ಬೆಲೆ ಏರಿಕೆ ನಿಯತ್ರಣಕ್ಕೆ ಜಾಬೀನ್ ಆಗ್ರಹ

0
17

ಚಿಂಚೋಳಿ: ಕೋವಿಡ್ ಪರಿಣಾಮದಿಂದ ತತ್ತರಿಸಿದ ಜನರಿಗೆ ಈಗ ಬೆಲೆ ಏರಿಕೆಯ ಬಿಸಿ ತಟ್ಟಿದೆ ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ನಿರಂತವಾಗಿ ಏರಿಕೆ ಮಾಡುತ್ತೀರುವುದರಿಂದ ಜನ ಸಾಮಾನ್ಯರ ಬದುಕು ದುಸ್ತರಗೊಂಡಿದೆ ತಕ್ಷಣ ಏರಿಕೆ ಮಾಡಿರುವ ಎಲ್ಲಾ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಸಂತೋಷ ಜಾಬೀನ್ ಅವರು ಒತ್ತಾಯಿಸಿದ್ದಾರೆ.

ಪದೇ ಪದೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತೀರುವುದರಿಂದ ಬಡ ಮತ್ತು ಸಾಮಾನ್ಯ ಜನರಿಗೆ ಹಸಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಇದರಿಂದ ನಿತ್ಯ ದುಡಿಯುವ ಕೂಲಿ ಕಾರ್ಮಿಕರಿಗೆ ಬಡ ಮತ್ತು ಸಾಮಾನ್ಯರ ಬದುಕು ಹದಗೇಡುತ್ತೀದೆ ನಿತ್ಯ ದುಡಿದು ಹೋಟ್ಟೆ ತುಂಬಿಸಿಕೋಳುವುದೆ ದೊಡ್ಡ ಸಾಹಸದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಇಂದಿನ ವಾಸ್ತವ ಪರಿಸ್ಥಿತಿಯಲ್ಲಿ ಬೆಲೆ ಗಗನಕ್ಕೆರಿರುವುದರಿಂದ ಜನರ ನೆಮ್ಮದಿ ಜೀವನ ನಿರ್ವಹಣೆ ಕಷ್ಟಕರವಾಗಿದೆ ಕನಿಷ್ಠ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತೀದ್ದಾರೆ ಇದರಿಂದ ದುಡಿದ ಹಣವೇಲ್ಲಾ ಮಾರುಕಟ್ಟೆಗೆ ಸುರಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಲೆ ನಿಯಂತ್ರಿಸಿ ಜನರ ಬದುಕನೂ ಸುಧಾರಿಸಬೇಕಾದ ಸರ್ಕಾರವು ಜನಪರ ಆಡಳಿತ ನಡೆಸದೆ ಜನ ವಿರೋಧಿ ಆಡಳಿತ ನಡೆಸುತ್ತೀರುವುದು ಶೋಚನೀಯ ಸಂಗತಿಯಾಗಿದೆ , ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದ ಪರಿಣಾಮದಿಂದ ಕೌಟಂಬಿಕ ಕಲಹಗಳ ನಡಯುತ್ತೀವೆ.

ಗಗನಕ್ಕೆ ಏರಿದ ಬೆಲೆಯಿಂದ ಜನರ ಕೆಂಗಟ್ಟು ಹೋಗಿದ್ದಾರೆ ನಿತ್ಯ ಅಗತ್ಯ ವಸ್ತುಗಳನ್ನು ಖರಿದಿಗೆ ಬರುವ ಜನರು ಹೀಡಿಶಾಪ ಹಾಕುತ್ತೀದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಸರ್ಕಾರದ ವಿರುದ್ಧ ಆರೋಪ ಕೇಳಿ ಬರುತ್ತೀದೆ ಎಂದರು.

ಈ ಬೆಲೆ ಏರಿಕೆಯಿಂದ ಹಗಲೂ ಈರುಳು ಎನ್ನದೆ ನಿತ್ಯ ದುಡಿಯುವ ಕೂಲಿ ಕಾರ್ಮಿಕರು ಬದುಕು ದುಸ್ತರಗೂಂಡಿರುವುದರಿಂದ ದುಡಿಯುವ ಶ್ರಮೀಕರ ಶ್ರಮ ವ್ಯರ್ಥವಾಗುತ್ತೀರುವುದು ಬೇಸರದ ಸಂಗತಿಯಾಗಿದೆ ಇದರಿಂದ ಬಡವರು ಇನ್ನೂ ಬಡವರಾಗುತ್ತೀದ್ದಾರೆ ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತೀದ್ದಾರೆ ಮದ್ಯಮ ವರ್ಗದವರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ.

ಬೆಲೆ ಏರಿಕೆಯಿಂದ ದುಸ್ತರಗೂಂಡ ಜನರ ಬದುಕನೂ ಸುಧಾರಿಸಲೂ ಇನ್ನಾದರೂ ಸರ್ಕಾರವು ಗಗನಕ್ಕೆ ಏರಿಕೆಯಾಗಿರುವ ಎಲ್ಲಾ ಅಗತ್ಯ ವಸ್ತುಗಳ ಬೆಲೆಯನ್ನೂ ನಿಯಂತ್ರಣ ಮಾಡಬೇಕೆಂದು ಸಂತೋಷ ಜಾಬೀನ್ ಆಗ್ರಹಿಸದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here