ಹೊಸ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಎಸ್‌ಯುಸಿಐದಿಂದ ಬೃಹತ್ ಪ್ರತಿಭಟನೆ

0
47

ಶಹಾಬಾದ: ನಗರದ ವಾಡಿ ಕ್ರಾಸ್ ನಿಂದ ಮರಗೋಳ ಕಾಲೇಜ್ ವೃತ್ತದವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಅದನ್ನು ಕೂಡಲೇ ಹೊಸ ರಸ್ತೆ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಸೋಮವಾರ ಎಸ್.ಯು.ಸಿ.ಐ. (ಸಿ) ಪಕ್ಷದ ವತಿಯಿಂದ ಬಸವೇಶ್ವರ ವೃತ್ತದಲ್ಲಿ ಬೃಜತ್ ಪ್ರತಿಭಟನೆ ನಡೆಸಿದರು.

ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಕಾರ್ಯದರ್ಶಿ ಗಣಪತರಾವ.ಕೆ. ಮಾತನಾಡಿ, ಮಾನೆ ಜನಪ್ರತಿನಿಧಿ ಹಾಗೂ ನಗರಸಭೆಯ ವೈಫಲ್ಯದಿಂದ ಶಹಾಬಾದ ನಗರದ ವಾಡಿ ಕ್ರಾಸ್ ನಿಂದ ಮರಗೋಳ ಕಾಲೇಜ್ ವೃತ್ತದವರೆಗಿನ ನಿರ್ಮಾಣ ಹಂತದಲ್ಲಿರುವ ರಾಜ್ಯ ಹೆದ್ದಾರಿ ರಸ್ತೆ ತೀವ್ರಕಳಪೆ ಗುಣಮಟ್ಟದಿಂದ ಕಾiಗಾರಿ ಮಾಡಿದ್ದಾರೆ.ಇದರ ಪರಿಣಾಮ ರಸ್ತೆ ನಿರ್ಮಾಣದ ಹಂತದಲ್ಲೇ ನೂರಾರು ತಗ್ಗುಗಳು ನಿರ್ಮಾಣವಾಗಿವೆ.ಇದರಿಂದ ಸಾರ್ವಜನಿಕರಿಗೆ ಎಲ್ಲಿಲ್ಲದ ತೊಂದರೆಯಾಗುತ್ತಿದೆ. ನಗರದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಸ್ತೆ ಕಾಮಗಾರಿ ನಿಂತು ಸುಮಾರು ೪ ವರ್ಷಗಳಾಗುತ್ತ ಬಂದರೂ ಯಾವುದೇ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳುತ್ತಿಲ್ಲ. ನಾಲ್ಕು ವರ್ಷದಿಂದ ತಗ್ಗು, ದೂಳಿನಿಂದ ಸಾರ್ವಜನಿಕರು ಪಡಬಾರದ ಕಷ್ಟ ಪಟ್ಟಿದ್ದಾರೆ.ನೂರಾರು ಜನರಿಗೆ ಅಪಘಾತಗಳಾಗಿವೆ.ಇಂತಹ ಕೆಟ್ಟ ರಸ್ತೆ ನೋಡಿ ಸಾರ್ವಜನಿಕರು ಸ್ಥಳೀಯ ಶಾಸಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಆದರೂ ಇಲ್ಲಿನ ಶಾಸಕರು ಕ್ಯಾರೇ ಎನ್ನುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕೇವಲ ಉತ್ತಮ ರಸ್ತೆ ನಿರ್ಮಾಣ ಮಾಡುತ್ತೆವೆ ಎಂದು ಆಕಾಶ ತೋರಿಸುತ್ತಿದ್ದಾರೆ ಹೊರತು ಭರವಸೆ ಮಾತ್ರ ಈಡೇರಿಸುವುದಕ್ಕೆ ಮುಂದಾಗುತ್ತಿಲ್ಲ.ಅಲ್ಲದೇ ಮತ್ತೆ ಕೋಟಿಗಟ್ಟಲೇ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳುತ್ತಿದ್ದಾರೆ.ಆದರೆ ಈ ಹಿಂದಿನ ಅನುದಾನ ಗುತ್ತಿಗೆದಾರನಿಗೆ ಬಿಲ್ ತಡೆಹಿಡಿಯುವ ಬದಲಿಗೆ ಬಿಲ್ ಪಾವತಿ ಮಾಡಲಾಗಿದೆ ಏಕೆ? ಸರಕಾರದ ಹಣವನ್ನು ಪೋಲು ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ ಎಸ್. ಇಬ್ರಾಹಿಂಪೂರ ಮಾತನಾಡಿ, ನಗರದೊಳಗೆ ಬರುವ ಸ್ವಾಗತ ಕಮಾನನಿಂದ ರೇಲ್ವೆ ಸೇತುವೆ ಬಳಿಯ ೪೦೦ ಮೀಟರ್ ರಸ್ತೆ ಕಾಂಗಾರಿ ಮಾಡಿ ವಾರಗಳಾಗಿಲ್ಲ ಸಂಪರ್ಣ ಹರಿದು ಚಿಂದಿಯಾಗಿದೆ.ಇದಕ್ಕೆ ಇಲ್ಲಿ ನಡೆದಿರುವ ಕಳಪೆ ಕಾಮಗಾರಿಯೇ ಸಾಕ್ಷಿ. ಆನಪ್ರತಿನಿಧಿಗಳು ತಮ್ಮ ಕಾರ್ಯಕರ್ತರಿಗೆ, ಅನುಭವವಿಲ್ಲದ ಗುತ್ತಿಗೆದಾರನಿಗೆ ಕೆಲಸ ಕೊಡಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಹಾಳು ಮಾಡುತ್ತಿದ್ದಾರೆ.ಅಲ್ಲದೇ ಸರಕಾರದ ಹಣ ಪೋಲೂ ಮಾಡಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡುತ್ತಿರುವುದು ಮಾತ್ರ ದುರದೃಷ್ಟಕರ್ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಗುತ್ತಿಗೆದಾರನ ಬಿಲ್ ತಡೆಹಿಡಿದು, ಹೊಸ ರಸ್ತೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.

ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಶಹಾಬಾದ ಸ್ಥಳೀಯ ಸಮಿತಿಯ ಸದಸ್ಯ ರಾಘವೇಂದ್ರ ಎಮ್.ಜಿ, ಜಗನ್ನಾಥ ಎಸ್.ಹೆಚ್, ಗುಂಡಮ್ಮ ಮಡಿವಾಳ, ರಾಜೇಂದ್ರ ಆತ್ನೂರು ಹಾಗೂ ನಿಂಗಣ್ಣ ಜಂಬಗಿ ಅವರು ಮಾತನಾಡಿದರು.

ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಗರಸಭೆಯ ಆಯುಕ್ತ ಅಶೋಕ ಬಿಲಗುಂದಿ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಮನವಿಪತ್ರ ಸ್ವೀಕರಿಸಿದ ಆಯುಕ್ತರು ಮೂರು ತಿಂಗಳು ಒಳಗಾಗಿ ಹೊಸ ರಸ್ತೆಯನ್ನು ನಿರ್ಮಿಸುವ ಭರವಸೆಯನ್ನು ನೀಡಿದ ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ವಾಪಸ್ ಪಡೆಯಲಾಯಿತು.

ಈ ಪ್ರತಿಭಟನೆಯಲ್ಲಿ ಪಕ್ಷದ ಸದಸ್ಯರಾದ ಸಿದ್ದು ಚೌದರಿ, ಮಹಾದೇವಿ ಮಾನೆ, ನೀಲಕಂಠ ಹುಲಿ,ರಮೇಶ ದೇವಕರ್, ಕಿರಣ ಮಾನೆ, ರಘು ಪವಾರ್, ರಘು ಮಾನೆ, ಅಂಭಿಕಾ ಆರ್.ಜೆ, ಮಹಾದೇವಿ ಆತ್ನೂರ್, ರಾಧಿಕಾ ಚೌದರಿ, ತಿಮ್ಮಣ್ಣ ಮಾನೆ, ಅಜಯ ಗುರಜಾಲಕರ್, ನಾಗರಿಕರಾದ ನಾಸಿರ್ ಸೇಠ, ರುಕುಮ್ ಪಟೇಲ್, ಭಾಷಾ, ಎಮ್.ಟಿ ಖಾಜಾ, ಮಹೆಬೂಬ್, ಯಲ್ಲಪ್ಪ ಬೊಂಬಾಯಿ, ದೊಡ್ಡ ದುರ್ಗಣ್ಣ, ಶಂಕರ.ಬಿ.ಡಿ, ಹನುಮಂತ.ಡಿ. ಹಾಗೂ ನೂರಾರು ಜನ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here