ಅಂಬೇಡ್ಕರರಿಗೆ ಅಗೌರವ ಆರೋಪ: ಗಾಂಧಿ ವೃತ್ತದಲ್ಲಿ ಪ್ರತಿಭಟನೆ

0
25

ಸುರಪುರ:ತಾಲೂಕು ಆಡಳಿತದಿಂದ ಶ್ರೀ ಪ್ರಭು ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ೭೬ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ:ಬಿ.ಆರ್ ಅಂಬೇಡ್ಕರರ ಭಾವಚಿತ್ರವನ್ನು ಇಡದೆ ಅವಮಾನಿಲಾಗಿದೆ ಎಂದು ಆರೋಪಿಸಿ ದಲಿತ ಸಾಮೂಹಿಕ ಸಂಘಟನೆಗಳ ಮುಖಂಡರು ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಅನೇಕ ಮುಖಂಡರು ಭಾಗವಹಿಸಿ,ಸಂವಿಧಾನ ಶಿಲ್ಪಿ ಡಾ:ಬಿ.ಆರ್ ಅಂಬೇಡ್ಕರರನ್ನು ಕಡೆಗಣಿಸಿರುವ ತಾಲೂಕು ಆಡಳಿತದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಸಂವಿಧಾನದಡಿಯಲ್ಲಿ ನೌಕರಿ ಪಡೆದಿರುವ ಅಧಿಕಾರಿಗಳು ಇಂದು ಅಂತಹ ಸಂವಿಧಾನ ಶಿಲ್ಪಿಗೆ ಅವಮಾನಿಸಿದ್ದಾರೆ,ಶಾಸಕ ರಾಜುಗೌಡ ಅವರು ಕೂಡ ಕಾರ್ಯಕ್ರಮದಲ್ಲಿದ್ದು ನಿರ್ಲಕ್ಷ್ಯ ತೋರಿದ್ದಾರೆ ಎಂದರು.ಕೂಡಲೇ ತಹಸೀಲ್ದಾರ್ ಮತ್ತು ಡಿವೈಎಸ್ಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

Contact Your\'s Advertisement; 9902492681

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಲಾಯಿತು.ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ಮನವಿ ಸ್ವೀಕರಿಸುವ ವರೆಗೂ ಪ್ರತಿಭಟನೆ ನಡೆಸುವುದಾಗಿ ಪಟ್ಟು ಹಿಡಿದರು.ನಂತರ ಪಿಐ ಸುನೀಲಕುಮಾರ ಮೂಲಿಮನಿ ಪ್ರತಿಭಟನಾಕರಾರರ ಬಳಿ ಬಂದು ಜಿಲ್ಲಾಧಿಕಾರಿಗಳಿಂದ ಮಾತನಾಡಿಸಿ ನಿಮ್ಮ ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪಿಐ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಡಾ:ಮಂಜುನಾಥ ಟಿ, ಹೋರಾಟಗಾರರಾದ ಮಾನಪ್ಪ ಕಟ್ಟಿಮನಿ,ಮಾಳಪ್ಪ ಕಿರದಹಳ್ಳಿ,ಮಲ್ಲು ಕೆಸಿಪಿ,ವೆಂಕೋಬದೊರೆ ಬೊಮ್ಮನಹಳ್ಳಿ,ದಾವೂದ್ ಪಠಾಣ,ರಾಜು ಕಟ್ಟಿಮನಿ,ಮಾನಪ್ಪ,ವಿಶ್ವನಾಥ ಹೊಸ್ಮನಿ,ಶರಣು ತಳವಾರಗೇರಾ,ರಾಮಣ್ಣ ಶೆಳ್ಳಗಿ,ಶಿವಶಂಕರ ಕಟ್ಟಿಮನಿ,ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ,ಪ್ರಶಾಂತ ಉಗ್ರಂ,ಸಾಹೇಬಗೌಡ ವಾಗಣಗೇರಾ,ನಾಗರಾಜ ಓಕಳಿ,ವೈಜನಾಥ ಹೊಸ್ಮನಿ,ಜೆಟ್ಟೆಪ್ಪ ನಾಗರಾಳ,ಮಲ್ಲು ನಾಯಕ ಕಬಾಡಗೇರ,ತಿಪ್ಪಣ್ಣ ಪಾಟೀಲ್,ಕನಕಾಚಲ ಯಡಿಯಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಧಿಡೀರ್ ಪ್ರತಿಭಟನೆ ನಡೆಸಿದ್ದರಿಂದ ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here