ಶೈಕ್ಷಣಿಕ ಗುಣಮಟ್ಟವೆಂಬ ಬಂಡಿಯ ಎರಡು ಚಕ್ರಗಳು: ಬಸವರಾಜ ಮಾಯಾಚಾರಿ

0
134

ಕಲಬುರಗಿ: ಸಾರ್ವಜನಿಕ ಶಿಕ್ಷಣ ಇಲಾಖೆ,  ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ  ಚಿತ್ತಾಪೂರ  ಹಾಗೂ ಸ್ಟರ್(ಆಂತರಿಕ  ಪ್ರೇರಣಾ ಕೇಂದ್ರ) ಎಜುಕೇಶನ ಸಹಯೋಗದಲ್ಲಿ ರಾವೂರ್ ಕ್ಲಸ್ಟರ್‌ನಲ್ಲಿ ಕಲಿಕಾಚೇತರಿಕೆ ಮೇಳ ಆಯೋಜನೆ ಮಾಡಲಾಗಿತ್ತು.

ಈ  ಮೇಳವನ್ನು ಉದ್ಘಾಟನೆ ಮಾಡಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ  ಉಪನಿರ್ದೇಶಕರಾದ ಬಸವರಾಜ ಮಾಯಾಚಾರಿ ಅವರು ಕೋವಿಡ್ ಸಾಂಕ್ರಾಮಿಕ  ಸನ್ನಿವೇಶದಿಂದಾಗಿ ಮಕ್ಕಳಲ್ಲಿ ಉಂಟಾಗಿರುವ ಕಲಿಕಾ ಕೊರತೆಯನ್ನು ಸರಿದೂಗಿಸಲು ನೆರವಾಗುವಂತೆ ೦೧ ರಿಂದ ೦೯ನೇ ತರಗತಿಗಳ ವಿದ್ಯಾರ್ಥಿಗಳಿಗೆ ಘನ  ಕರ್ನಾಟಕ  ಸರಕಾರವು ಕಲಿಕಾಚೇತರಿಕೆ ಎಂಬ ಉಪಕ್ರಮವನ್ನು ಘೋಷಿಸಿ, ಕಡ್ಡಾಯವಾಗಿ  ಅನುಷ್ಠಾನಿಸಲು  ನಿರ್ದೇಶನ ನೀಡಿದೆ.

Contact Your\'s Advertisement; 9902492681

ಸದರಿ ಉಪಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳಿಗಾಗಿ ಕಲಿಕಾ ಹಾಳೆಗಳು/ಚಟುವಟಿಕೆ ಪುಸ್ತಕಗಳನ್ನು  ಸುಗಮಕಾರರ ಕೈಪಿಡಿಗಳನ್ನು ಶಾಲಾ ಮಟ್ಟದಲ್ಲಿ ತರಬೇತಿಯೊಂದಿಗೆ ಅನುಷ್ಠಾನಗೊಳಿಸಲಾಗಿದೆ. ಕಲಿಕಾಚೇತರಿಕೆ ಉಪಕ್ರಮವನ್ನು ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಶಿಕ್ಷಣ  ಸಂಶೋಧನೆ  ಮತ್ತು ತರಬೇತಿ ಇಲಾಖೆ ಹಾಗೂ ಸಮಗ್ರ ಶಿಕ್ಷಣ  ಕರ್ನಾಟಕ ಸೂಚಿಸಿರುವ ಅಗತ್ಯ  ಕ್ರಮಗಳ ಭಾಗವಾಗಿ ಆಗಷ್ಟ ೨೦೨೨ ಮಾಹೆಯನ್ನು ಪೋಷಕ ಹಾಗೂ ಭಾಗೀದಾರರ ಜಾಗೃತಿ ಮಾಹೆಯನ್ನಾಗಿ  ಗುರುತಿಸಲಾಗಿದ್ದು, ಸದರಿ ಮಾಹೆಯಲ್ಲಿ  ಕಲಿಕಾ ಚೇತರಿಕೆ”  ಉಪಕ್ರಮದ ಬಗ್ಗೆ  ಜಾಗೃತಿ ಮೂಡಿಸುವ ಭಾಗವಾಗಿ  ಕಲಿಕಾಚೇತರಿಕೆ ಮೇಳ ವನ್ನು ಆಯೋಜಿಸಿ ಅನುಷ್ಠಾನಗೊಳಿಸಲಾಗುತ್ತಿದೆ.

