ಕಲಬುರಗಿ: ಕೋಲಿ ಕಬ್ಬಲಿಗ ನೌಕರರ ಸಂಘದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

0
147

ಕಲಬುರಗಿ ಜಿಲ್ಲೆಯ ಕೋಲಿ ಕಬ್ಬಲಿಗ ಸಮಾಜದ ನೌಕರರ ಸಂಘದ ವತಿಯಿಂದ ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಿದ್ದು, ಸರಕಾರಿ, ಅರೆ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಹಾಗೂ ಸಾಫ್ಟ್‍ವೇರ್ ಇಂಜಿನೀಯರಗಳು ಈ ಸಂಘದ ಸದಸ್ಯರಾಗಬಹುದು. ಕೋಲಿ ಕಬ್ಬಲಿಗ ಸಮಾಜದ ನೌಕರರ ಸಂಘದ ಅಧ್ಯಕ್ಷ ನೀಲಕಂಠ ಜಮಾದಾರ ಅವರ ನೇತೃತ್ವದಲ್ಲಿ ಪ್ರಾರಂಭಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ತಳವಾರ ತಿಳಿಸಿದ್ದಾರೆ.

ಸಪ್ಟೆಂಬರ್ 30.ರ ಅಂತ್ಯದೊಳಗಾಗಿ ಜಿಲ್ಲೆಯ ಪ್ರತಿಯೊಬ್ಬರೂ ಕೂಡಾ ಸದಸ್ಯರಾಗಬೇಕೆಂದು ಕೋರುತ್ತೇವೆ. 2018 ರಲ್ಲಿ ಈಗಾಗಲೇ “ಸ್ನೇಹ ಸಂಗಮ” ಹೆಸರಿನ ಪರಿಚಯ ಗ್ರಂಥದ ಮೂಲಕ 1212 ಜನ ನೌಕರರನ್ನು ಪರಿಚಯಿಸಿದ್ದು, ಪರಿಷ್ಕøತ ಮುದ್ರಣದೊಂದಿಗೆ 2022 ಸದಸ್ಯರ ಪರಿಚಯ ಗ್ರಂಥವನ್ನು ಹೊರತರಬೇಕೆಂಬುದು ಸಂಘದ ಮಹದಾಸೆಯಾಗಿದ್ದು, ಸದಸ್ಯರಾಗದೇ ಇರುವವರು ನೋದಂಣಿಗಾಗಿ ಸಂಘದ ಅಧ್ಯಕ್ಷ ನೀಲಕಂಠ ಜಮಾದಾರ ಮೋ ನಂ.9901572091, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ತಳವಾರ 9902424585, ಕಾರ್ಯಾಧ್ಯಕ್ಷ ಧರ್ಮರಾಜ ಜವಳಿ 9900979055, ಉಪಾಧ್ಯಕ್ಷ ಸಿದ್ದಪ್ಪ ಮಹಾಗಾಂವ 9731544409, ಸಂಘಟನಾ ಕಾರ್ಯದರ್ಶಿ ಅವಣ್ಣತಳವಾರ 9900464240 ಇವರನ್ನು ಸಂಪರ್ಕಿಸಿ ಸದಸ್ಯರಾಗಬೇಕೆಂದು ಎಂದು ತಳವಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here