ರಾಜಕಾರಣಿಗಳ ಜೊತೆ ಉತ್ತಮ ಸಂಪರ್ಕವಿರಲಿ – ಸಂಬಂಧವಲ್ಲ

0
49
  • ಕೆಯುಡಬ್ಲೂಜೆನಿಂದ ಮನೆಯಂಗಳದಲ್ಲಿ ಗೌರವಾರ್ಪಣೆ ಸಮಾರಂಭದಲ್ಲಿ ಟಿ.ವಿ. ಶಿವಾನಂದನ್ ಸಲಹೆ

ಒಬ್ಬ ವರದಿಗಾರನಾಗಿ ಓದುಗರಿಗೆ ಎಂದು ಅನ್ಯಾಯ ಮಾಡಿಲ್ಲ ಎಂಬ ತೃಪ್ತಿ ನನ್ನಲ್ಲಿ ಈಗಲೂ ಇದೆ. ಗೊತ್ತಿದ್ದೂತಪ್ಪು ಮಾಡಿಲ್ಲ. ಗೊತ್ತಾಗದೆ ತಪ್ಪುಗಳಾಗಿರಬಹುದು. ಪತ್ರಕಥ್ರಿಗೆ ವೃತ್ತಿನಿಷ್ಠೆಯ ಜೊತೆಗೆ ಸಾಮಾಜಿಕ ಕಾಳಜಿ ಮತ್ತು ಸಮಯ ಪ್ರಜ್ಞೆ ಅಗತ್ಯವಾಗಿದೆ. -ಟಿ.ವಿ. ಶಿವಾನಂದನ್, ಕಲಬುರಗಿ.

ಕಲಬುರಗಿ: ಸ್ವಾತಂತ್ರ್ಯಅಮೃತ ಮಹೋತ್ಸವ ಸಂದರ್ಭದಲ್ಲಿಕರ್ನಾಟಕಕಾರ್ಯನಿರತ ಪತ್ರಕರ್ತರ ಸಂಘ ಹಿರಿಯ ಪತ್ರಕರ್ತರಿಗೆಅವರ ಮನೆ ಅಂಗಳಲ್ಲಿ ಗೌರವಿಸುವ ಕಾರ್ಯಕ್ರಮದ ಅಂಗವಾಗಿ ಕಲಬುರಗಿಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘವು ಹಿರಿಯ ಪತ್ರಕರ್ತ ಟಿ.ವಿ. ಶಿವಾನಂದನ್ ಅವರನ್ನು ಗೌರವಿಸಿತು.

Contact Your\'s Advertisement; 9902492681

ಪತ್ರಕರ್ತ ಟಿ.ವಿ. ಶಿವಾನಂದನ್ ಅವರನ್ನುಅವರ ನಿವಾಸಕ್ಕೆ ತೆರಳಿ, ಪತ್ರಕರ್ತರ ಸಂಘದಜಿಲ್ಲಾಧ್ಯಕ್ಷ ಬಾಬರಾವಯಡ್ರಾಮಿ, ರಾಜ್ಯಕಾರ್ಯಕಾರಿ ಸಮಿತಿ ಸದಸ್ಯಡಾ.ಶಿವರಂಜನ ಸತ್ಯಂಪೇಟೆ, ಪ್ರಧಾನ ಕಾರ್ಯದರ್ಶಿ ಸಂಗಮನಾಥರೇವತಗಾಂವ, ಉಪಾಧ್ಯಕ್ಷದೇವಿಂದ್ರಪ್ಪಆವಂಟಿ, ಜಿಲ್ಲಾಕಾರ್ಯಕಾರಿ ಸಮಿತಿ ಸದಸ್ಯರಾಜು ಕೋಷ್ಠಿ, ಪತ್ರಕರ್ತರಾದ ಪ್ರವೀಣ ಪಾರಾ, ಜಗದೀಶಕುಂಬಾರ ಮತ್ತು ಪದಾಧಿಕಾರಿಗಳು ಸನ್ಮಾನಿಸಿದರು.

ನನ್ನ ೧೬-೧೭ನೇ ವಯಸ್ಸಿನಲ್ಲಿ ಪತ್ರಿಕೆಗಳನ್ನು ಮನೆ ಮನೆಗೆ ಹಾಕುತ್ತಿದ್ದೆ.ಆಗ ಬೆಳಗ್ಗೆ ೩ ಗಂಟೆಗೆ ಎದ್ದೇಳಬೇಕಿತ್ತು.ನನಗೆ ಆಗ ತಿಂಗಳಿಗೆ ೧೭.೫೦ ಪೈಸೆ ನೀಡುತ್ತಿದ್ದರು.ನಂತರಯುಎನ್‌ಐ ಸುದ್ದಿ ಸಂಸ್ಥೆಯಲ್ಲಿ ಮೆಸೆಂಜರ್ ಹುದ್ದೆಗೆ ಸೇರಿದೆ.ಆಗ ನನಗೆ ೯೦ ರೂ.ಸಂಬಳ ನೀಡಲಾಗುತ್ತಿತ್ತು.ಟೆಲಿಪ್ರಿಂಟರ್-ರಿಪೋರ್ಟ್‌ರ್‌ಆಗಿದ್ದ ನನಗೆ ಬರೆಯುವುದರಲ್ಲಿ ಆಸಕ್ತಿ ಇತ್ತು. ಇದನ್ನು ಗಮನಿಸಿದ ನಾರಾಯಣ ಮತ್ತುಥರಕನ್‌ಎಂಬುವವರು ಸಹಾಯ ಮಾಡಿದರು.

ಬೆಂಗಳೂರಿನಲ್ಲಿದ್ದ ನನಗೆ ಮದ್ರಾಸ್‌ಗೆ ವರ್ಗಾವಣೆಆಯಿತು.ಅಲ್ಲಿಂದ ಹುಬ್ಬಳ್ಳಿಗೆ ವರ್ಗವಾಯಿತು.೧೯೯೩ರಲ್ಲಿ ದಿ ಹಿಂದೂ ಪತ್ರಿಕೆಗೆ ಸೇರಿಕೊಂಡು ಕಲಬುರಗಿಗೆ ಬಂದೆ.ಕಲಬುರಗಿಜನ ನನ್ನನ್ನು ಬಿಡಲಿಲ್ಲ. ನಾನು ಅವರನ್ನು ಬಿಡಲಿಲ್ಲವೋಎನ್ನುವಂತೆ ನಿವೃತ್ತಿಯಾಗುವವರೆಗೆಇಲ್ಲಿಯೇ ಸೇವೆ ಸಲ್ಲಿಸಿ ಇಲ್ಲಿಯೇ ನೆಲೆ ನಿಂತಿದ್ದೇನೆಎಂದುತಮ್ಮ ವೃತ್ತಿ ಬದಕಿನಲ್ಲಾದ ಸಾಕಷ್ಟು ಏರಿಳಿತದ ಘಟನೆಗಳನ್ನು ಅವರು ವಿವರಿಸಿದರು.

ಹಿಂದೂ ಪತ್ರಿಕೆಯಲ್ಲಿ ಕೆಲಸ ಮಾಡುವಾಗ ಮದನ ಮೋಹನ್, ಸೂರ್ಯನಾರಾಯಣ, ಬೆಳಗಾಂವಕರ್ ಎಂಬುವವರು ನನಗೆ ಬಹಳ ಸಹಾಯ ಮಾಡಿದರು. ಕಲಬುರಗಿಯಲ್ಲಿದ್ದಾಗ ಮುಖ್ಯಮಂತ್ರಿ, ಮಂತ್ರಿ ಮಹೋದಯರನ್ನು ಬೇಟಿಯಾಗುವ, ವರದಿ ಮಾಡುವ  ವೇಳೆಯಲ್ಲಿ ಸುದ್ದಿಗಾಗಿ ರಾಜಕಾರಣಿಗಳೊಂದಿಗೆ ಸಾಕಷ್ಟು ಗುದ್ದಾಡಿದ್ದೇನೆ. ತಮಿಳು, ಇಂಗ್ಲಿಷ್ ಹಿಂದಿ ಭಾಷೆಗೊತ್ತಿದ್ದ ನನಗೆ ಕನ್ನಡಕಲಿಯುವ ಅವಕಾಶ ಇಲ್ಲಿ ಸಿಕ್ಕಿತು. ಮಾಜಿ ಮುಖ್ಯಮಂತ್ರಿಗಳಾದ ದೇವರಾಜುಅರಸು, ಆರ್.ಗುಂಡೂರಾವ್, ಬಂಗಾರಪ್ಪ, ವೀರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ, ದೇವೇಗೌಡ, ಎಸ್.ಆರ್.ಬೊಮ್ಮಾಯಿ, ಯಡಿಯೂರಪ್ಪ, ಧರ್ಮಸಿಂಗ್, ಎಂ.ಜಿ.ರಾಮಂಚಂದ್ರನ್, ಕರುಣಾನಿಧಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನಖರ್ಗೆಮುಂತದವರನ್ನುಕಂಡು, ಪ್ರೆಸ್‌ಮೀಟ್‌ನಲ್ಲಿ ಹಾಜರಾಗಿ ಸುದ್ದಿ ಮಾಡಿದ್ದು ನನ್ನ ಸ್ಮೃತಿಪಟಲದಲ್ಲಿಇನ್ನೂ ಹಚ್ಚ ಹಸಿರಾಗಿದೆ.

ಸುದ್ದಿಯನ್ನು ಸುದ್ದಿಯನ್ನಾಗಿ ನೋಡಬೇಕಷ್ಟೆ.ನಮ್ಮ ವೈಯಕ್ತಿಕ ವಿಚಾರಗಳನ್ನು ಅದರಲ್ಲಿ ಸೇರಿಸಬಾರದು.ರಾಜಕಾರಣಿಗಳಜೊತೆಉತ್ತಮ ಸಂಪರ್ಕ ಇಟ್ಟುಕೊಳ್ಳಬೇಕು. ಆದರೆ ಸಂಬಂಧ ಬೆಳೆಸಬಾರದು ಎಂದು ಸಲಹೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here