ಯಾದಗಿರಿ: ಅಖಿಲ ಕರ್ನಾಟಕ ಕುಳುವ ಮಹಾಸಂಘದ (ಕೊರಮ, ಕೊರಚ ಸಮುದಾಯಗಳ ಸಂಘಟನೆ) ಜಿಲ್ಲಾ ಘಟಕದ ಅದ್ಯಕ್ಷರಾಗಿ ಬಸವರಾಜ ಭಜಂತ್ರಿ ಗಂಗನಾಳ ಆಯ್ಕೆಯಾದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಆನಂದಕುಮಾರ ಏಕಲವ್ಯ ಅದ್ಯಕ್ಷತೆಯಲ್ಲಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜರುಗಿದ ರಾಜ್ಯ ಸಮಿತಿ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಇನ್ನುಳಿದ ಪದಾಧಿಕಾರಿಗಳಾಗಿ: ಭೀiರಾಯ ಭಜಂತ್ರಿ ರಂಗಂಪೇಟ (ಗೌರವ ಸಲಹೆಗಾರರು) ಮೌನೇಶ ಭಜಂತ್ರಿ ಕಕ್ಕೇರಾ (ಗೌರವ ಅಧ್ಯಕ್ಷರು) ಹನುಮಂತ ಭಜಂತ್ರಿ ಶಿರವಾಳ (ಕಾರ್ಯಧ್ಯಕ್ಷ), ಭೀಮಾರಾಯ ಭಜಂತ್ರಿ ಸಗರ, ಮಲ್ಲಪ್ಪ ಮಾಸ್ತರ ಯಡ್ಡಳ್ಳಿ, ಮರಿಯಪ್ಪ ಭಜಂತ್ರಿ ಯಾದಗಿರಿ, (ಉಪಾಧ್ಯಕ್ಷರು) ಭೀಮಾಶಂಕರ ಭಜಂತ್ರಿ ಹಾಲಗೇರಾ ತ ಸುರಪೂರ (ಪ್ರ. ಕಾರ್ಯದರ್ಶಿ), ಬಸವರಾಜ ಭಜಂತ್ರಿ ಚಟ್ನಳ್ಳಿ ತಾ. ಶಹಾಪೂರ (ಖಜಾಂಚಿ), ಗುರುಸ್ವಾಮಿ ಹೊಸಕೇರೆ ತಾ. ಶಹಾಪೂರ, ಭೀಮಾರಾಯ ಭಜಂತ್ರಿ ಲಕ್ಷ್ಮೀಪೂರ ತಾ. ಸುರಪೂರ, ಬಸವರಾಜ ಭಜಂತ್ರಿ ಯಡ್ಡಳ್ಳಿ ತಾ. ಸುರಪೂರ, ಶ್ರೀ ಬಸವರಾಜ ಯಲ್ಲೇರಿ ತಾ. ಗುರುಮಿಠಕಲ್, (ಜಂಟಿ ಕಾರ್ಯದರ್ಶಿಗಳು) ಸಿದ್ದು ಭಜಂತ್ರಿ ಹೆಡಗಿಮದ್ರಿ, ಸಾಯಿಬಣ್ಣ ಭಜಂತ್ರಿ ವಾಗಣಗೇರಾ ತಾ. ಸುರಪೂರ, ಹನುಮಂತ ಭಜಂತ್ರಿ ಗೋಗಿ (ಸಂಘಟನಾ ಕಾರ್ಯದರ್ಶಿಗಳು) ಆಯ್ಕೆಯಾದರು.
ಈ ಸಂದರ್ಭದಲ್ಲಿ ರಜ್ಯ ಕಾರ್ಯದರ್ಶಿಗಳಾದ ಕಿರಣಕುಮಾರ ಕೊತ್ತಗೆರೆ, ರಂಗಸ್ವಾಮಿ ಹಾಸನ, ರಾಜ್ಯ ಸಂಚಾಲಕಿ ಶ್ರೀಮತಿ ಭೀಮಪುತ್ರಿ ನಾಗಮ್ಮ, ರವಿಕುಮಾರ ಥಣಿಸಂದ್ರ ಬೆಂಗಳೂರು, ಕಲಬುರ್ಗಿ ಜಿಲ್ಲಾ ಮಾಜಿ ಅಧ್ಯಕ್ಷ ಜೆ.ಎಚ್. ಭಜಂತ್ರಿ, ಮಾನವಿ ಬಸವರಾಜ, ರಾಯಚೂರು ಜಿಲ್ಲಾದ್ಯಕ್ಷ ನರಸಿಂಹಲು ಕಮಲಾಪುರ, ತಿಪ್ಪಣ್ಣ ಭಜಂತ್ರಿ ಹೊಸಕೆರೆ, ಸೋಪಣ್ಣ ಭಜಂತ್ರಿ ಸಗರ, ದೊಡ್ಡ ಯಲ್ಲಪ್ಪ ಬಜಂತ್ರಿ, ಭೀಮರಾಯ ಭಜಂತ್ರಿ ಕಾಮನಟಗಿ ಉಪಸ್ಥಿತರಿದ್ದರು.