ಹಸಿರೇ ಉಸಿರು; ಮಾಜಿ ಶಾಸಕ ಬಿ.ಆರ್.ಪಾಟೀಲ

0
172

ಕಲಬುರಗಿ: ನಗರದ ಕೆ.ಹೆಚ್.ಬಿ ಕಾಲೋನಿ ಹಾಗೂ ಅಕ್ಕಮಹಾದೇವಿ ಕಾಲೋನಿಯಲ್ಲಿರುವ ಮಕ್ಕಳ ಸ್ನೇಹಿ ವೆಸ್ಟವಿಂಗ್ ಉದ್ಯಾನವನದಲ್ಲಿ ಭಾರತ ಸರಕಾರದ ಕೌಶಲ್ಯ ಅಭಿವೃಧ್ದಿ ಮತ್ತು ಉದ್ಯಮಶೀಲತಾ ಮಂತ್ರಾಲಯದಿಂದ ಜನ ಶಿಕ್ಷಣ ಸಂಸ್ಥಾನದ ಮುಖಾಂತರ ನಡೆಯುತ್ತಿರುವ ಸ್ಕಿಲ್ ಸೆ ಸಂಪೂರ್ಣ ಸ್ವಚ್ಚತಾ ಕಾರ್ಯಕ್ರಮ ಜೊತೆಗೆ ಕೌಶಲ್ಯ ಪಕವಾಡ ಕಾರ್ಯಕ್ರಮವೂ ಜುಲೈ ೧೬ ರಿಂದ ೩೧ ರವರೆಗೆ ಸ್ವಚ್ಚತೆಗೆ ಸಂಬಂಧಿಸಿದಂತೆ ಶಾಲಾ ಕಾಲೇಜುಗಳಲ್ಲಿ ಸ್ವಚ್ಚತೆಯ ಜೊತೆಗೆ ಶ್ರಮದಾನ ಕಾರ್ಯಕ್ರಮವೂ ಹಾಗೂ ತ್ಯಾಜ್ಯವಸ್ತುಗಳ ನಿರ್ವಹಣೆ ಸ್ಕಿಲ್ ಸೆ ಸಂಪೂರ್ಣ ಸ್ವಚ್ಚತಾ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಮಾಜಿ ಶಾಸಕ ಬಿ.ಆರ್.ಪಾಟೀಲ್ ಸಸಿ ನಡೆಸುವ ಮೂಲಕ ಮುಕ್ತಾಯ ಗೋಳ್ಳಿಸಿದರು.

ನಂತರ ಮಾತನಾಡಿ ಪ್ರತಿ ಜೀವಿಯೂ ಬದುಕಬೇಕಾದರೆ ಗಾಳಿ ಆಮ್ಲಜನಕ ಅವಶ್ಯಕತೆ ಇದೆ, ನಾವು ಉಸಿರಾಡಬೇಕಾದರೂ ಗಾಳಿ ಬೇಕು. ಇಂದಿನ ದಿನಗಳಲ್ಲಿ ಜೀವನ ಪೂರ್ತಿ ಗಿಡ ಮರಗಳನ್ನು ಬೆಳೆಸಬೇಕು. ಅರಳಿ ಮರದ ಕೆಳಗೆ ಕೂತರೆ ಉತ್ಸಾಹ, ಸ್ಪೂರ್ತಿ, ಶಕ್ತಿ ಬರುತ್ತದೆ ಬುಧ್ಧನಿಗೂ ಜ್ಞಾನೋದಯ ಆಗಿದ್ದು ಅರಳಿ ಮರದ ಕೆಳಗೆ, ಗಿಡ ಮರಗಳನ್ನು ಬೆಳೆಸುವುದರಿಂದ ಅಂತರ್ಜಲ ಹೆಚ್ಚಾಗುತ್ತದೆ. ಮಳೆ ತರುವುದಕ್ಕೆ ಸಹಾಯ ಮಾಡುವುತ್ತದೆ ಹಾಗೂ ಮಣ್ಣಿನ ಸವಕಳಿ ಕಡಿಮೆ ಮಾಡುತ್ತದೆ. ಹಸಿರೇ ಉಸಿರು ಎಂದು ಆಳಂದ ತಾಲ್ಲೂಕಿನ ಮಾಜಿ ಶಾಸಕ ಬಿ.ಆರ್.ಪಾಟೀಲ ರವರು ಸಸಿ ನಡೆಸಿ ಹೇಳಿದರು.

