ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ಆನಂದ: ಪ್ರಭಯ್ಯ ಶಾಸ್ತ್ರೀಜಿ

0
47

ಕಲಬುರಗಿ: ನಾವು ಧರ್ಮವನ್ನುರಕ್ಷಣೆ ಮಾಡಿದರೆ ಅದು ನಮ್ಮನ್ನುರಕ್ಷಿಸುತ್ತದೆ ಹಾಗಾಗಿ ನಮ್ಮ ನಮ್ಮ ಧರ್ಮಗಳ ಆಚಾರಅರಿವು ತಿಳಿದುಕೊಳ್ಳುವುದು ಅತೀ ಅವಶ್ಯಕವಾಗಿದ್ದು ಬೌದ್ಧಿಕ ಸಂಪತ್ತು ಗಳಿಸುವುದಕ್ಕಿಂತ ಆಧ್ಯಾತ್ಮಿಕ ಸಂಪತ್ತು ಹೆಚ್ಚು ಬೆಲೆಬಾಳುವಂತಹದ್ದು ಎಂದು ಹಾವೇರಿಯ ಹಾನಗಲ್‌ ತಾಲೂಕಿನ ಮಹರಾಜ ಪೇಠದ ವೇ.ಮೂ.ಶ್ರೀ ಪ್ರಭಯ್ಯ ಶಾಸ್ತ್ರೀಗಳು ಪುರಾಣದಲ್ಲಿ ಆಶೀರ್ವಚನ ನೀಡಿದರು.

ನಗರದ ಬಸವೇಶ್ವರಆಸ್ಪತ್ರೆಎದುರುಗಡೆಯಲ್ಲಿರುವ ವಿದ್ಯಾನಗರ ವೆಲ್‌ಫೇರ್ ಸೊಸೈಟಿಯವತಿಯಿಂದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿಪ್ರತಿನಿತ್ಯ ೬.೩೦ರಿಂದ ೮.೩೦ರ ವರೆಗೆನಡೆಯುತ್ತಿರುವಹಿರೇಸಾವಳಗಿಯ ಶ್ರೀ ಶಿವಲಿಂಗೇಶ್ವರ ಮಹಾಪುರಾಣ ಪ್ರವಚನದಲ್ಲಿ ಆಧ್ಯಾತ್ಮಿಕ ವಿಷಯಅಲ್ಲದೆಶರಣರ, ಸಂತರ ಹಾಗೂ ದಾಸರವಚನ ಸಾಹಿತ್ಯಜನಪದ ಸಾಹಿತ್ಯ ಹೀಗೆ ಅನೇಕ ವಿಷಯಗಳ ಕುರಿತು ಪ್ರವಚನದೊಂದಿಗೆ ಸುಮಾರು ೧೦-೧೫ ಶರಣ ಶರಣೆಯರ ಪೂರಕ ವಚನಗಳ ವಿಶ್ಲೇಷಣೆಕೂಡಇಲ್ಲಿ ನಡೆಯುತ್ತಿರುವುದುಒಂದು ವಿಶೇಷ. ಶಿರಗುಪ್ಪ ತಾಲೂಕಿನ ಹಳಕೋಟೆಯ ಪಂಪಾಪತಿ ಗವಾಯಿಗಳಿಂದ ಸಂಗೀತ ಸೇವೆಹಾಗೂ ಶಂಭುಲಿಂಗ ಪಾಟೀಲ ಧುದನಿ ಅವರಿಂದತಬಲಾ ಸೇವೆನಡೆಯುತ್ತಿದೆ.

