ಸುರಪುರ: ರಾಜ್ಯದಲ್ಲಿನ ಅನೇಕ ರಂಗಗಳ ಅಭಿವೃಧ್ಧಿಗಾಗಿ ಫೇವರ್ಡ ಒಕ್ಕೂಟ ಯೋಜನೆಯನ್ನು ರೂಪಿಸಲಿದೆ. ಅದರಂತೆ ಹಿಂದುಳಿದ ಯಾದಗಿರಿ ಜಿಲ್ಲೆಯ ಅಭಿವೃಧ್ಧಿಯಲ್ಲಿ ಫೇವರ್ಡ ಒಕ್ಕೂಟ ಶ್ರಮವಹಿಸಲಿದೆ ಎಂದು ರಾಜ್ಯ ಫೇವರ್ಡ ಒಕ್ಕೂಟದ ಕಾರ್ಯದರ್ಶಿ ಮಹಾಂತೇಶ ಅಗಸಿಮುಂದಿನ ಮಾತನಾಡಿದರು.
ತಾಲ್ಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ವಿಶ್ವಗಂಗಾ ಸಂಸ್ಥೆಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಯಾದಗಿರಿ ಜಿಲ್ಲಾ ಫೇವರ್ಡ ಒಕ್ಕೂಟದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ನಾಡಿನ ಷಿ,ಕಾರ್ಮಿಕ,ಮಹಿಳಾ,ಶಿಕ್ಷಣ,ಕಲೆ,ಸಾಂಸ್ಕೃತಿಕ ಸೇರಿದಂತೆ ಹಲವಾರು ರಂಗಗಳ ಅಭೀವೃಧ್ಧಿಗೆ ಅನೇಕ ಸಂಘ ಸಂಸ್ಥೆಗಳಿಂದ ಕೂಡಿದ ಫೇವರ್ಡ ಒಕ್ಕೂಟವು ಶ್ರಮಿಸಲಿದೆ.ಸರಕಾರಗಳು ಮತ್ತು ಅನೇಕ ಜನ ಉದ್ಯಮಿಗಳು ಹಾಗು ಸಮಾಜ ಸೇವಾ ಆಕಾಂಕ್ಷಿಗಳು ವಿವಿಧ ರಂಗಗಳ ಅಭಿವೃಧ್ಧಿಗಾಗಿ ರೂಪಿಸುವ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಫೇವರ್ಡ ಶ್ರಮಿಸಲಿದೆ ಎಂದರು.
ಯಾದಗಿರಿ ಜಿಲ್ಲೆಯು ಹಿಂದುಳಿದ ಜಿಲ್ಲೆಯಾಗಿದ್ದು,ಈ ಜಿಲ್ಲೆಯಲ್ಲಿನ ಕೆರೆಗಳ ಅಭೀವೃಧ್ಧಿಗಾಗಿ ಈಗಾಗಲೇ ಯೋಜನೆ ರೂಪಿಸಿ ಸರಕಾರಕ್ಕೆ ಕಳುಹಿಸಲಾಗಿದೆ. ಮುಂದೆ ಅವುಗಳನ್ನು ಅನುಷ್ಠಾನಗೊಳಿಸಲಾಗುವುದು. ಅದರಂತೆ ಇನ್ನು ಅನೇಕ ಸಮಸ್ಯೆಗಳನ್ನು ಕೂಡ ಸರಕಾರದ ಗಮನಕ್ಕೆ ತರುವ ಮೂಲಕ ಜಿಲ್ಲೆಯ ಅಭಿವೃಧ್ಧಿಯನ್ನು ಫೇವರ್ಡ ಒಕ್ಕೂಟ ಮಾಡಲಿದೆ ಎಂದರು.
ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಫೇವರ್ಡ ನಿರ್ದೇಶಕ ಶಿವರಾಜ ನಾಯಕ,ಫೇವರ್ಡ ಒಕ್ಕೂಟದ ಜಿಲ್ಲಾಧ್ಯಕ್ಷ ರಾಹುಲ ಹುಲಿಮನಿ,ಚಂದಪ್ಪ ಯಾದವ,ಅಂಬ್ರೇಶ ಯಡಹಳ್ಳಿ,ಮಹ್ಮದ ಯಾಸಿನ್,ಬಸವರಾಜ ಅಗ್ನಿ,ಬಸವರಾಜ ಕುಂಬಾರ,ಸುನಿತಾ ಚವ್ಹಾಣ,ಅಚ್ಚಪ್ಪ ನೀರಡಗಿ,ಸಾದತ್ ಹುಸೇನ,ಮುಜೀಬ್ ಸೇರಿದಂತೆ ಅನೇಕರಿದ್ದರು.