Contact Your\'s Advertisement; 9902492681

ಎಲ್ಲಿ ಕನಿಷ್ಟ ಎರಡು ಸಾವಿರ ಮರಗಳಿರುತ್ತವೆಯೋ ಅಲ್ಲಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇರುತ್ತದೆ. ಗಿಡ ಮರಗಳನ್ನು ಬೆಳೆಸುವುದರ ಮುಖಾಂತರ ನಾವು ಬದುಕೋಣ ಇನ್ನೊಬ್ಬರಿಗೂ ಬದುಕಿಸೋಣ ನಾವು ನಿಸರ್ಗದ ಪರವಾಗಿ ಹಿತಕ್ಕಾಗಿ ಬದುಕೋಣ ಎಂದು ವಕೀಲರಾದ ವೈಜನಾಥ ಪಾಟೀಲ ರವರು ಹೇಳಿದರು.

ನಾವು ಬಳಸುತ್ತಿರುವ ಹುಣಸೆ ಮರ, ಮಾವಿನ ಮರ ಬೇವಿನ ಮರ ಇವುಗಳನ್ನು ನಾವು ಬೆಳೆಸಿದ್ದಲ್ಲ ಇವುಗಳು ಹಿರಿಯರು ನಮಗೆ ಬಿಟ್ಟು ಹೋಗಿರುವ ಆಸ್ತಿಯಾಗಿದೆ, ಹಾಗಿರುವಾಗ ನಾವು ಏನಾದರೂ ಮುಂದಿನ ಪೀಳಿಗೆಗಳಿಗೆ ಬದುಕಲು ಬಿಟ್ಟು ಹೋಗಬೇಕಾಗಿರುವುದು ಶುಧ್ಧವಾದ ಗಾಳಿ ಪಡೆಯಲು ಗಿಡ ಮರಗಳನ್ನು ನಡೆಸಲೇಬೇಕು ಎಂದು ಗುಲಬರ್ಗಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬಾಬುರಾವ ಪಾಟೀಲ ಹೇಳಿದರು.

ನಮ್ಮ ಉಸಿರಾಟಕ್ಕೆ ಒಂದು ಗಿಡ ನಮ್ಮವರಿಗಾಗಿ ಇನ್ನೊಂದು ಗಿಡ ಬೆಳೆಸುವುದರ ಮುಖಾಂತರ ಎಲ್ಲರಿಗೂ ಸಾಕಷ್ಟು ಶುಧ್ಧ ಗಾಳಿ ಸಿಗುವಂತಾಗಬೇಕು ಎಂದು ಜನ ಶಿಕ್ಷಣ ಸಂಸ್ಥಾನದ ನಿರ್ದೇಶಕ ಲಕ್ಷ್ಮೀಕಾಂತ ಪಾಟೀಲ ಹೇಳಿದರು.
ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಗಣೇಶ ಪಾಟೀಲ, ಕಲಬುರಗಿ ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದರಾಮ ಪ್ಯಾಟಿ, ಯುವ ಮುಖಂಡರಾದ ಪ್ರಕಾಶ ಪಾಟೀಲ, ಶ್ರೀಮತಿ ಭಾಗಮ್ಮ, ದತ್ತಾತ್ರೇಯ ಹೊನ್ನಳ್ಳಿ, ಅಂಬಾರಾಯ ಪಾಟೀಲ, ತುಕಾರಾಮ ಪಾಟೀಲ ಉಪಸ್ಥಿತರಿದ್ದರು.

ಕಾರ್ಯಕ್ರಮ ಪಾರ್ವತಿ ಹಿರೇಮಠ ನಿರೂಪಿಸಿದರು, ಕುಮಾರಿ ಓಂಕಾರಮ್ಮ ಸ್ವಾಗತಿಸಿದರು, ಕಾಶಿರಾಯ ಜೋಗದಾನಕರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here