ಎಸ್‌ಆರ್‌ಜಿಆಂಗ್ಲ್ ಮಾಧ್ಯಮ ಶಾಲೆಗೆ ಸಮಗ್ರಚಾಂಪಿಯನ್ ಪಟ್ಟ

0
9

ಆಳಂದ: ಪಟ್ಟಣದದಕ್ಷಿಣ ವಲಯದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಆಳಂದ ಪಟ್ಟಣದ ಪ್ರತಿಷ್ಠಿತಎಸ್‌ಆರ್‌ಜಿಆಂಗ್ಲ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಜಯಗಳಿಸಿ ಸಮಗ್ರಚಾಂಪಿಯನ್ ಪಟ್ಟ ಪಡೆದುತಾಲೂಕಾ ಮಟ್ಟದ ಕ್ರೀಡಾ ಕೂಟಕ್ಕೆ  ಆಯ್ಕೆ ಯಾಗಿದ್ದಾರೆ.

ಅಥ್ಲೇಟಿಕ್ಸ್‌ನಲ್ಲಿಬಾಲಕಿಯರ ವಿಭಾಗದ ೧೦೦ ಮೀ ಓಟದಲ್ಲಿ ಶಿವರಂಜನಿ ಪ್ರಥಮ, ಸ್ಫೂರ್ತಿ ದ್ವೀತಿಯ, ೨೦೦ ಮೀ ಓಟದಲ್ಲಿ ಶಿವರಂಜನಿ ಪ್ರಥಮ, ೪೦೦ ಮೀ ಓಟದಲ್ಲಿ ಪ್ರಿಯಾ ಪ್ರಥಮ, ೬೦೦ ಮೀ ಓಟದಲ್ಲಿ ಸೇವಂತಾ ಪ್ರಥಮ ಸ್ಥಾನ ಪಡೆದಿದ್ದಾರೆ.ಬಾಲಕಿಯರ ಗುಂಪು ಸ್ಪರ್ಧೆಗಳಲ್ಲಿ ಖೋಖೋ ಪ್ರಥಮ.ಕಬ್ಬಡ್ಡಿ ಪ್ರಥಮ, ರೀಲೆ ಪ್ರಥಮ ವಾಲಿಬಾಲ್ ದ್ವೀತಿಯ, ಥ್ರೋಬಾಲ್‌ನಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾರೆ.

Contact Your\'s Advertisement; 9902492681

ಅಥ್ಲೇಟಿಕ್ಸ್‌ನಲ್ಲಿಬಾಲಕರ ವಿಭಾಗದ ೧೦೦ಮೀ ಓಟದಲ್ಲಿ ಸುಪ್ರೀತ ಪ್ರಥಮ, ಅಮರ ದ್ವೀತಿಯ, ೨೦೦ ಮೀ ಓಟದಲ್ಲಿಚೇತನ ಪ್ರಥಮ, ೪೦೦ ಮೀ ಓಟದಲ್ಲಿಅಕ್ಷಯ ಪ್ರಥಮ, ಸತೀಶ ದ್ವೀತಿಯ ಪಡೆದಿದ್ದಾರೆ.ಬಾಲಕರ ಗುಂಪು ಸ್ಪರ್ಧೆಗಳಲ್ಲಿ ಖೋಖೋ ಪ್ರಥಮ, ಕಬಡ್ಡಿ ಪ್ರಥಮ, ವಾಲಿಬಾಲ್ ದ್ವೀತಿಯಥ್ರೋಬಾಲ್ ದ್ವೀತಿಯ, ರೀಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಚಕ್ರಎಸೆತದಲ್ಲಿ ಶ್ರೀಕಾಂತ ದ್ವೀತಿಯ, ಎತ್ತರಜಿಗಿತದಲ್ಲಿಆದರ್ಶ ಪ್ರಥಮ, ವಿಶಾಲ ದ್ವೀತಿಯ, ಉದ್ದಜಿಗಿತದಲ್ಲಿಆದರ್ಶ ಪ್ರಥಮ, ಬಾಲಕಿಯರಎತ್ತರಜಿಗಿತದಲ್ಲಿ ವಿಜಯಲಕ್ಷ್ಮೀ ಪ್ರಥಮ ಸ್ಥಾನ ಪಡೆದುಕೊಂಡುತಾಲೂಕಾ ಮಟ್ಟಕ್ಕೆಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯಅಧ್ಯಕ್ಷರೂ, ಶಾಸಕರಾದ ಸುಭಾಷ್‌ಆರ್‌ಗುತ್ತೇದಾರ, ಕಾರ್ಯದರ್ಶಿಗಳಾದ ಹರ್ಷಾನಂದಗುತ್ತೇದಾರ, ಆಡಳಿತಾಧಿಕಾರಿ ಡಾ.ರಾಘವೇಂದ್ರಚಿಂಚನಸೂರ, ಪ್ರಾಚಾರ್ಯೆಜ್ಯೋತಿ ವಿಶಾಕ್, ದೈಹಿಕ ಶಿಕ್ಷಕ ಅನೀಲಕುಮಾರ ಸಾಳುಂಕೆ ಸೇರಿದಂತೆ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here