Contact Your\'s Advertisement; 9902492681

ಸೊಸೈಟಿಯಅಧ್ಯಕ್ಷಮಲ್ಲಿನಾಥದೇಶಮುಖ,ಕಾರ್ಯದರ್ಶಿ ಶಿವರಾಜ ಅಂಡಗಿ ಹಾಗೂ ಹಿರಿಯರಾದ ಬಸವಂತರಾವಜಾಬಶೆಟ್ಟಿ, ಅಣವೀರಪ್ಪ ಮುಗಳಿ, ಮಲ್ಲಿಕಾರ್ಜುನ ಕಾಳೆ, ಸುಭಾಷ ಮಂಠಾಳೆ, ಗುರುಲಿಂಗಯ್ಯ ಮಠಪತಿ, ಮಲ್ಲಿಕಾರ್ಜುನ ನಾಗಶೆಟ್ಟಿ, ಶಿವಪುತ್ರಪ್ಪ ದಂಡೋತಿ, ನಾಗರಾಜ ಹೆಬ್ಬಾಳ, ಆರ್.ಎಸ್. ಗುಗ್ಗವಾಡ, ಜಂಭಯ್ಯಶಾಸ್ತ್ರೀ ಸ್ಥಾವರಮಠಹಾಗೂ ಸುತ್ತಮುತ್ತಲಿನ ವಿವಿಧಕಾಲೋನಿಯ ನೂರಾರು ಭಕ್ತರುಉಪಸ್ಥಿತರಿವರು.

ಈ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಪುರಾಣಧಾರ್ಮಿಕ ವೇದಿಕೆಯಲ್ಲಿ ಅನೇಕ ಸಾಮಾಜಿಕ ಕಾರ್ಯಗಳು ಆಯೋಜಿಸುತ್ತಿರುವುದುಒಂದು ವಿಶೇಷ. ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿಘರ್‌ಘರ್‌ತಿರಂಗಅಭಿಯಾನಕ್ಕಾಗಿ ಸುಮಾರು ನಮ್ಮಕಾಲೋನಿಯ ೨೫ ಕಾರ್‌ರ‍್ಯಾಲಿಗೆ ಮಾಜಿಕ್ಯಾಪ್ಟನ್ ಶಿವಶರಣಪ್ಪ ದುಧನಿ ಉದ್ಘಾಟಿಸಿ ಯುವಕರಲ್ಲಿದೇಶಪ್ರೇಮ ಬಿತ್ತಿದ್ದುಒಂದು ವಿಶೇಷ ಜೊತೆಗೆ೭೫ ಭಕ್ತರಿಗೆಧ್ವಜ ವಿತರಣೆ, ೭೫ ಮುತ್ತೈದೆತಾಯಂದಿರಿಗೆ ಉಡಿ ತುಂಬುವಕಾರ್ಯಕ್ರಮಗಳಲ್ಲಿ ನಿರೀಕ್ಷಕ್ಕೆ ಮೀರಿ ೧೭೫ಕ್ಕೂ ಹೆಚ್ಚು ಮಹಿಳಾ ತಾಯಂದಿರಿಗೆ ಉಡಿ ತುಂಬಿರುವಂತಹ ವೇದಿಕೆ ದಾಖಲೆ ಸೃಷ್ಟಿಸಿದೆ. ಜೊತೆಗೆವಿಶ್ವಜನಪದ ದಿನಾಚರಣೆ, ವಿಶ್ವ ಹಿರಿಯ ನಾಗರಿಕರ ದಿನಾಚರಣೆ, ವಿಶ್ವಛಾಯಾಚಿತ್ರಗಾರರ ದಿನಾಚರಣೆ, ಕೃಷ್ಣ ಜನ್ಮಾಷ್ಠಮ ಅಂಗವಾಗಿ ಮಕ್ಕಳನ್ನು ಕೃಷ್ಣ ಹಾಗೂ ರಾಧೆಯ ವೇಷದಲ್ಲಿ ನಟಿಸಿ ಸಂಭ್ರಮಿಸಿದ್ದು, ನೂಲಿಯಚಂದಯ್ಯ ಶರಣರಜಯಂತಿ ಹೀಗೆ ಆಯಾ ದಿನದ ವಿಶೇಷ ದಿನಾಚರಣೆಗಳನ್ನು ಆಚರಿಸುವ ಮೂಲಕ ಈ ವೆಲ್‌ಫೆರ್ ಸೊಸೈಟಿಯುಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆಎನ್ನುತ್ತಇನ್ನು ಕೇವಲ ಒಂದು ವಾರ ಮಾತ್ರ ಈ ವೇದಿಕೆಯಲ್ಲಿ ಪುರಾಣ ಪ್ರವಚನ ನಡೆಯಲಿದೆ ಸಾರ್ವಜನಿಕರುಇದರ ಸದುಪಯೋಗ ಪಡೆಯಬೇಕೆಂದುವಿದ್ಯಾನಗರ ವೆಲ್‌ಫೆರ್ ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here