ಮಹಾ ನಾಯಕರ ಸ್ವಾತಂತ್ರ್ಯ ಹೋರಾಟದ ಶ್ರಮ ಸಾರ್ಥಕವಾಗಲಿ: ಶಿವಮೂರ್ತಿ ಶಿವಚಾರ್ಯ

0
18

ಸುರಪುರ: ಅನೇಕ ಮಹಾನ್ ನಾಯಕರ ತ್ಯಾಗ, ಬಲಿದಾನ, ಹೋರಾಟದ ಪ್ರತೀಕವಾದ ಭಾರತದ ಸ್ವಾತಂತ್ರ್ಯದ ಶ್ರಮ ಸಾರ್ಥಕವಾಗಲಿ ಎಂದು ದೇವಾಪೂರ ಜಡಿಶಾಂತ ಲಿಂಗೇಶ್ವರ ಸಂಸ್ಥಾನ ಹಿರೇಮಠದ ಪೂಜ್ಯ ಶ್ರೀ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.

ನಗರದ ರಂಗಂಪೇಟೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬಸವಪ್ರಭು ವಿದ್ಯಾವರ್ಧಕ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ ೭೫ನೇಯ ಸ್ವಾತಂತ್ರ್ಯ ಅಮೃತಮೊಹೊತ್ಸವದ ಸಂಭ್ರಮಾಚಾರಣೆ ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿ ಮಾತನಾಡಿದ ಅವರು, ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ದೇಶದೆಲ್ಲೆಡೆ ಅತ್ಯಂತ ಸಂಭ್ರಮ, ಸಡಗರ, ಅಭಿಮಾನದಿಂದ ಆಚರಿಸುತ್ತಿರುವುದಲ್ಲದೆ, ವಿದೇಶಗಳಲ್ಲಿಯು ಕೂಡ ಅನೇಕ ಅನಿವಾಸಿ ಭಾರತಿಯರು ಸ್ವಾತಂತ್ರ್ಯದ ಸಂಭ್ರಮವನ್ನು ಸಂಭ್ರಮಿಸುತ್ತಿದ್ದಾರೆ. ಆದೀಶೆಯಲ್ಲಿ ಪ್ರತಿಯೊಬ್ಬ ಭಾರತದ ನಾಗರಿಕನು ಕೂಡ ದೇಶಾಭಿಮಾನ, ದೇಶ ಪ್ರೇಮ, ದೇಶದ ಬಗ್ಗೆ ಗೌರವ ಹೊಂದುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ, ಯಾದಗಿರಿ ಡಿ.ಸಿ.ಸಿ ಭ್ಯಾಂಕಿನ ಉಪಾಧ್ಯಕ್ಷ ಡಾ. ಸುರೇಶ ಆರ್ ಸಜ್ಜನ್ ಮಾತನಾಡಿ, ಸ್ವಾತಂತ್ರ್ಯ ಚಳುವಳಿಗೆ ಮಹಾತ್ಮಾಗಾಂಧಿಜಿ, ನೇತಾಜಿ, ಬೊಸ್, ಭಗತ್ ಸಿಂಗ್ ಆಜಾದ್ ಸೇರಿದಂತೆ ಅನೇಕ ಜನ ಮಹಾನ್ ನಾಯಕರ ತ್ಯಾಗ ಬಲಿದಾನದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಮಹಾನ್ ನಾಯಕ ಚಿಂತನೆ ಹಾಗೂ ಜೊತೆಗೆ ಕಲ್ಪನೆ ಇಡೆರಬೇಕಾಗಿದೆ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಕಮಲಾಕ್ಷ, ತಾಲೂಕ ಯೋಜನಾಧಿಕಾರಿಗಳಾದ ಸಂತೋಷ ಎ.ಎಸ್. ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು, ಬಸವಪ್ರಭು ವಿಧ್ಯಾವರ್ಧಕ ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಾಸ್ತಾವಿಕಾವಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ವಿರೇಶ ಹಳಿಮನಿ ಸ್ವಾಗತಿಸಿದರು, ಶ್ರೀಹರಿ ಆದವಾನಿ ರಾಷ್ಟ್ರಗೀತೆ ನಡೆಸಿಕೊಟ್ಟರು, ಸಲೀಂ ಪಾಷಾ ನಿರೂಪಿಸಿದರು.

ಮೌನೇಶ ರಾಯನಪಾಳ್ಯ ಪ್ರಾರ್ಥಿಸಿದರು, ಪ್ರವೀಣ ಜಕಾತಿ ವಂದಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ಯಮನಪ್ಪ ಕಲದಗಿ ಸೂಗುರು, ಭೀಮಣ್ಣ ಪೀರಭಾವಿ ಲಕ್ಷ್ಮೀಪೂರ, ನಾಗರಾಜ ಗದ್ವಾಲ್ ರಂಗಂಪೇಟ, ಗುತಣ್ಣಗೌಡ ಪರಸನಹಳ್ಳಿ, ಬಸವರಾಜ ಹಡಪದ ಸುರಪುರ, ಹಣಮಂತ್ರಾಯ ಹೆಮನೂರು, ಬಸವರಾಜ ಹಡಪಾದ, ರಾಯಪ್ಪ ಕಲ್ಲದೇವನಳ್ಳಿ ಇವರುಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು, ಇದೇ ಸಂದರ್ಭದಲ್ಲಿ ಪಿ.ಯು.ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಅಮೃತ ಮಹೋತ್ಸವದ ವಿವಿಧ ಸ್ಪರ್ದೇಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು, ಜೊತೆಗೆ ಫಲಾನುಭವಿಗಳಿಗೆ ಆಯುಶ್ಮಾನ್ ಕಾರ್ಡ್ ವಿತರಣೆಮಾಡಲಾಯಿತು. ಪ್ರಮುಖರಾದ ಶಿವಶರಣಪ್ಪ ಹೇಡಿಗಿನಾಳ, ಶಿವರಾಜ ಕಲೀಕೆರಿ, ಸಾಯಬಣ್ಣ ಪುರ್ಲೆ, ರಮೇಶ ಕದಂ, ಬಲಭೀಮಪಾಟೀಲ್, ರುದ್ರಪ್ಪ ಕೆಂಭಾವಿ, ಶ್ರೀಕಾಂತ ರತ್ತಾಳ, ಬಿರೇಶ ಕುಮಾರ, ಸಿದ್ದಪ್ರಸಾದ ಪಾಟೀಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here