ನಿಸ್ವಾರ್ಥ ಕಾಯಕದಿಂದ ಮಾತ್ರ ಬದುಕು ಸಾರ್ಥಕ: ಧನ್ನೂರ್

0
39

ಬೀದರ್: ಯಾರು ತನ್ನ ಜೀವನದುದ್ದಕ್ಕೂ ನಿಸ್ವಾರ್ಥ ಕಾಯಕ ಮಾಡುತ್ತಾರೋ ಅವರ ಬದುಕು ನಿಜಕ್ಕೂ ಸಾರ್ಥಕವಾಗುತ್ತದೆ ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ್ ಧನ್ನೂರ್ ಅವರು ಹೇಳಿದರು.

ಜಿಲ್ಲೆಯ ಕಮಲನಗರ್ ತಾಲ್ಲೂಕಿನ ಸಂಗಮ್ ಗ್ರಾಮದಲ್ಲಿ ಮಲ್ಲಿಕಾರ್ಜುನ್ ಬಿರಾದಾರ್ ಅವರ ಸೇವಾ ನಿವೃತ್ತಿ ನಿಮಿತ್ಯ ಅಭಿನಂದನಾ ಸಮಾರಂಭ ಹಾಗೂ ಬಸವಜ್ಯೋತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಯಕ ಎಂದರೆ ಕೇವಲ ಎಲ್ಲರೂ ಡಾಕ್ಟರ್, ಇಂಜಿನಿಯರ್, ಶಿಕ್ಷಕ, ಉಪನ್ಯಾಸಕರೇ ಆಗಬೇಕೆಂದೇನಿಲ್ಲ. ತಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಆ ಕಾಯಕವನ್ನು ನಿಸ್ವಾರ್ಥದಿಂದ, ನಿರ್ವಂಚನೆಯಿಂದ ಮಾಡಿದರೆ ತೃಪ್ತಿ ಸಿಗುತ್ತದೆ ಎಂದರು.

Contact Your\'s Advertisement; 9902492681

ಅಧ್ಯಕ್ಷತೆಯನ್ನು ಔರಾದ್ ತಾಲ್ಲೂಕಿನ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಡಾ. ಮಹೇಶ್ ಬಿರಾದಾರ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ರಾಜೇಂದ್ರ ಜೊನ್ನಿಕೇರಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ್ ಗಂದಗೆ, ಹಿರಿಯ ಮುಖಂಡರಾದ ಶಿವರಾಜ್ ಪಾಟೀಲ್ ಅತಿವಾಳ್, ಬಸವಂತರಾವ್ ಬಿರಾದಾರ್, ಕಿಶನರಾವ್ ಜಾಧವ್, ಅವಿನಾಶ್ ಸೂರ್ಯವಂಶಿ, ಬಸವರಾಜ್ ಸಂಗಮದ್, ಮಹಾರುದ್ರ ಡಾಕುಳಗೆ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದಿದ ಮಲ್ಲಿಕಾರ್ಜುನ್ ಬಿರಾದಾರ್ ದಂಪತಿಗಳಿಗೆ ಸನ್ಮಾನಿಸಲಾಯಿತು.

ಗುಂಡಪ್ಪ ಬಿರಾದಾರ್ ಅವರು ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ್ ಸ್ವಾಮಿ ಅವರು ಸ್ವಾಗತಿಸಿದರು. ಮಲ್ಲಿಕಾರ್ಜುನ್ ಬಿರಾದಾರ್ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಡಿ. ದೇವರಾಜ್ ಅರಸ್ ಶಾಲೆಯ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಹಾಗೂ ನೂರಾರು ಶರಣ-ಶರಣೆಯರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here