ಕರ್ನಾಟಕ ಬಿ.ಎಡ್.ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

0
11

ಸುರಪುರ: ಭಾರತ ದೇಶದಲ್ಲಿ ಹುಟ್ಟಿರುವ ನಾವುಗಳು ಈ ದೇಶಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕು, ನಾವು ಸ್ವಾತಂತ್ರ್ಯ ಪಡೆಯಲು ಅನೇಕ ಜನ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದು ಅಂತಹವರನ್ನು ನಾವು ಇಂದು ಸ್ಮರಿಸಬೇಕಾಗಿದೆ ಇಂದಿನ ಯುವಕರು ಹಾಗೂ ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ಕೈಗೊಂಡು ದೇಶದ ಉತ್ತಮ ಪ್ರಜೆಗಳಾಗಿ ಬಾಳಿ ಬದುಕಬೇಕು ಎಂದು ಡಾ.ಬಾಬಾ ಸಾಹೇಬ ಅಂಬೇಡ್ಕರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಭೀಮಣ್ಣ ಬಿಲ್ಲವ್ ಹೇಳಿದರು.

ರಂಗಂಪೇಟೆಯ ಕರ್ನಾಟಕ ಬಿ.ಎಡ್.ಕಾಲೇಜಿನಲ್ಲಿ ಅಂಬೇಡ್ಕರ ಶಿಕ್ಷಣ ಸಂಸ್ಥೆಯ ವಿವಿಧ ಶಾಲಾ-ಕಾಲೇಜುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕಾದರೆ ನಿರಂತರ ಅಧ್ಯಯನ ತುಂಬಾ ಅವಶ್ಯಕ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಷ್ಟಪಟ್ಟು ಓದಬೇಕು ಅಂದಾಗ ಮುಂದೆ ಬರಲು ಸಾಧ್ಯ ಎಂದ ಅವರು ಅಂಬೇಡ್ಕರ ಶಿಕ್ಷಣ ಸಂಸ್ಥೆಯು ವಸತಿ ನಿಲಯಗಳು ಹಾಗೂ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಕಳೆದ ೩೦-೪೦ವರ್ಷಗಳಿಂದ ಇ ಭಾಗದಲ್ಲಿ ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣವರೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು ಈ ಭಾಗದ ವಿದ್ಯಾರ್ಥಿಗಳು ಹಾಗೂ ಯುವಕರು ಸೌಲಭ್ಯದ ಸದುಪಯೋಗಪಡೆದುಕೊಳ್ಳಬೇಕು ಎಂದರು.

Contact Your\'s Advertisement; 9902492681

ಮುಖ್ಯ ಅತಿಥಿ ಭಾರತೀಯ ಸೇನಾ ಪಡೆಯ ಯೋಧರಾದ ಪರಮಣ್ಣ ಗೌಡಗೇರಿ ಮಾತನಾಡಿ ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಬೇಕು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಅನೇಕ ಜನ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳ ಫಲವಾಗಿದ್ದು ಇಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ವಿದ್ಯಾರ್ಥಿಗಳ ಆದರ್ಶ ವ್ಯಕ್ತಿಗಳಾಗಬೇಕು ದೇಶದ ಅಭಿವೃದ್ಧಿಗಾಗಿ ನಿಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು.

ಪುರಸಭೆ ಮಾಜಿ ಸದಸ್ಯ ಖಾಲಿದ್ ಅಹ್ಮದ ತಾಳೀಕೋಟಿ, ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಕುಲಕರ್ಣಿ, ರೇಣುಕಾ ಕನಕಗಿರಿ, ನಿಂಗಣ್ಣ ಹೆಗ್ಗನದೊಡ್ಡಿ, ಶರಣಪ್ಪ ಅನಸೂರು, ಧೀರೇಂದ್ರ ಕುಲಕರ್ಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಮರೆಪ್ಪ ನಿರೂಪಿಸಿದರು ಬಿ.ಜಿ.ನಾಯಕ ಸ್ವಾಗತಿಸಿದರು ಹಿರಗರಾಜ ಬಿಲ್ಲವ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here