ಶಹಾಬಾದ : ಧರ್ಮ ಸ್ಥಾಪನೆಗಾಗಿ ಜನ್ಮ ತಾಳಿದ ಶ್ರೀಕೃ?ನು, ಭಗವದ್ಗೀತೆಯಲ್ಲಿ ಧರ್ಮ ಸ್ಥಾಪನೆ ಕುರಿತು ಬೋಧನೆ ಮಾಡಲಾಗಿದೆ. ವಿಶ್ವಕ್ಕೆ ದಾರಿ ತೋರಿಸುವ ನಿಟ್ಟಿನಲ್ಲಿ ಭಗವದ್ಗೀತೆಯ ಮೂಲಕ ನೀಡಿದ ಶ್ರೀಕೃಷ್ಠನ ಸಂದೇಶಗಳು ಮಾನವಕುಲಕ್ಕೆ ದಾರಿದೀಪವಾಗಿವೆ ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.
ಅವರು ಶುಕ್ರವಾರ ನಗರಸಭೆಯಲ್ಲಿ ಶ್ರೀಕೃಷ್ಠ ಜನ್ಮಾಷ್ಠಮಿ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನಗರಸಭೆಯ ಪೌರಾಯುಕ್ತ ಅಶೋಕ ಬಿಲಗುಂದಿ ಮಾತನಾಡಿ,ಭಗವಾನ್ ಶ್ರೀಕೃ? ಜನ್ಮತಾಳಿದ ಯುಗದಲ್ಲಿ ಆಡಳಿತ ವ್ಯವಸ್ಥೆ ಮತ್ತು ಆ ಸಂದರ್ಭದಲ್ಲಿದ್ದ ಅಧರ್ಮ ಹೋಗಲಾಡಿಸಲು ಜನ್ಮ ತಾಳಿದ್ದಾನೆ. ಆಗಿನ ಸಮಾಜದಲ್ಲಿ ಧರ್ಮ ಸ್ಥಾಪನೆ ಮಾಡಿ ಧರ್ಮ ಮತ್ತು ಸತ್ಯ ಎಂದಿಗೂ ಸೋಲುವುದಿಲ್ಲ. ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ನಡೆದರೆ ಮಾತ್ರ ಜಯ ಸಾಧ್ಯ ಎಂಬ ತತ್ವವನ್ನು ಶ್ರೀಕೃ? ಸಾರಿದ್ದಾರೆ ಎಂದರು.
ನಗರಸಭೆಯ ಉಪಾಧ್ಯಕ್ಷೆ ಸಲೀಮಾಬೇಗಂ, ನಗರಸಭೆಯ ವ್ಯವಸ್ಥಾಪಕ ಶಂಕರಗೌಡ ಪಾಟೀಲ, ಎಇಇ ಮುಜಾಮಿಲ್, ಎಇ ಶಾಂತರೆಡ್ಡಿ ದಂಡಗುಲಕರ್, ಮುತ್ತಣ್ಣ ಭಂಡಾರಿ, ಸುನೀಲ ವೀರಶೆಟ್ಟಿ, ರಘುನಾಥ ನರಸಾಳೆ,ಶಬಾನಾಬೇಗಂ, ಶಿವಾನಂದ ಜಾಮಗೊಂಡ, ಸುರೇಶ ಇತರರು ಇದ್ದರು.