ಜಲ ಜೀವನ್ ಮಿಷನ್ ಕಾಮಗಾರಿ ತ್ವರಿತ ಪೂರ್ಣಗೊಳಿಸಿ: ಡಾ.ಗೀರಿಶ್ ಡಿ.ಬದೋಲೆ

0
75

ಕಲಬುರಗಿ: ಜಿಲ್ಲೆಯ ಜಲ ಜೀವನ್ ಮಿಷನ್ ಕಾರ್ಯಕ್ರಮ ಕೇಂದ್ರ ಸರಕಾರದ ಮಹತ್ವಕಾಂಕ್ಷೆ ಯೋಜನೆಯಾಗಿದ್ದು, ಈ ನಿಟ್ಟಿನಲ್ಲಿ ಕಾಮಗಾರಿಗಳನ್ನು ಗುಣ ಮಟ್ಟದಿಂದ ಕಾರ್ಯ ನಿರ್ವಹಿಸಿ ನಿಗದಿತ ಅವಧಿಯಲ್ಲಿ ಮುಗಿಸಿ ಹರ್ ಘರ್ ಜಲೋತ್ಸವ ಕಾರ್ಯಕ್ರಮ ಏರ್ಪಡಿಸಿ ಗ್ರಾಮ ಪಂಚಾಯತಗಳಿಗೆ ಹಸ್ತಾಂತರ ಮಾಡಬೇಕೆಂದರು ಎಂದು ಡಾ.ಗೀರಿಶ್ ಡಿ.ಬದೋಲೆ ಸೂಚನೆ ನೀಡಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿಭಾಗೀಯ ಕಚೇರಿಯ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತದಿಂದ ಅವರು ಜಲ ಜೀವನ್ ಮಿಷನ್ ಬ್ಯಾಚ್-೧ ರಿಂದ ಬ್ಯಾಚ್-೩ ರ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಹಾಗೂ ಬ್ಯಾಚ್ ೪ ರ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಒಂದು ವಾರದಲ್ಲಿ ಸಲ್ಲಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತಿಯೊಂದು ಮನೆಗಳ ಸರ್ವೇಯನ್ನು ಮಾಡಿ ಕಾರ್ಯಾತ್ಮಕ ಪ್ರತಿಯೊಂದು ಮನೆಗಳಿಗೆ ಮನೆ ನಳ ಸಂಪರ್ಕ ನೀಡಬೇಕೆಂದರು. ಮತ್ತು ಕಾಮಗಾರಿ ಗುಣ ಮಟ್ಟದಿಂದ ಕೂಡಿರಬೇಕೆಂದರು. ಒಂದು ವೇಳೆ ಕಾಮಗಾರಿ ಕಳಪೆ ಎಂದು ಕಂಡು ಬಂದಲ್ಲಿ ಸಂಬಂಧಿಸಿದ ಗುತ್ತಿಗೆದಾರರು ಮತ್ತು ಕಿರಿಯ ಅಭಿಯಂತರರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು. ಸಭೆಯಲ್ಲಿ ಕಾರ್ಯಪಾಲಕ ಅಭಿಯಂತರರು, ಬ್ಯಾಚ್-೧ ರಲ್ಲಿ ೨೫೪ ಕಾಮಗಾರಿಗಳು ಮುಕ್ತಾಯಗೊಂಡಿದೆ ಎಂದು ಸಭೆಗೆ ತಿಳಿಸಿದಾಗ ಕೂಡಲೇ ಎಲ್ಲ ಕಾಮಗಾರಿಗಳನ್ನು ೧೦ ದಿನದಲ್ಲಿ ಮುಗಿಸಬೇಕೆಂದು ತಿಳಿಸಿದರು.

