ವಿಭಜನೆಯ ಭಯಾನಕತೆ-ಒಂದು ಚಿತ್ರಾತ್ಮಕ ಸ್ಮರಣೆ

0
15

ಕಲಬುರಗಿ; ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಕಂಡ ಭೀಕರತೆಯನ್ನು ಶರಣಬಸವ ವಿಶ್ವವಿದ್ಯಾಲಯದಲ್ಲಿ ಚಿತ್ರರೂಪದಲ್ಲಿ ಪ್ರಸ್ತುತಪಡಿಸಲಾಯಿತು ಮತ್ತು ಗೋದುತಾಯಿ ಮಹಿಳಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ವಿಭಜನೆಯ ಕೆಟ್ಟ ದಿನಗಳಲ್ಲಿ ಪತ್ರಿಕೆಗಳಲ್ಲಿ ಬಂದ ಭಾವನಾತ್ಮಕ ಚಿತ್ರಗಳ ಮೂಲಕ ಪ್ರಸ್ತುತಪಡಿಸಿದ ಭಯಾನಕತೆಯನ್ನು ಅತಿಥಿಗಳಿಗೆ ವಿವರಿಸಿದರು.

೧೯೭೧ ರಲ್ಲಿ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಕಮಾಂಡೋ ಕಾರ್ಯಾಚರಣೆಯ ಸಂದರ್ಭದಲ್ಲಿ ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿದ ರಾ?ಪತಿ ಸೇನಾ ಪದಕ ಪುರಸ್ಕೃತ ಸುಬೇದಾರ್ ಶಾಂತಯ್ಯ ಸ್ವಾಮಿ ಅವರು ಭೀಕರ ವಿಭಜನೆಯ ಹೃದಯ ವಿದ್ರಾವಕ ಛಾಯಾಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಂದ ಪ್ರತಿ ಛಾಯಾಚಿತ್ರದ ವಿವರಗಳನ್ನು ಕೇಳಿದರು. ಕಲಬುರಗಿಯ ೩೨ ಕರ್ನಾಟಕ ಬಟಾಲಿಯನ್ ಎನ್‌ಸಿಸಿಯ ಇನ್ನೋರ್ವ ಅತಿಥಿ ಸುಬೇದಾರ್ ಮೇಜರ್ ಫೂಲ್ ಚಂದ್ ಶರ್ಮಾ ಅವರೊಂದಿಗೆ ಉಪಸ್ಥಿತರಿದ್ದರು.

Contact Your\'s Advertisement; 9902492681

ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸುಬೇದಾರ್ ಶಾಂತಯ್ಯ ಸ್ವಾಮಿ ಅವರು ೧೯೭೧ರ ಭಾರತ ಪಾಕಿಸ್ತಾನದ ಯುದ್ಧದ ವೇಳೆ ಪಾಕಿಸ್ತಾನದ ಸೈನಿಕರ ತಂಡವನ್ನು ಹೊಂಚು ಹಾಕಿದ್ದ ಕಮಾಂಡೋ ಗುಂಪಿನ ನಾಯಕರಾಗಿ ತಮ್ಮ ಸಾಹಸಗಳನ್ನು ಸ್ಮರಿಸಿದರು, ಉಜ್ವಲ ಭವಿ?ಕ್ಕಾಗಿ ಭಾರತೀಯ ಸಶಸ್ತ್ರ ಪಡೆಗಳನ್ನು ಸೇರಲು ವಿದ್ಯಾರ್ಥಿಗಳು ಮುಂದೆ ಬರುವಂತೆ ಕರೆ ನೀಡಿದರು. ಇದರಿಂದ ರಾ? ಸೇವೆ ಮಾಡುವ ಅವಕಾಶ ಸಿಗುತ್ತದೆ ಎಂದರು.

ಸುಬೇದಾರ್ ಶಾಂತಯ್ಯ ಸ್ವಾಮಿ ಅವರು ಮಾತುಗಳನ್ನು ಮುಂದುವರೆಸಿ ತಮ್ಮ ಶಾಲಾ ದಿನಗಳಲ್ಲಿ ಸಶಸ್ತ್ರ ಪಡೆಗಳ ಸಾಧನೆಗೆ ಮಾರುಹೋಗಿದ್ದರು ಮತ್ತು ಅವರು ೮ ಮತ್ತು ೯ ನೇ ತರಗತಿಯಲ್ಲಿ ಓದುತ್ತಿದ್ದಾಗ ಓಅಅ ಯಲ್ಲಿ ಸೇರಿದ್ದರು ಹಾಗೂ ಆ ಓಅಅ ಪ್ರಮಾಣಪತ್ರಗಳೊಂದಿಗೆ ಅವರು ೧೯೬೧ ರಲ್ಲಿ ಮದ್ರಾಸ್ ರೆಜಿಮೆಂಟ್‌ಗೆ ಸೇರಿದರು. ಆಗ ಅವರ ಜೇಬಿನಲ್ಲಿ ಕೇವಲ ೫೦ ಪೈಸೆಗಳಿದ್ದವು. ಅವರು ಸಶಸ್ತ್ರ ಪಡೆಗಳನ್ನು ಸೇರಲು ಆಂಧ್ರಪ್ರದೇಶದ ಸಿಕಂದರಾಬಾದ್‌ಗೆ ಪ್ರಯಾಣ ಬೆಳೆಸಿದ್ದರು. ಊಟಿ (ಉದಗಮಂಡಲಂ) ನಲ್ಲಿರುವ ವೆಲ್ಲಿಂಗ್ಟನ್‌ನ ಮದ್ರಾಸ್ ರೆಜಿಮೆಂಟ್‌ನಲ್ಲಿ ಆರು ತಿಂಗಳ ತರಬೇತಿಯ ನಂತರ ಅವರನ್ನು ಇಂಡೋ-ಚೀನಾ ಗಡಿಯಲ್ಲಿ ನಿಯೋಜಿಸಲಾಯಿತು. ೧೯೬೧ ರಲ್ಲಿ ಇಂಡೋ-ಚೀನಾ ಯುದ್ಧದಲ್ಲಿ ಭಾಗವಹಿಸಿದ ನಂತರ, ಸುಬೇದಾರ್ ಅವರನ್ನು ಹಲವಾರು ಇತರ ಮುಂಚೂಣಿ ಪ್ರದೇಶಗಳಿಗೆ ವರ್ಗಾಯಿಸಲಾಯಿತು. ೧೯೬೫ರ ಇಂಡೋ-ಪಾಕಿಸ್ತಾನ್ ಯುದ್ಧದಲ್ಲಿ ಅವರು ಪಾಲ್ಗೊಂಡು ನಂತರ ಬಾಂಗ್ಲಾದೇಶವನ್ನು ರಚಿಸಲಾದ ೧೯೭೧ರ ಇಂಡೋ-ಪಾಕಿಸ್ತಾನ್ ಯುದ್ಧದಲ್ಲಿಯೂ ಕೂಡ ಪಾಲ್ಗೊಂಡಿದ್ದರು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ.ವಿ.ಡಿ.ಮೈತ್ರಿ, ಕುಲಸಚಿವ ಡಾ.ಅನಿಲಕುಮಾರ ಬಿಡವೆ ಹಾಗೂ ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ವಿಭಾಗದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here