ನಗರಸಭೆ ವ್ಯಾಪ್ತಿಯ ಪತ್ರಿ ಮನೆಗಳ ಮೇಲೆ ರಾಷ್ಟ್ರಧ್ವಜಾರೋಹಣವಾಗಲಿ: ಬಸವರಾಜ

0
40

ಶಹಾಬಾದ: ಪ್ರಸಕ್ತ ಸಾಲಿನ ಸ್ವಾತಂತ್ರೋತ್ಸವ ಸಂಭ್ರಮಾಚರಣೆ ದಿನ ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳ ಪ್ರತಿಯೊಬ್ಬರ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಾಡಬೇಕು. ಆ ಮೂಲಕ ಸಾಮೂಹಿಕವಾಗಿ ದೇಶಾಭಿಮಾನ ಮೆರೆಯುವುದಲ್ಲದೇ ಕಾರ್ಯಕ್ರಮದ ಯಶಸ್ವಿಗೊಳಿಸಬೇಕೆಂದು ನಗರಸಭೆಯ ಪೌರಾಯುಕ್ತ ಬಸವರಾಜ ಹೆಬ್ಬಾಳ ಕರೆ ನೀಡಿದ್ದಾರೆ.

ಈ ಕುರಿತು ನಗರಸಭೆ ಆಡಳಿತ ಪರವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪೌರಾಯುಕ್ತ ಬಸವರಾಜ ಅವರು ಸ್ವಾತಂತ್ರದ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಘೋ?ಣೆ ಪಾಲಿಸುವಂತೆ ಕರೆ ನೀಡಿದೆ. ಆದ್ದರಿಂದ ಅಗಸ್ಟ್ ೧೧ ರಿಂದ ೧೭ರವರೆಗೆ ದೇಶದ ಪ್ರತಿ ಮನೆಯಲ್ಲಿ ಸ್ವಾತಂತ್ರೋತ್ಸವದ ಸಂಭ್ರಮಾಚರಣೆ ಮಾಡುವ ಜತೆಗೆ ಮನೆಗಳು ಮತ್ತು ಅಂಗಡಿ, ಕಚೇರಿಗಳ ಮೇಲೆ ರಾ? ಬಾವುಟ ಹಾರಾಡಬೇಕು. ಅಂತೆ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ನಗರದ ನಿವಾಸಿಗಳು ಸಹ ಸಡಗರ ಸಂಭ್ರಮದಿಂದ ಆಚರಿಸುವ ಮೂಲಕ ರಾ?ಪ್ರೇಮವನ್ನು ಅಭಿವ್ಯಕ್ತ ಪಡಿಸಬೇಕೆಂದು ನಗರಸಭೆಯ ಆಡಳಿತ ವತಿಯಿಂದ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ನಗರದ ಎಲ್ಲಾ ಇಲಾಖೆಯ ಅಧಿಕಾರಿಗಳು ಮನೆಗಳ ಮೇಲೆ ರಾ? ಧ್ವಜ ಹಾರಿಸಿ, ರಾ?ಪ್ರೇಮ ಅಭಿವ್ಯಕ್ತಿಗೊಳಿಸಲು ಅನುಕೂಲವಾಗುವಂತೆ ಅಂದಿನ ದಿನ ರಾ? ಧ್ವಜ ಹಾರಿಸಬೇಕು. ಸರ್ಕಾರದ ಸೌಲಭ್ಯ ಪಡೆಯುವವರು ಸರ್ಕಾರದ ನಿಯಮ ಪಾಲಿಸುವುದು ಕಡ್ಡಾಯವಾಗಿದೆ. ಹೀಗಾಗಿ ಯಾವುದೇ ಕುಂಟು ನೆಪ ಹೇಳದೆ ರಾ? ಧ್ವಜ ಕಡ್ಡಾಯವಾಗಿ ಹಾರಿಸಬೇಕು. ಸರ್ಕಾರಿ, ಖಾಸಗಿ, ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜು, ಈ ನಿಯಮ ಅನ್ವಯವಾಗಲಿದ್ದು, ಎಲ್ಲಾ ಶಿಕ್ಷಣ ಸಿಬ್ಬಂದಿಗಳು ತಮ್ಮ ಮನೆಯ ಮೇಲೆ ರಾ? ಧ್ವಜ ಹಾರಿಸುವಂತೆ ಸೂಚನೆಯಲ್ಲಿ ತಿಳಿಸಿದೆ ಎಂದರು.

ಈ ಸಂದರ್ಭದಲ್ಲಿ ಎಇಇ ಮುಜಾಮಿಲ್ ಅಲಂ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here