ಕಲಬುರಗಿ: 2022-23ನೇ ಸಾಲಿನ ಕಲಬುರಗಿ ತಾಲೂಕ ಮಟ್ಟದ ದಸರಾ ಕ್ರೀಡಾಕೂಟವನ್ನು ಇದೇ ಸೆಪ್ಟೆಂಬರ್ 1 ರಂದು ಬೆಳಿಗ್ಗೆ 10 ಗಂಟೆಗೆ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕ್ರೀಡಕೂಟದಲ್ಲಿ ತಾಲೂಕಿನ ಪುರುಷ/ಮಹಿಳಾ ಕ್ರೀಡಾಪಟುಗಳು ಭಾಗವಹಿಸಬಹುದೆಂದು ಯುವ ಸಬಲೀಖರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಥ್ಲೆಟಿಕ್ಸ್, 100 ಮೀ.200 ಮೀ. 400 ಮೀ. ಓಟ 800 ಮೀ. 1500 ಮೀ. 5000 ಮೀ. ಓಟ ಉದ್ದ ಜಿಗಿತ, ಎತ್ತರ ಜಿಗಿತ, ಟ್ರಿಪಲ್ ಜಂಪ್, ಗುಂಡು ಎಸೆತ, ಜಾವಲಿನ್ ಎಸೆತ, ಡಿಸ್ಕಸ್ ಎಸೆತ, ಜಾವಲಿನ್ ಎಸೆತ, ಡಿಸ್ಕಸ್ ಎಸೆತ, 110 ಮೀ. ಹರ್ಡಲ್ಸ್, 4ಘಿ100 ಮೀ ರಿಲೇ, 4ಘಿ400 ಮೀ ರಿಲೇ. ಪುರುಷರು ಮಹಿಳೆ ಭಾಗವಹಿಸಬಹುದು.
ಖೋ, ಖೋ, ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಪುಟ್ಬಾಲ್, ತಲಾ 12 ರಂತೆ ಜನರು ಮಹಿಳೆಯ ಪುರಷರು ಭಾಗವಹಿಸಬಹುದು. ಪುಟ್ಬಾಲ 18 ಜನರು ಭಾಗವಹಿಸಬಹುದು. ತಾಲ್ಲೂಕ ಮಟ್ಟದಲ್ಲಿ ಆಯ್ಕೆ ಮಾಡಬೇಕಾದ ಕ್ರೀಡೆಗಳು ( ಮಹಿಳೆಯರಿಗೆ/ಪುರುಷರಿಗೆ) ಬ್ಯಾಸ್ಕೆಟ್ ಬಾಲ್, 12, ಬ್ಯಾಡ್ಮಿಂಟನ್, 4, ಹ್ಯಾಂಡ್ ಬಾಲ್ 12, ಹಾಕಿ 18, ಟೇಬಲ್ ಟೆನ್ನಿಸ್ 4, ಬಾಲ್ ಬ್ಯಾಡ್ಮಿಂಟನ್ 12, ಟೆನ್ನಿಸ್ 4, ನೆಟ್‍ಬಾಲ್, 12 ಭಾಗವಹಿಸಬಹುದು.
ಕುಸ್ತಿ ಪುರುಷರಿಗೆ:- ಪ್ರೀ ಸ್ಟೈಲ್-57 ಕೆಜಿ. 61 ಕೆಜಿ 65 ಕೆಜಿ, 70 ಕೆಜಿ, 79 ಕೆಜಿ, 86 ಕೆಜಿ, 92+ ಕೆಜಿ, 97 ಕೆಜಿ, 125 ಕೆಜಿ, ಗ್ರೀಕೋರೋಮನ್-55 ಕೆಜಿ 60 ಕೆಜಿ, 63 ಕೆಜಿ, 72 ಕೆಜಿ,77 ಕೆಜಿ 87+ ಕೆಜಿ, 97 ಕೆಜಿ, 130 ಕೆಜಿ, ಕುಸ್ತಿ ಮಹಿಳೆಯರಿಗೆ:- ಪ್ರೀ ಸ್ಟೈಲ್-50 ಕೆಜಿ, 53ಕೆಜಿ, 55ಕೆಜಿ,70 ಕೆಜಿ, 79ಕೆಜಿ, 86ಕೆಜಿ, 92+ಕೆಜಿ, 97 ಕೆಜಿ, 125 ಕೆಜಿ. ಈಜು ಪುರುಷರಿಗೆ:-ಪ್ರೀ ಸ್ಟೈಲ್-100 ಮೀ. 200 ಮೀ.400 ಮೀ. 4ಘಿ 100 ಮೀ. ಬ್ಯಾಕ್ ಸ್ಟೋಕ್-100 ಮೀ. 200 ಮೀ. ಬ್ರೆಸ್ಟ್ ಸ್ಟೋಕ್-100 ಮೀ. 200ಮೀ. ಬಟರ್ ಪ್ಲೈ-100 ಮೀ, ಇಂಡುವಿಜುಯಲ್ ಮಿಡ್ಲೆ 200ಮೀ. ಈಜು ಮಹಿಳೆ:- ಪ್ರೀ ಸ್ಟೈಲ್- 100 ಮೀ. 200 ನು, 400 ಮೀ. 4ಘಿ 100 ಮೀ. ಬ್ಯಾಕ್ ಸ್ಟೋಕ್-100 ಮೀ. 200 ಮೀ. ಬ್ರೆಸ್ಟ್ ಸ್ಟೋಕ್-100 ಮಿ, 200ಮೀ.ಲ ಬಟರ್ ಪ್ಲೈ-100 ಮೀ.
ಆಯಾ ತಾಲ್ಲೂಖಿನ ಕ್ರೀಡಾಪುಟಗಳು ಮಾತ್ರ ಭಾಗವಹಿಸಬೇಕು. ಅರ್ಹತೆ ಹೊಂದಿದವರು ಆಧಾರ ಕಾರ್ಡ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಕಾರ್ಯಕ್ರಮದ ಆಯೋಜಕರಿಗೆ ಸಲ್ಲಿಸಬೇಕು. ನಿಗದಿತ ದಿನಾಂಕ ಬೆಳಿಗ್ಗೆ 9 ಗಂಟೆಗೆ ವರದಿ ಮಾಡಿಕೊಂಡು ಹೆಸರು ನೊಂದಾಯಿಸಿಕೊಳ್ಳತಕ್ಕದು ಹೆಚ್ಚಿನ ಮಾಹಿತಿಗಾಗಿ ಸಂಜಯ ಬಾಣದ ಮೊ.ನಂ. 9844029235 ಸಂಪರ್ಕಿಸಬೇಕು.