ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಕಾರ್ಯ ಶ್ಲಾಘನಿಯ

0
44
ಆಳಂದ: ಪಟ್ಟಣದಲ್ಲಿನ ಎಡೆಯೂರ, ಗದಗ, ಡಂಬಳ ಮಠದ ಜಗದ್ಗುರು ತೋಂಟದಾರ್ಯ ಅನುಭವ ಮಂಟಪ ನಿರ್ಮಾಣ ಕಾರ್ಯವನ್ನು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ ಭೇಟಿ ನೀಡಿ ವೀಕ್ಷಿಸಿದರು. ಬಿ.ಎನ್. ಪಾಟೀಲ. ವಿವೇಕಾನಂದ ಹತ್ತಿ ಇದ್ದರು.

ಆಳಂದ: ಎಡೆಯೂರ, ಗದಗ, ಡಂಬಳ ಮಠದ ತ್ರೀವಿಧ ದಾಸೋಹಿ ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ನಾಡಿನ ಹೆಮ್ಮೆಯ ಪ್ರತೀಕವಾಗಿದ್ದರು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ ಬಣ್ಣಿಸಿದರು.

ಪಟ್ಟಣದ ಉರಮಗಾ ಹೆದ್ದಾರಿಯಲ್ಲಿನ ಜಗದ್ಗುರು ತೋಂಟದಾರ್ಯ ಅನುಭವ ಮಂಟಪ, ವಿದ್ಯಾಪೀಠದ ಕಟ್ಟಡ ನಿರ್ಮಾಣ ಕಾರ್ಯದ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು. ಎತ್ತಣ ಮಹಾಪರ, ಎತ್ತಣ ಕೂಗಿಲೆ, ಎತ್ತಣದೆತ್ತ ಸಂಬಂದವಯ್ಯ ಎಂಬ ಅಲಂ ಪ್ರಭುಗಳ ವಚನದಂತೆ ಗಡಿಭಾಗದ ಹಿಂದುಳಿದ ಆಳಂದ ಭಾಗದಲ್ಲಿ ಜನಪರ ಸಮಾಜ ಮುಖಿ ಕಾರ್ಯಕ್ಕಾಗಿ ಕೋಟ್ಯಂತರ ವೆಚ್ಚದಲ್ಲಿ ಅನುಭವ ಮಂಟಪ, ವಿದ್ಯಾಪೀಠ ನಿರ್ಮಾಣದ ಕುರಿತು ಶ್ರೀಗಳ ಸತಸಂಕಲ್ಪ ಕಾರ್ಯ ಭರದಿಂದ ಸಾಗಿರುವುದು ಈ ಭಾಗದ ಜನ ಸಾಮಾನ್ಯರಿಗಾಗಿ ಕೈಗೆತ್ತಿಕೊಂಡಿರುವ ಕಲ್ಯಾಣ ಕಾರ್ಯವು ಶ್ರೀಗಳ ನಾಡು, ನುಡಿ ಬಗ್ಗೆ ಇರುವ ದೂರದೃಷ್ಟಿ ಕಾಳಜಿ ಎತ್ತಿ ತೋರಿಸುತ್ತದೆ ಎಂದರು.

Contact Your\'s Advertisement; 9902492681

ಈಗಾಗಲೇ ಎಡೆಯೂರ ಸಿದ್ಧಲಿಂಗೇಶ್ವರ ಸುಕ್ಷೇತ್ರದಲ್ಲಿ ಪೂಜ್ಯರು ಕೈಗೊಂಡ ಅನ್ನದಾಸೋಹ ಮತ್ತು ಜ್ಞಾನ ದಾಸೋಹ ಲಕ್ಷಾಂತ ಬಡವರಿಗೆ ಅನುಕೂಲವಾದಂತೆ ಆಳಂದ ಭಾಗದಲೂ ಅನ್ನದಾಸೋಹ ಜ್ಞಾನ ದಾಸೋಹ ಕಾರ್ಯ ಸಾಗಲಿ, ನಿಸರ್ಗ ರಮಣಿಯ ವಾತಾವರಣದಲ್ಲಿ ಭವ್ಯವಾಗಿ ಶ್ರೀಮಠದ ವೆಚ್ಚದಲ್ಲೇ ಅನುಭವ ಮಂಟಪ ನಿರ್ಮಾಣ, ಹತ್ತಾರು ಜಾತಿಯ ಗಿಡ, ಮರಗಳನ್ನು ಬೆಳೆಯುತ್ತಿರುವ ಈ ಐತಿಹಾಸಿಕ ದಾಖಲೆಯ ಕೆಲಸಕ್ಕೆ ಸರ್ಕಾರ ಅನುದಾನ ಒದಗಿಸಬೇಕು ಎಂದು ಹೇಳಿದರು.

ಹಿರಿಯ ಸಿದ್ಧಣ್ಣಾ ಝಳಕಿ, ಶ್ರೀಮಠದ ಬಿ.ಎನ್. ಪಾಟೀಲ ಗದಗ, ವಿವೇಕಾನಂದ ಎನ್. ಹತ್ತಿ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here