ಸೈರನ್” ಚಿತ್ರದ ಟೀಸರ್‌ ಬಿಡುಗಡೆ

0
99

ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಪ್ರವೀಣಕುಮಾರ ಶೆಟ್ಟಿ ಅವರ ಸುಪುತ್ರರಾದ ಪ್ರವೀರ್ ಶೆಟ್ಟಿ ಅವರ ಚೊಚ್ಚಲ ಸಿನಿಮಾ “ಸೈರನ್” ಚಿತ್ರದ ಟೀಸರ್‌ನ್ನು ಆ.೨.ರಂದು ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಬಿಡುಗಡೆಯಾಯಿತು.

ಈ ಚಿತ್ರ ಯಶಸ್ವಿಯಾಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾನೂನು ಘಟಕ ವತಿಯಿಂದ ನಗರದ ಶ್ರೀ ಮಹಾದಾಸೋಹಿ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಸಂಪತ ಜೆ.ಹಿರೇಮಠ, ಈರಯ್ಯ ಹಿರೇಮಠ, ಸಾಗರ, ಅಮನ, ದೇವಿದಾಸ ಪಾಟೀಲ್, ನಾಗರಾಜ ಶೇರಿಕರ, ಚಂದ್ರಶೇಖರ ಪಾಟೀಲ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here