ಮಕ್ಕಳ ಸಾಹಿತ್ಯ ಪರಿಷತ್ತಿಗೆ ತಾಲೂಕು ಅಧ್ಯಕ್ಷರ ನೇಮಕ

2
497

ಕಲಬುರಗಿ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪರಿಷತ್ತಿನ ಉದ್ದೇಶವನ್ನು ಪಾಲಿಸಿಕೊಂಡು, ತಾಲೂಕಿನಾದ್ಯಂತ ಮಕ್ಕಳಲ್ಲಿ ಸಾಹಿತ್ಯಾಭಿರುಚಿ, ಸೃಜನಶೀಲ ಬರವಣಿಗೆ, ಪರಿಸರ ಸಂರಕ್ಷಣೆ, ಸಹಬಾಳ್ವೆ ಮತ್ತು ದೇಶಾಭಿಮಾನವನ್ನು ಬೆಳೆಸುವ ನಿಟ್ಟಿನಲ್ಲಿ, ತಾಲೂಕು ಘಟಕವನ್ನು ರಚಿಸಿಕೊಂಡು ಕಾರ್ಯನಿರ್ವಹಿಸುವ ಹಿನ್ನೆಲೆಯಲ್ಲಿ ಹೊಸ ತಾಲೂಕು ಸೇರಿದಂತೆ ಎಲ್ಲಾ ತಾಲೂಕುಗಳಿಗೆ ಅಧ್ಯಕ್ಷರನ್ನು ನೇಮಿಸಿದ್ದಾರೆ.

Contact Your\'s Advertisement; 9902492681

ಕಲಬುರಗಿ ತಾಲೂಕು ಅಧ್ಯಕ್ಷರನ್ನಾಗಿ ಶಿಕ್ಷಕ ಬಾಬು ಜಾಧವ, ಅಫಜಲಪುರ ತಾಲೂಕಿಗೆ ಶಿಕ್ಷಕಿ ಚಂದ್ರಕಲಾ, ಆಳಂದ ತಾಲೂಕಿಗೆ ಪಿಯು ಕಾಲೇಜಿನ ಪ್ರಾಚಾರ್ಯ ಅಪ್ಪಾಸಾಬ ಬಿರಾದಾರ, ಸೇಡಂಗೆ ಶಿಕ್ಷಕಿ ಆರತಿ ಕಡಗಂಚಿ, ಚಿಂಚೋಳಿಗೆ ಪತ್ರಕರ್ತ ಶಿವರಾಜ ವಾಲಿ, ಜೇವರ್ಗಿಗೆ ಶಿಕ್ಷಕ ಪಂಡಿತ ನೆಲ್ಲಗಿ, ಚಿತ್ತಾಪುರಕ್ಕೆ ಶಿಕ್ಷಕ ನರಸಪ್ಪ ಚಿನ್ನಕಟ್ಟಿ ಅವರನ್ನು ನೇಮಕ ಮಾಡಿದ್ದಾರೆ.

ಹೊಸ ತಾಲೂಕುಗಳಾದ ಕಮಲಾಪುರಕ್ಕೆ ಪ್ರಾಧ್ಯಾಪಕ ಡಾ.ಶರಣಬಸಪ್ಪ ವಡ್ಡನಕೇರಿ, ಕಾಳಗಿಗೆ ಶಿಕ್ಷಕ ಮಲ್ಲಪ್ಪ ಪೂಜಾರಿ, ಯಡ್ರಾಮಿಗೆ ನಾಗಣ್ಣ ಸಜ್ಜನ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಲಬುರಗಿ ದಕ್ಷಿಣ ವಿಧಾನಸಭೆ ಕ್ಷೇತ್ರಕ್ಕೆ ಹರಿಕೃಷ್ಣ, ಉತ್ತರ ಕ್ಷೇತ್ರಕ್ಕೆ ರಾಜಕುಮಾರ ಎಸ್.ಕೆ. ಹಾಗೂ ಶಹಾಬಾದ್‌ಗೆ ಮರಲಿಂಗ ಯಾದಗಿರಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಲೂಕಿನಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತಿನ ಘಟಕವನ್ನು ರಚಿಸಿ, ಮಕ್ಕಳ ಏಳಿಗೆ ಹಾಗೂ ಅವರಲ್ಲಿ ಸಾಹಿತ್ಯಾಭಿರುಚಿಗೆ ಕಾರಣವಾಗುವ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಮ.ಸಾ.ಪ.ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ತಿಳಿಸಿದ್ದಾರೆ.

2 ಕಾಮೆಂಟ್ಗಳನ್ನು

  1. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕಲಬುರ್ಗಿ
    ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರುಗಳಿ ಅಭಿನಂದನೆಗಳು ಹಾಗೂ ಜಿಲ್ಲಾ ಅಧ್ಯಕ್ಷರಾದ ಶ್ರೀ ಮಹಿಪಾಲರೆಡ್ಡಿ ಸರ್ ಅವರಿಗೂ ವಂದನೆಗಳು.

    (ಮಕ್ಕಳಲ್ಲಿ ಸಾಹಿತ್ಯ ಆಸಕ್ತಿ ಮುಗಿಸುವುದು)

    ಶ್ರೀ ಸಂಜೀವಕುಮಾರ ನಡುಕರ
    ಎಂ.ಎ.ಬಿ.ಈಡ್.ನೆಟ್ (ಪಿಹೆಚ್.ಡಿ)
    ಕ್ಷೇತ್ರ ಸಂಪನ್ಮೂಲ ವ್ಯಕ್ತಿ
    ಕ್ಷೇತ್ರ ಸಂಪನ್ಮೂಲ ಕೇಂದ್ರ ಬಸವಕಲ್ಯಾಣ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here