ಮನಸ್ಸಿನ ಗಾಯ ಬದುಕು ಹೇಗೆ ಸುಂದರಗೊಳಿಸಬೇಕೆಂದು ಕಲಿಸುತ್ತದೆ: ಮಲ್ಲಿಕಾರ್ಜುನ್

0
65

ಕಲಬುರಗಿ: ಮನುಷ್ಯನಿಗೆ ಕಾಲಿಗೆ ಆದ ಗಾಯ ಹೇಗೆ ನಡೆಯಬೇಕೆಂದು ಕಲಿಸಿದರೆ ಮನಸ್ಸಿಗೆ ಆದ ಗಾಯ ಬದುಕು ಹೇಗೆ ಸುಂದರಗೊಳಿಸಬೇಕೆಂಬುದು ಕಲಿಸಿಕೊಡುತ್ತದೆ ಎಂದು ಕಿಣ್ಣಿ ಸರಫೋಸ್ ತಾಂಡಾದ ಸರಕಾರಿ ಶಾಲೆಯ ಶಿಕ್ಷಕರಾದ ಮಲ್ಲಿಕಾರ್ಜುನ ಆರ್. ಬಿ. ಹೇಳಿದರು.

ನಗರದ ಭವಾನಿನಗರದಲ್ಲಿರುವ ಬಬಲಾದ ಶ್ರೀಮಠದಲ್ಲಿ ನಡೆದ ಶಿವಾನುಭವಗೋಷ್ಠಿಯ ೬೦ನೇ ಮಾಲಿಕೆಯಲ್ಲಿ ಉಪನ್ಯಾಸ ನೀಡುತ್ತಾ ನಮಗೆ ಕಷ್ಟಗಳು ಬರುವುದು ಸಹಜ ಆದರೆ ಧೈರ್ಯದಿಂದ ಎದುರಿಸಿ ಪರಿಹರಿಸಿಕೊಂಡು ನೆಮ್ಮದಿಯ ಜೀವನ ನಮ್ಮದಾಗಿಸಿಕೊಳ್ಳಬೇಕೆಂದರು. ಇಂದಿನ ಮಕ್ಕಳಿಗೆ ತಾಯಿ-ತಂದೆ ಗುರುಹಿರಿಯರಿಗೆ ಗೌರವ ಕೊಡುವುದನ್ನು ಕಲಿಸಬೇಕಾಗಿದೆ. ತಾಯಿ ತಂದೆಯರ ಸೇವೆ ಮಾಡಿರುವ ವ್ಯಕ್ತಿ ಜೀವನದಲ್ಲಿ ಸೋಲಲು ಸಾಧ್ಯವಿಲ್ಲ ಆದರೆ ತಾಯಿ ತಂದೆಯರಿಗೆ ಹಿಂಸೆ ಕೊಟ್ಟ ವ್ಯಕ್ತಿ ಜೀವನದಲ್ಲಿ ಗೆಲುವು ಸಾಧಿಸಿದ ಉದಾಹರಣೆಯಿಲ್ಲ. ಇಂದಿನ ಕಾಲದಲ್ಲಿ ವೃದ್ಧಾಶ್ರಮಗಳು ಬೆಳೆಯುವುದಕ್ಕಿಂತ ಸರ್ವರ ಕುಟುಂಬದಲ್ಲಿ ಪ್ರೀತಿ ಬೆಳೆದು ಶಾಂತಿ, ಜೀವನ ನಮ್ಮದಾಗಬೇಕೆಂದು ಕರೆಕೊಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಮೇಶ ಬಿರಾದಾರ ಮಾತನಾಡುತ್ತಾ ಪ್ರತಿ ಸೋಮವಾರ ಶಿವಾನುಭವಗೋಷ್ಠಿಯು ನಡೆಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಇಂತಹ ಕಾರ್ಯಕ್ರಮಗಳಿಂದ ಸಮಾಜ ಒಳ್ಳೆಯ ಹಾದಿಯತ್ತಸಾಗುತ್ತದೆ. ಈ ಶಿವಾನುಭವಗೋಷ್ಠಿಯು ಮುಂದೊಂದು ದಿನ ಉತ್ತಮ ಸಮಾಜ ನಿರ್ಮಾಣಕ್ಕೆ ಬುನಾದಿಯಾಗುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಸಂಚಾಲಕರಾದ ಸಂಗಮೇಶ ಹೂಗಾರ ಪ್ರಾರ್ಥಿಸಿದರು, ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ನಿರೂಪಿಸಿದರು, ಶಿಕ್ಷಕರಾದ ದೇವಯ್ಯ ಗುತ್ತೇದಾರ ಸ್ವಾಗತಿಸಿದರು, ಶಿಕ್ಷಕರಾದ ಅಂಬಾರಾಯ ಮಡ್ಡೆ ವಂದಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮಠದ ಕಾರ್ಯದರ್ಶಿಗಳಾದ ಬಸಯ್ಯಾ ಶಾಸ್ತ್ರಿ, ಶಿವಕುಮಾರ ಗಣಜಲಖೇಡ, ಸಂಗೀತ ಶಿಕ್ಷಕರಾದ ಶರಣಯ್ಯ ಸ್ವಾಮಿ, ಸುಶಿಲಾಬಾಯಿ ಅಬಟೆ, ಸೌಮ್ಯ, ರಮೇಶ ಪಾಟೀಲ ಸೇರಿದಂತೆ ಶ್ರೀ ಮಠದ ಅನೇಕ ಭಕ್ತರೂ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here