ಕಲಬುರಗಿ:- ಕಳೆದ ೪೦ ದಿನಗಳಿಂದ ನಿರಂತರವಾಗಿ ಅಯ್ಯುಪ್ಪ ಸ್ವಾಮಿ ಭಕ್ತರು ಮಾಲೆ ಧರಿಸಿ ಕಠಿಣ ವೃತ್ತ ಆಚರಣೆಯ ಮುಕ್ತಾಯದ ಅಂಗವಾಗಿ ಇರುಮುಡಿ ಮಹಾಪೂಜೆ ಹಾಗೂ ಶ್ರೀ ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿಗಳಾದ ಚಿರಂಜೀವಿ ದೊಡ್ಡಪ್ಪ ಅಪ್ಪಾ ಅವರ ತುಲಾಭಾರ ಕಾರ್ಯಕ್ರಮವು ನಾಳೆ (ಸೆ. ೦೩) ನಗರದ ಅಪ್ಪನ ಕೆರೆ ಹತ್ತಿರದ ಕಲ್ಯಾಣಿ ಕಲ್ಯಾಣ ಮಂಟಪದ ಹತ್ತಿರದ ಶಬರಿ ಸಂಕಲ್ಪ ಸನ್ನಿಧಾನದಲ್ಲಿ ಹಮ್ಮಿಕೊಳ್ಳಲಾಗಿದೆ .
ಗುರುಸ್ವಾಮಿ ತುಕಾರಾಮ ಚಿತ್ತಾಪೂರ ಅವರ ನೇತೃತ್ವದಲ್ಲಿ ಸುಮಾರು ೬೫ ಮಾಲಾಧಾರಿಗಳು ಕಠಿಣ ವೃತ್ತದೊಂದಿಗೆ ಅಯ್ಯಪ್ಪ ಸ್ವಾಮಿ ಅವರ ಧ್ಯಾನ, ಹಾಗೂ ಶ್ರದ್ಧಾ-ಭಕ್ತಿ ಯಿಂದ ಪೂಜೆ ನೆರವೇರಿಸಲಾಗುತ್ತದೆ.
ಶನಿವಾರ ಸೆ. ೦೩ ರಂದು ಬೆಳಿಗ್ಗೆ ೧೦-೪೪ಕ್ಕೆ ಮಹಾಮಂಗಳಾರತಿ ನಡೆಯುತ್ತದೆ. ನಂತರ ೧೧-೦೦ ಗಂಟೆಯಿಂದ ೧೧.೪೫ವರೆಗೆ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಗೋವಾ ಹೋಟೆಲ್, ಕಲ್ಯಾಣಿ ಪೆಟ್ರೋಲ್ ಬಂಕ್ ಮಾರ್ಗವಾಗಿ ಕಲ್ಯಾಣಿ ಕಲ್ಯಾಣ ಮಂಟಪದ ಹತ್ತಿರದ ಶಬರಿ ಸಂಕಲ್ಪ ಸನ್ನಿಧಾನದವರೆಗೆ ಭವ್ಯ ಮೆರವಣಿಗೆ ನಡೆಯಲಿದೆ. ನಂತರ ೧೨.೪೫ಕ್ಕೆ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅವರ ತುಲಾಭಾರ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸುಕ್ಷೇತ್ರ ಶ್ರೀನಿವಾಸ ಸರಡಗಿಯ ಅಪ್ಪಾರಾವ ಮುತ್ಯಾ ಸುಕ್ಷೇತ್ರ ನರನಾಳ ಸೊಂತದ ಶಿವಕುಮಾರ ಶಿವಾಚಾರ್ಯರು, ಮುಲ್ಲಾಮಾರಿ ತೀರದ ಶಂಕರಲಿಂಗ ಮಹಾರಾಜರು ಸಾನಿಧ್ಯ ವಹಿಸುವರು.
ಗುರುಸ್ವಾಮಿಗಳಾದ ಬಸಯ್ಯ ಸಾಲಿಮಠ, ನಾಗರಾಜ ಸಜ್ಜನ, ಚಂದ್ರು ಮಾಲೀಪಾಟೀಲ, ೧೮ ವರ್ಷ ಪೂರೈಸಿದ ಗುರುಸ್ವಾಮಿಗಳಾದ ತುಕಾರಾಮ ಜಿ. ಚಿತ್ತಾಪೂರ ಇವರಿಗೆ ಸಕಲ ಶ್ರೀಗಳಿಂದ ತೆಂಗಿನ ಸಸಿಯನ್ನು ಸಮರ್ಪಿಸಿ ಆಶೀರ್ವದಿಸಲಾಗುವುದು.
ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಬಿ. ಪಾಟೀಲ ಹಾಗೂ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮುಡ ಅವರಿಂದ ಸನ್ನಿಧಾನ ಸ್ಥಳದ ದಾನಿಗಳಾದ ರುದ್ರಶೆಟ್ಟಿ ಕಲ್ಯಾಣಿ ಅವರಿಗೆ ಸನ್ಮಾನ ನಡೆಯಲಿದೆ.
ಗುರುಸ್ವಾಮಿಗಳಾದ ