ಸುರಪುರ: ನಗರದ ಖುರೇಶಿ ಮೊಹಲ್ಲಾದ ವ್ಯಕ್ತಿಯೊಬ್ಬರಿಗೆ ಹಳೆಯ ಕಬ್ಬಿಣದ ವಸ್ತುಗಳು ನೀಡುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದ ಆಸಾಮಿಯನ್ನು ಈಗ ಪೊಲೀಸರು ಬಂಧಿಸಿ ಕರೆತಂದಿದ್ದಾರೆ.
ಖುರೇಶಿ ಮೊಹಲ್ಲಾದ ಅಬ್ದುಲ ಮಜೀದ್ ಎನ್ನುವವರಿಗೆ ಕಬ್ಬಿಣದ ಹಳೆ ವಸ್ತುಗಳ ಕೊಡುವುದಾಗಿ ನಂಬಿಸಿ ೨೨ ಲಕ್ಷ ರೂಪಾಯಿಗಳನ್ನು ಪಡೆದು ತಲೆಮರೆಸಿಕೊಂಡು ಹೋಡಾಡುತ್ತಿದ್ದ ಬೆಳಗಾವಿ ಮೂಲಕ ಇರ್ಷದ್ ಅಲಿ ತಂದೆ ಆಸಿಖ್ ಅಲಿ ಸರಾಫ್ ಎನ್ನುವ ಆಸಾಮಿಯೇ ಈಗ ಜೈಲು ಕಂಬಿ ಎಣಿಸುತ್ತಿದ್ದಾನೆ.
ಹಣ ಕಳೆದುಕೊಂಡ ವ್ಯಕ್ತಿ ಅಬ್ದುಲ್ ಮಜೀದ್ ಈ ಕುರಿತು ದೂರು ಸಲ್ಲಿಸಿದ್ದರು.ಅದರಂತೆ ನ್ಯಾಯಾಲಯದ ಆದೇಶದಂತೆ ಈಗ ಬೆಳಗಾವಿಯಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿ ಇರ್ಷಾದ್ ಅಲಿಯನ್ನು ಪಿಐ ಸುನೀಲಕುಮಾರ ಮೂಲಿಮನಿ ಮತ್ತವರ ತಂಡ ಎಳೆದು ತಂದು ಕಂಬಿ ಹಿಂದೆ ತಳ್ಳಿದ್ದಾರೆ.
ಹಣ ಕಳೆದು ಕೊಂಡ ವ್ಯಕ್ತಿಯ ಹಣವನ್ನು ಮರಳಿ ಕೊಡಿಸುವಂತೆ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಶೌಕತ್ ಅಲಿ ಹಣ ಕಳೆದುಕೊಂಡ ಅಬ್ದುಲ್ ಮಜೀದ್‌ಗೆ ನ್ಯಾಯ ಕೊಡಿಸುವಂತೆ ಹಾಗೂ ವಂಚಕನಿಗೆ ಕಠಿಣ ಶಿಕ್ಷೆ ನೀಡುವಂತೆ ಮನವಿ ಮಾಡಿ ವಂಚಕನನ್ನು ಬಂಧಿಸಿ ಕರೆತಂದ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ್ದಾರೆ.