ಕಲಬುರಗಿ: ಆ.28 ರಂದು ಮಹಾಮಂಗಲೋತ್ಸವ

0
11

ಕಲಬುರಗಿ: ಜಯನಗರ ಶಿವಮಂದಿರದಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳ “ಶರಣರ ಧರ್ಮ” ಆಧ್ಯಾತ್ಮಿಕ ಪ್ರವಚನದ ಮಂಗಲೋತ್ಸವ ಹಾಗೂ ಪಲ್ಲಕ್ಕಿ ಮೆರವಣಿಗೆ ಕಾರ್ಯಕ್ರಮವು ಆ.28 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳೆದ ಜುಲೈ ತಿಂಗಳ 29 ರಂದು ಪ್ರಾರಂಭವಾಗಿರುವ ಶರಣರ ಧರ್ಮ ಆಧ್ಯಾತ್ಮಿಕ ಪ್ರವಚನ ಯಶಸ್ವಿಯಾಗಿ ಜಯನಗರದ ಶಿವಮಂದಿರದಲ್ಲಿ ಪ್ರತಿ ದಿನ 7 ರಿಂದ 8 ಗಂಟೆವರೆಗೆ ನಡೆದು ನಂತರ ಹೆಸರಾಂತ ವಿವಿಧ ಕ್ಷೇತ್ರಗಳ ಪರಿಣೀತರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

Contact Your\'s Advertisement; 9902492681

ಸಾಳಹಿತಿಗಳಾದ ಎ.ಕೆ.ರಾಮೇಶ್ವರ,ಚಿ.ಸಿ.ನಿಂಗಣ್ಣ, ಶರಣಬಸಪ್ಪ ವಡ್ಡನಕೇರಿ,ಸಿ.ಎಸ್. ಆನಂದ,ಸಿ.ಎಸ್. ಮಾಲಿಪಾಟೀಲ,ಜಿ.ಜಿ.ವಣಿಕ್ಯಾಳ,ಆನಂದ ಸಿದ್ದಾಜಿ,ಪತ್ರಕರ್ತರಾದ ಸುಭಾಷ ಬಣಗಾರ, ಪ್ರಭುಲಿಂಗ ನೀಲೂರೆ, ಸಂಗಮನಾಥ ದೇವತಗಾಂವ, ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ಮಚ್ಚೇಂದ್ರನಾಥ ಮೂಲಗೆ, ಇತಿಹಾಸ ತಜ್ಞ ಪ್ರೊ.ಬಿ.ಸಿ.ಮಹಾಬಳೇಶ್ವರ, ಹಿರಿಯ ಹೋರಾಟಗಾರರಾದ ಶರಣ ಚಿಂತಕ ಲಕ್ಷ್ಮಣ ದಸ್ತಿ,ಮಾಜಿ ಜಿಡಿಎ ಅಧ್ಯಕ್ಷರಾದ ಶಾಮರಾವ ಪ್ಯಾಟಿ, ಕಲಬುರಗಿ ಬಸವ ಸಮಿತಿ ಅಧ್ಯಕ್ಷರಾದ ಡಾ.ವಿಲಾಸವತಿ ಖೂಬಾ, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಹಾಗೂ ಭಾವಗೀತೆ ಗಾಯಕ ಕಿರಣ ಪಾಟೀಲ, ವಿಜಯಲಕ್ಷ್ಮಿ ಚೆಂಗನಾಳ, ಶಿವಶಂಕರ ಬಿರಾದಾರ ಹೀಗೆ ಹಲವಾರು ಗಣ್ಯರು ಭಾಗವಹಿಸಿದ್ದು ವಿನೂತನ ಮಾದರಿಯಾಗಿದೆ.ವೇದ ಪಂಡಿತ ಶಿವಕವಿ ಹಿರೇಮಠ ಜೋಗೂರ ಅವರು ಪ್ರವಚನ ನಡೆಸಿಕೊಟ್ಟರು.ದಿನ ನಿತ್ಯ ಬೆರೆ ಬಡಾವಣೆಗಳ ಭಕ್ತರು, ಸಾರ್ವಜನಿಕರು, ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಅದರಂತೆ ದಿನಾಲೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು ಎಂದರು.

ಮಂಗಲೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲು ಮುಗಳನಾಗಾಂವ ಕಟ್ಟಿಮನಿ ಸಂಸ್ಥಾನ ಹಿರೇಮಠದ ಪರಮ ಪೂಜ್ಯ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಆಗಮಿಸುವರು.ಪ್ರವಚನಕಾರ ವೇದ ಪಂಡಿತ ಶ್ರೀ ಶಿವಕವಿ ಹಿರೇಮಠ ಜೋಗೂರ ಅವರು ಉಪಸ್ಥಿತರಿರುವರು, ಮುಖ್ಯ ಅತಿಥಿಗಳಾಗಿ ಶಾಸಕ ಹಾಗೂ ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್ ಸದಸ್ಯರುಗಳಾದ ಶಶೀಲ್ ನಮೋಶಿ,ಬಿ.ಜಿ.ಪಾಟೀಲ,ಎಚ್ಕೆಇ ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ,ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕ ಪತ್ರಕರ್ತ ದೇವಯ್ಯ ಗುತ್ತೇದಾರ, ಮಹಾನಗರ ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ ಆಗಮಿಸುತ್ತಾರೆ.ಕಾರ್ಯಕ್ರಮದ ಅಧ್ಯಕ್ಷತೆ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ವಹಿಸುವರು.ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿರುವರು.

ನಂತರ ಸಂಗೀತಗಾರರಾದ ಶ್ರೀಮತಿ ವಿಜಯಲಕ್ಷ್ಮೀ ಚೆಂಗನಾಳ,ಸಿ.ಎಸ್.ಮಾಲಿಪಾಟೀಲ ಹಾಗೂ ಕಿರಣ ಪಾಟೀಲ ಅವರಿಂದ ಭಕ್ತಿ ಹಾಗೂ ಭಾವಗೀತೆಗಳ ಸಂಗೀತ ಕಾರ್ಯಕ್ರಮ ನಡೆಯುವುದು.

ಅಂದು ಜಯನಗರ ಸೇರಿದಂತೆ ಬೆರೆ ಬೆರೆ ಬಡಾವಣೆಯ ಹಿರಿಯರು, ಮಹಿಳೆಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here