ಚಿಂಚೋಳಿ: ಕಟ್ಟಡ ಕಾರ್ಮಿಕರ ನೂತನ ಮಸೂದೆ ವಿರೋಧಿಸಿ ಇಂದು ತಾಲ್ಲೂಕಿನ ಕೂಡ್ಲಿ ಗ್ರಾಮದ ನಾಡ ಕಚೇರಿ ಕೇಂದ್ರದ ಎದುರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್ ಕೇಂದ್ರ ಸರಕಾರದ ಸಮಾಜಿಕ ಸುರಕ್ಷತಾ ಮಸೂದೆ ಕೈ ಬಿಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು,
ಪ್ರತಿಭಟನೆಯಲ್ಲಿ ಸಂಘಟನೆಯ ಶರಣಪ್ಪ ಎಸ್ ತಿಪ್ಪಣ್ಣ ಮಾತನಾಡಿ ಕಟ್ಟಡ ಕಾರ್ಮಿಕರ ಆದಾಯ ಗಣನಿಯವಾಗಿ ಕಡಿಮೆಯಾಗಿದ್ದು, ಇಂತ ಸ್ಥಿತಿಯಲ್ಲಿ ಶಾಲೆಗಳ ದುಬಾರಿ ಶುಲ್ಕ ಭರಿಸದೇ ಕಾರ್ಮಿಕರ ಮಕ್ಕಳು ಶಾಲೆಯಿಂದ ವಂಚಿತರಾಗಿಗುತ್ತಿದ್ದಾರೆ.
ತಾಲ್ಲೂಕಿನ ಕಟ್ಟಡ ಕಾರ್ಮಿಕರು ಮದುವೆ, ಅಪಘಾತ, ಅಂಗವಿಕಲತೆ ಪಿಂಚಣಿಗಾಗಿ ಅರ್ಜಿ ಸಲ್ಲಿಸಿ ಹಲವಾರು ತಿಂಗಳು ಕಳೆದರು, ಸಲ್ಲಿಸಿದ ಅರ್ಜಿ ಸ್ಥಿತಿ ಇದುವರೆಗೆ ತಿಳಿಯುತ್ತಿಲ್ಲ. ಅರ್ಜಿ ಪರಿಶೀಲನೆ ಹೆಸರಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದರು.
ಕಟ್ಟಡ ಕಾರ್ಮಿಕ ಈ ಮಸೂದೆ ಕೈ ಬಿಡಲು ಕೇಂದ್ರ ಸರಕಾರಕ್ಕೆ ಒತ್ತಾಯಕ್ಕೆ ಆಗ್ರಹಿಸಿ ತಾಲ್ಲೂಕು ತಹಶೀಲ್ ಮೂಲಕ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಶರಣಪ್ಪ ಬಿ ಉಪ್ಪಾರ, ಝರಣಪ್ಪ ವಿ. ಉಪ್ಪಾರ, ವಿಜಯಕುಮಾರ ಸಾಗರ, ರಾಜೇಶ್ ಪಾಟೀಲ, ಸೇರಿದಂತೆ ಮುಂತಾದವರು ಇದ್ದರು.