್ಕೆ ಬಸ್ ಸೌಕರ್ಯ ಒದಗಿಸಿ ವಿದ್ಯಾರ್ಥಿಗಳಿಗೆ ಅನುಕೂಲಮಾಡಿಕೊಡಬೇಕೆಂದು ಆಗ್ರಹಿಸಿ ಗುರುವಾರ ಚಿತ್ತಾಪೂರ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಸಾಯಬಣ್ಣ ಗುಡುಬಾ ನೇತೃತ್ವದಲ್ಲಿ ವಿದ್ಯಾಥಿಗಳು ಪ್ರತಿಭಟನೆ ನಡೆಸಿ ಗ್ರೇಡ್-೨ ತಹಸೀಲ್ದಾರ ಗುರುರಾಜ ಸಂಗಾವಿ ಮುಖಾಂತರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಇಲಾಖೆಯ ಜಿಲ್ಲಾ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಚಿತ್ತಾಪೂರ ತಾಲೂಕಿನ ಇಂಗಳಗಿ ಗ್ರಾಮದಿಂದ ಶಹಾಬಾದ, ವಾಡಿ, ಕಲಬುರಗಿ ನಗರಕ್ಕೆ ನೂರಾರು ವಿದ್ಯಾರ್ಥಿಗಳು ದಿನನಿತ್ಯ ಶಾಲಾ ಕಾಲೇಜುಗಳಿಗೆ ಪ್ರಯಾಣಿಸುತ್ತಾರೆ. ಆದರೆ ಗ್ರಾಮಕ್ಕೆ ಬಸ್ ಸೌಕರ್ಯ ಇಲ್ಲದ ಪರಿಣಾಮ ವಿದ್ಯಾರ್ಥಿಗಳು ದುಬಾರಿ ಹಣ ನೀಡಿ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು ಬಸ್ ಸೌಕರ್ಯ ಇಲ್ಲದ ಪರಿಣಾಮ ಶಿಕ್ಷಣ ಅರ್ಧಕ್ಕೆ ಸ್ಥಗಿತಗೊಳಿಸಿದ್ದಾರೆ. ಬಸ್ ಸೌಕರ್ಯ ಇಲ್ಲದರಿಂದ ಗ್ರಾಮೀಣ ಮಕ್ಕಳ ಭವಿ? ಅತಂತ್ರವಾಗುತ್ತಿದೆ. ಇದರಿಂದ ಶಹಾಬಾದ ಮತ್ತು ಇಂಗಳಗಿ ಗ್ರಾಮದ ಮಧ್ಯೆ ಬಸ್ ಸಂಚಾರ ಆರಂಭಿಸಬೇಕು. ಗ್ರಾಮದಿಂದ ಬೆಳಿಗ್ಗೆ ೬.೨೦ ಗಂಟೆಗೆ ಬಸ್ ಬಿಡಬೇಕು. ನಂತರ ಶಹಾಬಾದ್ ಬಸ್ ನಿಲ್ದಾಣದಿಂದ ಮಧ್ಯಾಹ್ನ ೧ ಗಂಟೆಗೆ ಬಸ್ ಬಿಡಬೇಕು. ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿತ್ತಾಪುರ ಘಟಕದ ವ್ಯವಸ್ಥಾಪಕರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ.
ಆದರೂ ಅಧಿಕಾರಿಗಳು ಬಸ್ ಆರಂಭಿಸಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ದಿನನಿತ್ಯದ ಸಂಚಾರ ತಂಬಾ ಕ?ಕರವಾಗಿದೆ. ಇದರಿಂದ ಕೂಡಲೇ ಬಸ್ ಆರಂಭಿಸಬೇಕು. ಇಲ್ಲದಿದ್ದರೆ ಚಿತ್ತಾಪುರ ಸಾರಿಗೆ ಇಲಾಖೆಯವರೆಗೆ ವಿದ್ಯಾರ್ಥಿಗಳಿಂದ ಪಾದಯಾತ್ರೆ ಆರಂಭಿಸಲಾಗುವುದು ಎಂದು ಸಾಯಿಬಣ್ಣ ಗುಡುಬಾ ಎಚ್ಚರಿಕೆ ನೀಡಿದ್ದಾರೆ.
ವಿದ್ಯಾರ್ಥಿನಿಯರಾದ ಪ್ರೇಮಾ ಕಟ್ಟಿಮನಿ, ಶರಣಮ್ಮ ಯರಗೊಳ, ಜ್ಯೋತಿ, ಐಶ್ವರ್ಯ ದಂಡಗುಂಡಕರ್, ಸೈಫಾನ್, ಮಯಾವತಿ ಸೇರಿದಂತೆ ಇತರರು ಇದ್ದರು.