ಬ್ಯಾಚ್ ೨ ಕಾಮಗಾರಿಗಳು ಸಹ ಟೆಂಡರ ಆಗಿದ್ದರು ಸಹ ಕಾಮಗಾರಿಗಳು ತ್ವರಿತವಾಗಿ ಪ್ರಾರಂಭಿಸುತ್ತಿಲ್ಲ ಏಕೆ ಎಂದು ಸಭೆಯಲ್ಲಿ ಚರ್ಚಿಸಿದರು. ಈ ಕೂಡಲೇ ಎಲ್ಲ ಕಾಮಗಾರಿಗಳು ಪ್ರಾರಂಭಿಸಿ ಎಂದು ಸಭೆ ತಾಕೀತು ಮಾಡಿದರು. ಇದೇ ಸಂದರ್ಭದಲ್ಲಿ ಕಾಮಗಾರಿ ಪೂರ್ಣಗೊಂಡ ನಂತರ ಮನೆ-ಮನೆಗೆ, ಶಾಲೆ, ಅಂಗನವಾಡಿ ಕಟ್ಟಡಗಳಿಗೆ ನಳ ನೀರು ಬರುತ್ತಿರುವುದನ್ನು ಖಾತ್ರಿ ಪಡಿಸಿಕೊಂದು ಸರ್ಕಾರದ ಆದೇಶ ಹಾಗೂ ನಿಯಮಾವಳಿಯಂತೆ ಆಗಸ್ಟ ೧೨ ರೊಳಗಾಗಿ ಹರ್ ಘರ್ ಜಲೋತ್ಸವ ಘೋಷಣೆ ಮಾಡಲು ತಿಳಿಸಿದರು.

ಈಗಾಗಲೇ ಎಲ್ಲಾ ೨೬೧ ಗ್ರಾಮ ಪಂಚಾಯತಿಗಳಿಗೆ ನೀರು ಪರೀಕ್ಷೆ ಮಾಡುವ ಕಿಟ್ ಗಳನ್ನು ನೀಡಿದ್ದು, ಈ ಕುರಿತು ಪ್ರತಿ ಗ್ರಾಮದಿಂದ ೫ ಜನ ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ಮಹಿಳೆಯರಿಗೆ ನೀರು ಪರೀಕ್ಷೆ ಮಾಡುವ (ಎಪ್.ಟಿ.ಕೆ ಕಿಟ್ ) ನೊಂದಣಿ ಮಾಡುವುದು ಕಡ್ಡಾಯವಾಗಿದ್ದು, ಆ ಗ್ರಾಮದಲ್ಲಿಯ ಕುಡಿಯುವ ಜಲ ಮೂಲಗಳನ್ನು ಪರೀಕ್ಷೆ ಮಾಡುವುದು ಇದರಿಂದ ಗ್ರಾಮಸ್ಥರು ಗುಣಮಟ್ಟದ ನೀರು ಕುಡಿಯುತ್ತಿದ್ದಾರೆಂದು ಖಾತ್ರಿಗೊಳ್ಳುವುದು. ಈ ನಿಟ್ಟಿನಲ್ಲಿ ಯಾವ ಗ್ರಾಮ ಪಂಚಾಯತ್ ಗಳು ಎಪ್.ಟಿ.ಕೆ ಕಿಟ್ ನೊಂದಣಿ ಮಾಡಿರುವುದಿಲ್ಲ ಅಂತಹ ತಾಲೂಕು ಅಧಿಕಾರಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದರು.

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಲಬುರಗಿ ವಿಭಾಗೀಯ ಕಾರ್ಯಪಾಲಕ ಅಭಿಯಂತರರಾದ ಮಹಾದೇವ ಸಿಂಧೆ , ಜಲ ಜೀವನ ಮಿಷನ್ ಡಿಪಿಎಂ ಮತ್ತುವ ಜಿಲ್ಲಾ ಪಂಚಾಯತ್ ಕಲಬುರಗಿ ಜಲ ಜೀವನ್ ಮಿಷನ್ ವ್ಯವಸ್ಥಾಪಕರಾದ ಮುಬೀನ್ ಎಲ್ಲಾ ಉಪವಿಭಾಗಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಿರಿಯ ಅಭಿಯಂತರರು, ೩ನೇ ಪಕ್ಷದ ಪರಿವೀಕ್ಷಣೆಯ ಏಜೆನ್ಸಿಗಳು, ಡಿಪಿಆರ್ ಏಜೆನ್ಸಿಗಳು, ಐಎಸ್‌ಎ ಮತ್ತು ಐಎಸ್‌ಆರ್ ಏಜೆನ್ಸಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here