ಹೈದ್ರಾಬಾದ್ ಕರ್ನಾಟಕದ ಶಿಕ್ಷಣ ರೂವಾರಿ ಉನ್ನತ ಶಿಕ್ಷಣದ ಜನಕ ಮಹಾದೇವಪ್ಪ ರಾಂಪುರೆ

0
298
ಹೈದ್ರಾಬಾದ್ ಕರ್ನಾಟಕದ ಶಿಕ್ಷಣ ರೂವಾರಿ ಉನ್ನತ ಶಿಕ್ಷಣದ ಜನಕ, ಶಿಕ್ಷಣ ಶಿಲ್ಪಿ, ದ್ರುವತಾರೆ, ಮಹಾದೇವಪ್ಪ ರಾಂಪುರೆ(01.08.1922-06.02.1973) ಸೋಲ್ಲಾಪುರ ಜಿಲ್ಲೆಯ ಕುಬಾರಿ ಗ್ರಾಮದ ರಾಂಪುರೆ ಒಕ್ಕಲುತನ ಮನೆತನದಲ್ಲಿ 01.08.1922 ರಲ್ಲಿ ಜನಿಸಿದರು. ತಂದೆ ಯಶವಂತಪ್ಪತ,ತಾಯಿ ಗುರುದೇವಿ. ಪ್ರಥಮ ಮಗ, ತಮ್ಮಂದಿರು ನಾಲ್ಕು ಜನ, ಚೆನ್ನಬಸಪ್ಪ, ಸಾತಲಿಂಗಪ್ಪ, ದುಂಡಪ್ಪ, ಚಂದ್ರಶೇಖರ, ರಾಜಶೇಖರ, ತಂಗಿ ಕಮಲದೇವಿ, ಮನೆದೇವರು ಪೂನಾದ ಸಿಂಗಣಾಪುರದ ಮಹಾದೇವರ ದೇವಾಲಯ, ಪ್ರಾಥಮಿಕ ಶಿಕ್ಷಣ ಕುಬಾರಿ ಊರಿನಲ್ಲಿ. ಪ್ರೌಢ ಶಿಕ್ಷಣ ಸೊಲ್ಲಾಪುರದ ಪ್ರಸಿದ್ಧ ಶಿಕ್ಷಣ ಸಂಸ್ಥೆ ‘ಹರಿಬಾಯಿ ದೇವಕರಣದಲ್ಲಿ ಮಾಡುತ್ತಾರೆ. ಕೇವಲ14ನೇಯ ವಷ೯ದಲ್ಲಿ ಅಂದಿನ ಕಾಲದ ಪ್ರಧಾನ ಮಂತ್ರಿ ಜವಹರಲಾಲ್ ನೆಹರು ಅವರು ಸೋಲ್ಲಾಪುರಕ್ಕೆ ಬಂದಾಗ ಹೂವಿನ ಹಾರ ಹಾಕಿ ಈ ಬಾಲಕ ಎಲ್ಲರಿಗೂ ಗಾಬರಿ ಆಯಿತು. ಮತ್ತು ಖುಷಿ ಆಯಿತು. ಧೈರ್ಯ ಶಾಲಿ ಆಗಿದರು.
ಅವರು ಕೋಲ್ಲಾಪುರದಲ್ಲಿ ಶಿಕ್ಷಣ ಮುಕ್ತಾಯವಾಗುತ್ತದೆ… ಹೋರಾಟ, ಸಂಘಟನೆ, ಬ್ರಿಟಿಷ್ ವಿರುದ್ಧ ಚಳುವಳಿ ನಡೆಸುತ್ತಿದ್ದರು… ರಾಜಕೀಯ ಗುರು ಎಂ.ಎನ್. ರಾಯ್ (ಮಾನವೇಂದ್ರನಾಥ) ಗಾಂಧಿ ಜೀ ಸತ್ಯಾಗ್ರಹಕ್ಕೆ ಸಹಾಯ,ಸಹಕಾರ ಜನರಿಗೆ ಒಂದು ಗೂಡಿಸುವುದು.  ಮುಖ್ಯ ಉದ್ದೇಶವಾಗಿತ್ತು. ಹೋರಾಟ ಮಾಡುವ ಹೆಚ್ಚು ಆಸಕ್ತಿ ತೊರಿಸುತ್ತೀದರು‌. ಒಂದು ದಿನ ಬ್ರಿಟಿಷ್ ರು, ಇವರಿಗೆ ಬಂಧಿಸಿ ಜೈಲಿಗೆ ಕಳಿಸಬೇಕು ಎನ್ನುವ ಗುಪ್ತಚರ ಮಾಹಿತಿ ಅವರ ಅಜ್ಜನಿಗೆ ತಿಳಿದು ಬರುತ್ತದೆ… ಆಗಿನ ಕಾಲದಲ್ಲಿ ಕಲಬುರಗಿ ಶ್ರೀಮಂತ ಮನೆತನ ಶಿವಪ್ಪ ಬಂಡಕ ಅವರ ಮನೆಗೆ ಕಲಿಸುತ್ತಾರೆ. ಅವರು ಗಂಜ ಅಡತ ವ್ಯಾಪಾರಿಗಳು… ಅವರ ಜೊತೆ ಮಹಾದೇವಪ್ಪ ರಾಂಪುರೆ ಇರುತ್ತಾರೆ.
