ಸುರಪುರ: ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರಿಗೆ ಸಚಿವ ಯಡಿಯೂರಪ್ಪನವರ ಸಂಪುಟದಲ್ಲಿ ಸಚಿವ ಸ್ಥಾನ ದೊರೆಯಲೆಂದು ಅವರ ಅಭಿಮಾನಿಗಳು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ನಗರದ ಮುದಕಿ ಮರೆಮ್ಮ ದೇವಸ್ಥಾನದಲ್ಲಿ ಒಂದು ನೂರಾ ಒಂದು ಟೆಂಗಿನ ಕಾಯಿಗಳ ಹೊಡೆಯುವ ಮೂಲಕ ದೇವಿಯಲ್ಲಿ ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ ಮುಖಂಡ ಬಲಭೀಮನಾಯಕ ಬೈರಿಮರಡಿ ಮಾತನಾಡಿ,ನಮ್ಮ ಶಾಸಕರಾದ ರಾಜುಗೌಡ ಅವರು ಮೂರು ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃಧ್ಧಿಗೆ ಹಲವಾರು ಕೊಡುಗೆ ನೀಡಿದ್ದಾರೆ.ಅಲ್ಲದೆ ಹಿಂದೆ ಸದಾನಂದಗೌಡರ ಸಂಪುಟದಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿ ರಾಜ್ಯದಲ್ಲಿನ ಸಣ್ಣ ಕೈಗಾರಿಕೆಗಳ ಅಭೀವೃಧ್ಧಿಗೆ ಕೊಡುಗೆ ನೀಡಿದ್ದಾರೆ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿ ಜಿಲ್ಲೆಯ ಅಭೀವೃಧ್ಧಿ ಮಾಡಿದ್ದಾರೆ.
ಈಗ ಮತ್ತೆ ಮಾನ್ಯ ಯಡಿಯೂರಪ್ಪನವರ ಸರಕಾರ ಆಡಳಿತಕ್ಕೆ ಬಂದಿದ್ದು,ಈಗಲು ರಾಜುಗೌಡರಿಗೆ ಸಚಿವ ಸ್ಥಾನ ಸಿಗಲೆಂದು ದೇವಿ ಮರೆಮ್ಮನವರಲ್ಲಿ ಪ್ರಾರ್ಥಿಸುತ್ತೆವೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ಹಾಗು ಬಿಜೆಪಿ ವರಿಷ್ಠರಲ್ಲಿಯೂ ಸಚಿವ ಸ್ಥಾನ ನೀಡುವಂತೆ ವಿನಂತಿಸುವುದಾಗಿ ತಿಳಿಸಿದರು. ಯುವ ಮುಖಂಡ ರವಿ ನಾಯಕ ಮಾತನಾಡಿ,ರಾಜುಗೌಡರಿಗೆ ಸಚಿವ ಸ್ಥಾನ ಸಿಗಲೆಂದು ಇಂದು ದೇವಿಗೆ ಒಂದು ನೂರಾ ಒಂದು ಟೆಂಗಿನ ಕಾಯಿ ಒಡೆದು ಪ್ರಾರ್ಥಿಸುತ್ತಿದ್ದೆವೆ.ಮುಂದೆ ಸಚಿವರಾದ ನಂತರ ಮರೆಮ್ಮ ದೇವಿಯ ಗುಡಿಯವರೆಗೆ ದೀಡ ನಮಸ್ಕಾರ ಹಾಕುವುದಾಗಿ ಹರಕೆ ಹೊತ್ತರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶರಣು ನಾಯಕ ಬೈರಿಮಡ್ಡಿ,ವೆಂಕಟೇಶ ನಾಯಕ ಬೈರಿಮಡ್ಡಿ,ಬಸವರಾಜ ಕೊಡೇಕಲ್,ನರಸಪ್ಪ ಚಾಮನಾಳ,ಮಲ್ಲು ನಾಯಕ ಕಬಾಡಗೇರಾ,ರತನಸಿಂಗ ಠಾಕೂರ,ಕಾಮಣ್ಣ ನಾಯಕ ದೊರೆ,ಸಂತೋಷ ನಾಯಕ ಬೈರಿಮಡ್ಡಿ,ವಾಸುದೇವ ನಾಯಕ,ದೇವು ಕಬಾಡಗೇರಾ,ಹಾಜಿ ಮಲಾಂಗ,ಜಾಕೀರ್ ಹುಸೇನ,ಹಣಮಂತ ನಾಯಕ ಸೇರಿದಂತೆ ಅನೇಕರಿದ್ದರು.