ಹೈದ್ರಾಬಾದ್ ಕರ್ನಾಟಕದ ೧೮೬ ಪ್ರೌಢಶಾಲಾ ಶಿಕ್ಷಕರ ಮುಂಬಡ್ತಿ ಅನ್ಯಾಯ ಸರಿಪಡಿಸಲು ಆಗ್ರಹ

0
68

ಕಲಬುರಗಿ: ವಿಭಾಗದ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರ್, ಕೊಪ್ಪಳ್ ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ೧೯೯೮ರಲ್ಲಿ ವಿಭಾಗ ಮಟ್ಟದ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಾದ ೬೮೬ ಸಹ ಶಿಕ್ಷಕರಿಗೆ ಮುಂಬಡ್ತಿ ನೀಡುವಲ್ಲಿ ಅನ್ಯಾಯವಾಗುತ್ತಿದ್ದು, ಈ ಅನ್ಯಾಯ ಸರಿಪಡಿಸುವಂತೆ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮತ್ತು ಕಾರ್ಯದರ್ಶಿಗಳಿಗೆ ಮನವಿ ಮಾಡಲಾಗುವುದು ಎಂದು ಈಶಾನ್ಯ ವಲಯ ಶಿಕ್ಷಕರ ವೇದಿಕೆಯ ಅಧ್ಯಕ್ಷ ಎಂ.ಬಿ. ಅಂಬಲಗಿ ಅವರು ತಿಳಿಸಿದ್ದಾರೆ.

೨೦೦೨ರಿಂದ ೨೦೦೪ ರ ವರೆಗೆ ನೇಮಕಾತಿಯಾದ ನಾನ್ ಹೆಚ್.ಕೆ. ಅಡಿಯಲ್ಲಿ ನೇಮಕಾತಿಯಾದ ೧೮೦ ಶಿಕ್ಷಕರಿಗೆ ಮುಂಬಡ್ತಿ ನೀಡುತ್ತಿದ್ದು, ಆದರೆ ೧೯೯೮ರಲ್ಲಿ ನೇಮಕಾತಿಯಾದ ೬೮೬ ಶಿಕ್ಷಕರನ್ನು ಮುಂಬಡ್ತಿ ನೀಡುತ್ತಿಲ್ಲ. ಇದರಿಂದ ಹೈದ್ರಾಬಾದ್ ಕರ್ನಾಟಕ ಭಾಗದವರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

Contact Your\'s Advertisement; 9902492681

ಮುಂಬಡ್ತಿಯಿಂದ ವಂಚಿತರಾಗುತ್ತಿರುವ ಶಿಕ್ಷಕರ ಕುರಿತು ಚರ್ಚಿಸುವುದಕ್ಕಾಗಿ ಅಗಸ್ಟ್ ೧೦ರಂದು ಶನಿವಾರ ಮಧ್ಯಾಹ್ನ ೨ ಗಂಟೆಗೆ ನಗರದ ಕನ್ನಡ ಭವನದಲ್ಲಿ ಸಭೆ ಕರೆಯಲಾಗಿದೆ.ಸಭೆಗೆ ಮುಂಬಡ್ತಿಯಿಂದ ವಂಚಿತರಾಗುತ್ತಿರುವ ಶಿಕ್ಷಕರು ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ೯೮೮೦೧೬೯೯೦೭ ಗೆ ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಅವರು ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here