ಕೆಲವು ವರ್ಷಗಳ ನಂತರ  ಶಿವಪ್ಪ ಚೆಂಗಳೆಮ್ಮ ಆದಶ೯ ದಾಂಪತ್ಯ ಜೀವನದ ಒಬ್ಬಳೇ ಹೆಣ್ಣು ಮಗಳು ತಾರಾಬಾಯಿ ಅವರಿಗೆ 1942ರಲ್ಲಿ ಮದುವೆ ಆಗುತ್ತಾರೆ‌. ನಂತರ ಅವರು ರಾಜಕೀಯ ಜೀವನದಲ್ಲಿ ಮಹತ್ವದ ಸ್ಥಾನ ಗಳಿಸಲು ಹೋರಾಟ ಮತ್ತು ಜನರ ಸಮಸ್ಯೆ ಪರಿಹಾರ ನೀಡಬೇಕು ಎಂದು. ಅವರು 1957 ರಲ್ಲಿ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾವಣೆಯಲ್ಲಿ ಗೆಲ್ಲುತ್ತಾರೆ. ನಂತರ 1962 ಮತ್ತು1967ರಲ್ಲಿ ಮೂರು ಬಾರಿ ಲೋಕಸಭಾ ಸದಸ್ಯರಾಗಿ ಕೆಲಸ ಮಾಡುತ್ತಾರೆ.
ಈಗಿನ ಶತಮಾನದ ಶಿಕ್ಷಣ ಸಂಸ್ಥೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಉಪಾಧ್ಯಕ್ಷ, ಕಾರ್ಯದಶಿ೯ಯಾಗಿ ದೊಡ್ಡಪ್ಪ ಅಪ್ಪಾ ಅವರ ಕೈಯಲ್ಲಿ ಕೆಲಸ ಮಾಡುವ ಮೂಲಕ ಶಿಕ್ಷಣ ಸಂಸ್ಥೆ ಬೆಳೆಸುತ್ತಾರೆ. ಕನ್ನಡ ನಾಡು, ನುಡಿ, ಸಂಸ್ಕೃತಿ 1949ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಕಾಯ೯ದಶಿ೯ಗಳಾಗಿ ಕೆಲಸ ಮಾಡುತ್ತಾರೆ.ಅವರು ಕಲಬುರಗಿ ಜಿಲ್ಲೆಯಲ್ಲಿ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯನ್ನು 3.4.1958 ರಲ್ಲಿ ಸರ್ಕಾರದ ನೋಂದಣಿ 1/1350 ಮಾಡಿಸಿ. 1958ರಲ್ಲಿ ಸ್ಥಾಪನೆ ಮಾಡುತ್ತಾರೆ. ಮಾಡುತ್ತಾರೆ… ಮೊದಲು ಕಾಯಾ೯ಧಶಿ೯ಯಾಗಿ ನಂತರ1959 ರಲ್ಲಿ ಸಂಸ್ಥೆಯ ಅಧ್ಯಕ್ಷರಾಗಿ ಜನರಿಂದ ಹಣ ಸಂಗ್ರಹಿಸಿ ಶಿಕ್ಷಣ ಸಂಸ್ಥೆಯ ಬೃಹತ್ ಆಕಾರದಲ್ಲಿ ಬೆಳವಣಿಗೆ ಮಾಡುತ್ತಾರೆ. ಆಗಿನ ಕಾಲದಲ್ಲಿ ಪ್ರಥಮ ಉಪರಾಷ್ಟ್ರಪತಿ ಸವ೯ಪಲ್ಲಿ ಡಾ.ರಾಧಾಕೃಷ್ಣನ್ ಅವರ ಅಮೃತ ಹಸ್ತದಿಂದ 15.10.1958 ರಲ್ಲಿ ಪಿಡಿಯ ಇಂಜಿನಿಯರಿಂಗ್ ಕಾಲೇಜು ಉದ್ಘಾಟನೆ ಮಾಡಿಸುತ್ತಾರೆ…
