ಕಲಬುರಗಿ: ಕಲುಷಿತ ನೀರು ಸೇವಿಸಿ ಮೊರಾಜಿ ದೇಸಾಯಿ ಶಾಲೆ 20 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

0
98

ಕಲಬುರಗಿ: ಇಲ್ಲಿನ ಫಿಲ್ಟರ್ ಬೇಡ್ ಪ್ರದೇಶದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರಕಾರಿ ಮೊರಾಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬುಧವಾರ ಬೆಳಕ್ಕಿಗೆ ಬಂದಿದೆ.

ಜಿಲ್ಲೆಯ ಬೇರೆ ಬೇರೆ ಹಳ್ಳಿಗಳಿಂದ ವಸತಿ ಶಾಲೆಯಲ್ಲಿ ಉಳಿದಿರುವ ವಿದ್ಯಾರ್ಥಿಗಳಿಗೆ ವಸತಿ ಶಾಲೆಯಲ್ಲಿ ಕಳೇದ 15 ದಿನಗಳಿಂದ ಶಾಲೆಯಲ್ಲಿ ಫಿಲ್ಟರ್ ಮಷೀನ್ ಹೋಗಿದೆ. ವಿದ್ಯಾರ್ಥಿಗಳು ಬೋರ್ವೆಲ್ ನೀರು ಕುಡಿದು ಖೆಮ್ಮು, ಜ್ವರ, ನೇಗಡಿ ಹಾಗೂ ಡೆಂಗ್ಯೂದಂತಹ ಲಕ್ಷಣಗಳು ಕಾಣಿಸಿಕೊಂಡಿರುವುದರಿಂದ ವಸತಿ ಶಾಲೆಯ ಮುಖ್ಯಸ್ಥರು ವಿದ್ಯಾರ್ಥಿಗಳ ಪೊಷಕರಿಗೆ ಮಾಹಿತಿ ನೀಡಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿಕೊಡಲಾಗಿದೆ.

Contact Your\'s Advertisement; 9902492681

ಖೆಮ್ಮು, ಜ್ವರ, ನೇಗಡಿಯಿಂದ ಅಸ್ವಸ್ಥಗೊಂಡ ವಿದ್ಯಾರ್ಥಿಗಳು ನಗರದ ಬಹಿಮನಿ ಆಸ್ಪತ್ರೆ ಸೇರಿದಂತೆ ನಗರ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ವಸತಿ ಶಾಲೆಯಲ್ಲಿ ಒಟ್ಟು 264 ವಿದ್ಯಾರ್ಥಿಗಳು ದಾಖಲಾಗಿದ್ದು, ಈ ಪೈಕಿ 164 ವಿದ್ಯಾರ್ಥಿಗಳು ಶಾಲೆಯಲ್ಲಿ ಇದ್ದಾರೆ. ಮೋಹರಂ ಹಬ್ಬದ ನೇಪೂಡ್ಡಿ ಕೇಲ ವಿದ್ಯಾರ್ಥಿಗಳು ಮನೆಗೆ ತೆರಳಿದ್ದು, ಇನ್ನೂ 25 ವಿದ್ಯಾರ್ಥಿಗಳು ಖೆಮ್ಮು, ಜ್ವರ, ನೇಗಡಿಯಂತ ಆರೋಗ್ಯ ಸಮಸ್ಯೆ ಕಾರಣದಿಂದ ಮನೆಗೆ ತೆರಳಿದ್ದಾರೆ ಎಂದು ಶಾಲೆಯ ಮುಖ್ಯಸ್ಥರಾದ ದಾವಲ್ ಸಾಬ್ ಇ-ಮೀಡಿಯಾ ಲೈನ್ ಗೆ ಮಾಹಿತಿ ನೀಡಿದ್ದಾರೆ.

ಮಾನವ ಹಕ್ಕುಗಳ ಹೋರಾಟಗಾರರ ರೀಯಾಜ್ ಖತೀಬ್ ಮೂಲಕ ಘಟನೆ ಬೆಳಕ್ಕಿಗೆ ಬರುತ್ತಿದಂತೆ ಮೊರಾಜಿ ದೇಸಾಯಿ ವಸತಿ ಶಾಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಇಂದಿನಿಂದ ಶಾಲೆಯಲ್ಲಿ ಮಿನರಲ್ ವಾಟರ್ ತರಿಸಲಾಗಿದೆ. ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡಿರುವ ಸುಳ್ಳು ಸುದ್ದಿ ಹಬ್ಬಿಸಲಾಗಿದೆ.- ದಾವಲ್ ಸಾಬ್, ಶಾಲೆಯ ಮುಖ್ಯಸ್ಥ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here