ಸಿರಿ ಧಾನ್ಯಗಳನ್ನು ಸೇವಿಸಿ ಬದುಕಿನಲ್ಲಿ ಆರೋಗ್ಯವಾಗಿರಿ

0
71

ಶಹಾಬಾದ:ಇಂದಿನ ಒತ್ತಡದ ಜೀವನದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ.ನಮ್ಮ ಆಹಾರ ಪದ್ದತಿ ಖಂಡಿತ ನಮ್ಮನ್ನು ಆರೋಗ್ಯವಂತರನ್ನಾಗಿಸುವುದಲ್ಲದೇ ಧೀರ್ಘಾಯುಷಿಗಳನ್ನಾಗಿ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಿರಿಧಾನ್ಯಗಳನ್ನು ದಿನ ನಿತ್ಯದ ಆಹಾರದಲ್ಲಿ ಬಳಸಿ ಆರೋಗ್ಯವಾಗಿರಿ ಎಂದು ಜಿಲ್ಲಾ ಕ.ಸಾ.ಪ ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗ ಬಾಳಿ ಹೇಳಿದರು. ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜ್ಞಾನವಿಕಾಸ ರುಕ್ಮಿಣಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಸಿರಿಧಾನ್ಯಗಳ ಬಳಕೆಯ ಮಾಹಿತಿ ಹಾಗೂ ಉಡಿತುಂಬುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಇಂದಿನ ಜಂಕ್ ಫುಡ್ ಯುಗದಲ್ಲಿ ಸಿರಿಧಾನ್ಯಗಳ ಬಳಕೆ ಹಾಗೂ ಅವುಗಳ ಮಹತ್ವದ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ನಮ್ಮ ಅಜ್ಜ ಮುತ್ತಜ್ಜನ ಕಾಲದಲ್ಲಿ ಪ್ರತಿಯೊಬ್ಬರೂ ಸಿರಿಧಾನ್ಯಗಳಾದ ಜೋಳ,ಸಜ್ಜೆ,ರಾಗಿ,ನವಣೆ,ಊದಲು,ಬರಗು,ಕೊರಲೆ,ಹಾರಕ,ಸಾಮೆ ಯಂತಹ ಆಹಾರ ಧಾನ್ಯಗಳನ್ನು ತಮ್ಮ ನತ್ಯ ಜೀವನದಲ್ಲಿ ಬಳಸಿ ಧೀರ್ಘಾಯುಷಿಗಳಾಗಿರುತ್ತಿದ್ದರು. ಅವರಿಗೆ ಯಾವುದೇ ಖಾಯಿಲೆ ಕಸಾಲೆ ಬರುತ್ತಿರಲಿಲ್ಲ. ಎಲ್ಲಾ ಪೌಷ್ಠಿಕಾಂಶಗಳು ಇದರಲ್ಲಿವೆ. ಇವತ್ತಿನ ದಿನಗಳಲಿ ಸಣ್ಣ ವಯಸ್ಸಿನಲ್ಲೇ ಮದುಮೇಹ, ರಕ್ತದೊತ್ತಡ. ಹೃದಯಕ್ಕೆ ಸಂಬಂದಿಸಿದ ಖಾಯಿಲೆಗಳು ಹೆಚ್ಚಾಗಿ ಬರುತ್ತಿವೆ. ಇದಕ್ಕೆಲ್ಲಾ ಕಾರಣ ಸತ್ವವಿಲ್ಲದ ನಮ್ಮ ಆಹಾರ ಪದ್ದತಿ.ಆದ್ದರಿಂದ ಎಲ್ಲರೂ ಸಿರಿಧಾನ್ಯಗಳನ್ನು ಬಳಸಿ ಇತರರಿಗೂ ಬಳಸಲು ಹೇಳಿ ಎಂದು ಹೇಳಿದರು.

Contact Your\'s Advertisement; 9902492681

ಸಂಸ್ಥೆಯ ತಾಲೂಕ ಯೋಜನಾಧಿಕಾರಿ ಕೃಷ್ಣಮೂರ್ತಿ ಪ್ರಾಸ್ಥಾವಿಕವಾಗಿ ಮಾತನಾಡಿ ಸಂಸ್ಥೆ ವತಿಯಿಂದ ಕೈಗೊಳ್ಳಲಾಗುತ್ತಿರುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಸಾನಿಧ್ಯ ವಹಿಸಿದ್ದ ಶ್ರಿ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಪೂಜ್ಯ ಸಿದ್ಧಲಿಂಗ ದೇವರು ಮುತೈದೆಯರಿಗೆ ಸಾಂಕೇತಿಕವಾಗಿ ಉಡಿ ತುಂಬುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ನೂರಕ್ಕೂ ಹೆಚ್ಚು ಮುತೈದೆಯರಿಗೆ ಉಡಿತುಂಬಲಾಯಿತು. ಈ ಸಂದರ್ಭದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಖಾ, ಮೇಲ್ವಿಚಾರಕರಾದ ಸಂತೋಷ, ಸೇವಾ ಪ್ರತಿನಿಧಿಗಳಾದ ಶಿವಲಿಂಗಮ್ಮ, ಮಂಜುಳಾ, ಪ್ರೇಮಾ, ಅರವಿಂದ ಅರಳಿ, ಸೋಮಶೇಖರ ಬಾಳಿ, ದತ್ತಾತ್ರೇಯ ಗುತ್ತೇದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here