ಚಿತ್ತಾಪೂರ ತಾಲೂಕಿನ  ರಾವೂರ್ ಕ್ಲಸ್ಟರ್‌ನಲ್ಲಿ ಮೊದಲ ಕಲಿಕಾಚೇತರಿಕೆ ಮೇಳ  ಆಯೋಜನೆ ಮಾಡಿದ್ದು ಮಕ್ಕಳ  ಕಲಿಕೆ ಪ್ರದರ್ಶನವನ್ನು ಕಂಡು ಸಂತೋಷವಾಗಿದೆ.  ಇಂದು  ಶಿಕ್ಷಣ ಇಲಾಖೆಯ ಆಡಳಿತ ಮತ್ತು ಅಭಿವೃದ್ಧಿ ಶೈಕ್ಷಣಿಕ  ಗುಣಮಟ್ಟವೆಂಬ ಬಂಡಿಯ ಎರಡು ಚಕ್ರಗಳು, ಅದಕ್ಕಾಗಿಯೇ ನಾವು  ಇಂದು ಇಬ್ಬರೂ ಉಪನಿರ್ದೇಶಕರು ಶಾಲೆಗಳ ಭೇಟಿ ಮಾಡುವ ಮೂಲಕ, ಶೈಕ್ಷಣಿಕ ಗುಣಮಟ್ಟ  ಸುಧಾರಣೆಗೆ ಶ್ರಮಿಸಲಾಗುತ್ತಿದೆ ಎಂದು ಅಭಿಮತ ವ್ಯಕ್ತಪಡಿಸಿದರು.

ಇನ್ನೋರ್ವ ಮುಖ್ಯ ಅಥಿತಿ  ಉಪನಿರ್ದೇಶಕರು ಆಡಳಿತ ಸಕ್ರೆಪ್ಪಗೌಡ ಬಿರಾದಾರ ಮಾತನಾಡುತ್ತಾ, ಇವತ್ತಿನ ಕಲಿಕಾಚೇತರಿಕೆ ಮೇಳ ಅತ್ಯಂತ ಪ್ರಶಂಸನೀಯವಾಗಿದೆ. ಮಕ್ಕಳು  ಪ್ರದರ್ಶನ ಮಾಡಿದ ಕಲಿಕಾ ಫಲಗಳನ್ನು ಕಂಡು ಸಂತೋಷವಾಗಿದೆ. ಮಕ್ಕಳಿಗೆ ಕಲಿಕೆಯನ್ನು ಶಾಶ್ವತಗೊಳಿಸಲು ಶಿಕ್ಷಕರು ಹೊಸ ಹೊಸ ಬಗೆಯ ದಾರಿಗಳನ್ನು ಕಂಡುಕೊಳ್ಳಬೇಕು. ಮಕ್ಕಳ ಕೇಂದ್ರಿತ ಶಿಕ್ಷಣ ಇವತ್ತಿನ ಅವಶ್ಯಕತೆ. ಮಕ್ಕಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಕಲಿಕೆಯನ್ನು ಮುಂದುವರಿಸಬೇಕು. ಮಕ್ಕಳಲ್ಲಿ ಈಗಾಗಲೇ ಜ್ಞಾನದ ಖಜಾನೆಯೇ ಇರುತ್ತದೆ. ಅದನ್ನು ನಿರೆರೆದು ಪೋಶಿಸುವ ವ್ಯಕ್ತಿಗಳು ನಿವಾಗಬೇಕು ಎಂದರು.

