ರಾಷ್ಟ್ರಾಭಿಮಾನ ಗೀತೆಗಳು ನಾಡು, ದೇಶ ಕಟ್ಟಲು ಸಹಕಾರಿ: ಸ್ವಾಮೀಜಿ

0
163

ಆಳಂದ: ರಾಷ್ಟ್ರಾಭಿಮಾನ ಸಾರುವ ದೇಶಭಕ್ತಿ ಗೀತೆಗಳು ನಾಡು, ದೇಶ ಕಟ್ಟಲು ಸಹಕಾರಿ ಎಂದು ಖಜೂರಿ ಕೋರಣೇಶ್ವರ ಮಠದ ಪೀಠಾಧಿಪತಿ ಮುರುಘೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಜರುಗಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರ ಸಮಾವೇಶ ಹಾಗೂ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಇಂದು ಬರಿ ಶಿಕ್ಷಕರ ಮೀಲಾಪ ಶಿಬಿರಗಳು ನಡೆಸಿದರೆ ಸಾಲದು, ಇಲ್ಲಿ ತರಬೇತಿಗಳು ಪಡೆದವರು ತಮ್ಮ ಶಾಲಾಗಳಲ್ಲಿ ಶಾಖೆಗಳು ತೆರೆದು ಅಲ್ಲಿನ ಮಕ್ಕಳಿಗೆ ನಾಡು, ದೇಶದ ಇತಿಹಾಸ, ಸಂಸ್ಕೃತಿ ಜತೆಗೆ ಸ್ವಾತಂತ್ರ್ಯ ಹೋರಾಟಕ್ಕಾಗಿ ತ್ಯಾಗ ಮತ್ತು ಬಲಿದಾನಗೈದ ವೀರರ ಬಗ್ಗೆ ಹೇಳಿಕೊಡಬೇಕು ಎಂದು ಸಲಹೆ ನೀಡಿದ ಅವರು, ಭಾರತ ಸೇವಾದಳ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಎನ್‌ಎಸ್‌ಎಸ್ ಇವುಗಳ ಬಗ್ಗೆ ತಿಳಿಸದರೆ ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ತರಬೇತಿ ಪಡೆದ ಶಿಕ್ಷಕರು ಪ್ರಯತ್ನಿಸಬೇಕು ಎಂದರು.

Contact Your\'s Advertisement; 9902492681

ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡರಂಗಪ್ಪ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಚನ್ನವೀರಯ್ಯ ಸ್ವಾಮಿ, ತಾಲೂಕು ಕಾರ್ಯದರ್ಶಿ ಅಪ್ಪಾಸಾಹೇಬ ತೀರ್ಥೆ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಡಾ| ರಾಜಕುಮಾರ ಪಾಟೀಲ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಕಾರ್ಯದರ್ಶಿ ನರಸಪ್ಪ ಬಿರಾದಾರ ಇವರು ಸಮಾವೇಶದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ದೈಹಿಕ ಶಿಕ್ಷಣಾಧಿಕಾರಿ ನೀಲಕಂಠಪ್ಪ ಸುಂದರಕರ್, ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಣಪ್ಪ ಸಂಗನ, ಶಿಕ್ಷಕ ಶರಣಬಸಪ್ಪ ವಡಗಾಂವ, ವೆಂಕಟೇಶ ಮರಾಠೆ, ಶ್ರೀದೇವಿ ಪಾಟೀಲ್, ಶರಣಪ್ಪ ಮನಗೋಳಿ, ಮುಖಂಡ ಕಲ್ಯಾಣಿ ತುಕಾಣೆ ಸೇರಿ ಇತರರು ಭಾಗವಹಿಸಿದರು.

ಸಂಗೀತ ಶಿಕ್ಷಕ ಶಂಕರ ಹೂಗಾರ ಹಾಡುಗಳು ಹೇಳುವ ಲಯ, ತಾಳ ಸೇರಿದಂತೆ ಪದ್ದತಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಬಳಿಕ ತೇಲಾಕುಣಿ, ಆಳಂದ, ಪಡಸಾವಳಿ, ಮೋಘಾ (ಕೆ), ತಡಕಲ್ ಸೇರಿದಂತೆ ಇತರೆ ಶಾಲೆಗಳ ಮಕ್ಕಳು ದೇಶಭಕ್ತಿ ಗೀತೆಗಳು ಹಾಡುವ ಮೂಲಕ ಗಮನ ಸೆಳೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here