ಶೇಠ ಶಂಕರ ಲಾಲ್ ಕಾನೂನು ಮಹಾವಿದ್ಯಾಲಯ ಅಂದಿನ ಕಾಲದಲ್ಲಿ 17.04.1966 ರಲ್ಲಿ ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಶಂಕುಸ್ಥಾಪನೆ ಮಾಡುತ್ತಾರೆ. ಅಂದಿನ ಕಾಲದಲ್ಲಿ ಶ್ರೀ ನೀಲಂ ಸಂಜೀವರೆಡ್ಡಿ 24.02.1968 ರಲ್ಲಿ ಉದ್ಘಾಟಿಸಿದರು, ಬಿ.ವ್ಹಿ.ಭೂಮರಡ್ಡಿ ಮಹಾವಿದ್ಯಾಲಯ, ಬೀದರ ಜಿಲ್ಲೆಯಲ್ಲಿ 1960 ಆರಂಭಿಸಿದರು,  ಶ್ರೀ ಮತಿವೀರಮ್ಮ ಗಂಗಸಿರಿ ಮಹಿಳಾ ವಸತಿ ಗೃಹ 1963ರಲ್ಲಿ 1965 ರಲ್ಲಿ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಸ್ಥಾಪನೆ ಮಾಡಿದರು. ಅವರ ಕನಸಿನ ಕೂಸು 1963ರಲ್ಲಿ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಮಹಾವಿದ್ಯಾಲಯ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು ಶಂಕುಸ್ಥಾಪನೆ ಮಾಡಿದರು. 1967ರಲ್ಲಿ ಎಸ್. ಎಸ್. ಮರಗೋಳ ಮಹಾವಿದ್ಯಾಲಯ, ಶಹಬಾದ, ಎಂ.ಎಸ್. ಐ. ಮಹಾವಿದ್ಯಾಲಯ ಮತ್ತು 1968ರಲ್ಲಿ ಪ್ರಭು ಮಹಾವಿದ್ಯಾಲಯ, ಸುರಪುರ ತಾಲೂಕಿನಲ್ಲಿ ಆರಂಭಿಸಿದರು.
ಶ್ರೀ ಚಂದ್ರಶೇಖರ ಪಾಟೀಲ ಸ್ಮಾರಕ (ವಿದ್ಯಾರ್ಥಿಗಳ)ವಸತಿ ನಿಲಯ 1969 ರಲ್ಲಿ ಕಲಬುರಗಿ ನಗರದಲ್ಲಿ ಸ್ಥಾಪನೆ, ವೀರೇಂದ್ರ ಪಾಟೀಲ ಮಹಾವಿದ್ಯಾಲಯ 1972ರಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸ್ಥಾಪನೆ ಮಾಡಿದರು. ಮಹಾದೇವಪ್ಪ ಮತ್ತು  ತಾರಾಬಾಯಿ ಆದಶ೯ ದಂಪತಿಗಳಿಗೆ  ಒಟ್ಟು 8 ಜನಮಕ್ಕಳು ಐದು ಗಂಡು ಮಕ್ಕಳು (ವಿದ್ಯಾಸಾಗರ, ಅಜಿತ್, ದಿಲೀಪ, ಶರತ, ಜಯದೀಪ), ಮೂರು ಹೆಣ್ಣು ಮಕ್ಕಳು (ವಸಂತಪ್ರಭ, ಸುರೇಖ, ಮಾಯಾದೇವಿ) ಎಲ್ಲರೂ ಉನ್ನತ ಶಿಕ್ಷಣ ನೀಡಿದ ಕೀರ್ತಿ ಅವರಿಗೆ ಸಲುತ್ತೇದೆ. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪ್ರಥಮದಲ್ಲಿ ಕಾಯ೯ಧಶಿ೯, ಅಧ್ಯಕ್ಷರಾಗಿ ಶಿಕ್ಷಣ ಸಂಸ್ಥೆ ಬೃಹತ್ ಗಾತ್ರದಲ್ಲಿ ಬೆಳೆಸುತ್ತಾರೆ. ಬೀದರ್, ಯಾದಗಿರಿ, ಕಲಬುರಗಿ ಮತ್ತು ಬೆಂಗಳೂರು ಸೇರಿದಂತೆ 40 ಕ್ಕಿಂತ ಹೆಚ್ಚು ಶಿಕ್ಷಣ ಸಂಸ್ಥೆಗಳು ಸ್ಥಾಪಿಸಿದ ಕೀರ್ತಿ ಅವರಿಗೆ ಸಲುತ್ತೇದೆ. ಅವರ ಶಿಕ್ಷಣ ಕೆಲಸ ಮಾಡಿದು ಇಂದಿಗೂ ಪ್ರಸ್ತುತವಾಗಿದೆ. 06.02.1973ರಲ್ಲಿ ಬೆಂಗಳೂರಿನ ಸದಾಶಿವ ನಗರದ ಅವರ ಮನೆಯಲ್ಲಿ ಹೃದಯಘಾತದಿಂದ ಕೊನೆ ಉಸಿರು ಬಿಡುತ್ತಾರೆ.
ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ 1958 ರಿಂದ 2019 ವರೆಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಕೇವಲ ಮೂರು ವಷ೯ಅಧಿಕಾರ ಅವಧಿ ಇರುತ್ತದೆ.
1. ಶ್ರೀ ಜಿ.ಎನ್. ನಾಗರಾಜ, 
2. ಮಹಾದೇವಪ್ಪ ರಾಂಪುರೆ,
 3.ಅಗಡಿ ಸಂಗಣ್ಣ, 
4. ಶ್ರೀ ಶರಣಬಸಪ್ಪ ಅಪ್ಪಾ, 
5. ಡಾ.ಡಾ.ಎ.ಬಿ.ಮಲಕರೆಡ್ಡಿ, 
6. ಡಾ.ಬಿ.ಜಿ.ಜವಳಿ, 
7. ಶ್ರೀ ಬಸವರಾಜಪ್ಪ ಅಪ್ಪಾ, 
8.ಶ್ರೀ ಬಸವರಾಜ ಭೀಮಳ್ಳಿ, 
9. ಶೆಶೀಲ್ ಜಿ ನಮೋಶಿ, 
10. ಭೀಮಾಶಂಕರ ಬಿಲಗುಂದಿ. ಒಂದು ಬಾರಿ ಎರಡು ಬಾರಿ ಮೂರು ಬಾರಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವತಿಯಿಂದ ಬೆಂಗಳೂರಿನಿಂದ ಬೀದರ ವರೆಗೆ ಶಿಕ್ಷಣ ಸಂಸ್ಥೆ ಕೆಲಸ ಮಾಡುತ್ತೀದೆ.  ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕೇಂದ್ರ ಕಛೇರಿ ಕಲಬುರಗಿ ಜಿಲ್ಲೆಯಲ್ಲಿ ಇದೆ. ಸಾವಿರಾರು, ಲಕ್ಷಾಂತರ ವಿದ್ಯಾರ್ಥಿಗಳು ಓದಿದ ಕೀರ್ತಿ ಈ ಸಂಸ್ಥೆಗೆ ಸಲುತ್ತೇದೆ… ಸಾವಿರಾರು ಉದ್ಯೋಗ ನೀಡಿದ ಕೀರ್ತಿ ಸಂಸ್ಥೆಗೆ ಸಲ್ಲುತ್ತದೆ. ಅನೇಕ ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ಉದ್ಯೋಗ ಮತ್ತು ಕೆಲವರು ಉದ್ಯೋಗ ನೀಡುವ  ಉದ್ಯಮಿ ನೀಡಿದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಗೆ  ಹೆಮ್ಮೆಯ ವಿಷಯವಾಗುತ್ತದೆ…
– ಬಿ.ಎಂ.ಪಾಟೀಲ ಕಲ್ಲೂರ
  ಮೊ: 9845268676

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here