ಕಲಿಕಾಚೇತರಿಕೆ ಈ ಶೈಕ್ಷಣಿಕ ವರ್ಷದಲ್ಲಿ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದೆ. ನಾವೆಲ್ಲರೂ ಎಲ್ಲಾ  ಮಕ್ಕಳಿಗೆ ಸುಗಮಕಾರರಾಗಿ ಕಲಿಕೆಯನ್ನು ಉಂಟುಮಾಡುವಲ್ಲಿ ಪ್ರಯತ್ನಿಸಬೇಕು. ಯಾವ ಮಗುವು ಕೂಡ ಕಲಿಕೆಯಲ್ಲಿ ಹಿಂದೂಳಿಯದಂತೆ ಅಭ್ಯಾಸದ ಹಾಳೆಗಳಲ್ಲಿನ ಎಲ್ಲಾ ಚಟುವಟಿಕೆಗಳನ್ನು ಸ್ವತಂತ್ರ ಕಲಿಕೆ ಮತ್ತು ಸಹಪಾಟಿಗಳೊಂದಿಗಿನ ಶಾಶ್ವತ ಕಲಿಕೆಗೆ ಹೆಚ್ಚು ಒತ್ತುಕೊಟ್ಟು ಕಲಿಸಬೇಕು ಹಾಗೂ ಎಲ್ಲರೂ ಕಲಿಕಾಚೇತರಿಕೆ ಅನುಷ್ಠಾನಕ್ಕೆ ಕಂಕಣಬದ್ಧರಾಗಬೇಕು ಎಂದು  ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದ  ಸ್ಟರ್ ಎಜುಕೇಶನ್ (ಆಂತರಿಕ ಪ್ರೇರಣಾ ಕೇಂದ್ರ)  ಸಂಸ್ಥೆಯ ವಿಭಾಗೀಯ ಮುಖ್ಯಸ್ಥರಾದ ಕೆ.ಎಂ.ವಿಶ್ವನಾಥ ಮರತೂರ ರಾಜ್ಯ ಸರಕಾರ ಹಾಗೂ ಶಿಕ್ಷಣ  ಇಲಾಖೆಯ ಆಶೆಯದಂತೆ ಕಲಿಕಾಚೇತರಿಕೆ ಉಪಕ್ರಮವು ಈಗಾಗಲೇ ಶಾಲಾ ಹಂತದಲ್ಲಿ ಅನುಷ್ಠಾನಗೊಳಿಸಲಾಗಿದೆ. ವಿದ್ಯಾರ್ಥಿಗಳ  ವಿಷಯವಾರು, ತರಗತಿವಾರು  ಕಲಿಕಾಂಶಗಳನ್ನು  ಆಧಾರವಾಗಿಟ್ಟುಕೊಂಡು ಸದರಿ ಕಲಿಕಾಚೇತರಿಕೆ ಮೇಳವನ್ನು ಆಯೋಜಿಸಿದ್ದು ಈ ಕೆಲಸಕ್ಕೆ ಶಿಕ್ಷಕರು ಅತ್ಯಂತ ಪ್ರಶಂಸನೀಯರು ಇದನ್ನು ಶಿಕ್ಷಣ ಇಲಾಖೆಯ ಫಲಾನುಭವಿಗಳಾದ ಪಾಲಕರು, ಶಾಲಾಭಿವೃದ್ಧಿ ಮತ್ತು  ಮೇಲುಸ್ತೂವಾರಿ ಸಮಿತಿ ಅಧ್ಯಕ್ಷರು ಸದಸ್ಯರು ಗಮನಿಸಬೇಕು ಎಂದರು.

ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ಹಿರೆಮಠ ಮಾತನಾಡಿ ಇಂದು ನಮ್ಮ ತಾಲೂಕಿನಲ್ಲಿ ಇಬ್ಬರೂ ಉಪನಿರ್ದೇಶಕರು ಆಗಮಿಸಿ ಮಾರ್ಗದರ್ಶನ ಮಾಡಿದ್ದು  ಸಂತೋಷದ ವಿಷಯವಾಗಿದೆ. ನಾವು ಕಲಿಕಾಚೇರಿಕೆಯನ್ನು ಅತ್ಯಂತ ಸೂಕ್ತವಾಗಿ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಇಂದು ಕ್ಲಸ್ಟರ್ ಹಂತದಲ್ಲಿ ಮಕ್ಕಳ ಕಲಿಕೆಯನ್ನು  ಸಮುದಾಯಕ್ಕೆ ತಲುಪಿಸುವ ಪ್ರಯತ್ನವನ್ನು ಮಾಡಲಾಗಿದ್ದು, ಇದರ ಮೂಲಕ  ಕಲಿಕಾಚೇತರಿಕೆ ಉಪಕ್ರಮದ ಜಾಗೃತಿಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕ್ರಿಯಾಶೀಲ ಸಿ.ಆರ್.ಪಿ. ಕವಿತಾ ಪ್ರಾಸ್ತಾವಿಕ ಮಾತನಾಡಿದರು, ಶಿಕ್ಷಕರಾದ ಲಕ್ಷ್ಮಿ ಮತ್ತು ರೇಣುಕಾ ನಿರೂಪಿಸಿದರು, ನಿರ್ಮಲಾ ಸ್ವಾಗತಿಸಿದರು, ಉದಯಕುಮಾರ ವಂದಿಸಿದರು. ಶಿಕ್ಷಣ  ಇಲಾಖೆಯ ಅಧಿಕಾರಿಗಳಾದ ಡಿ.ವೈ.ಪಿ.ಸಿ. ಬಸವನಗೌಡ, ಬಿ.ಆರ್.ಸಿ ಮಲ್ಲಕಾರ್ಜುನ, ಎಸ್.ಡಿ.ಎಂ.ಸಿ. ಅಧ್ಯಕ್ಷರು ಸದಸ್ಯರು, ಗ್ರಾಮಸ್ತರು ಕ್ಲಸ್ಟರ್‌ನ ಎಲ್ಲಾ ಮುಖ್ಯ ಗುರುಗಳು, ಶಿಕ್ಷಕರು ಹಾಜರಿದ್ದು ಕಾರ್ಯಕ್ರಮ ಯಶಸ್ವೀಗೊಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here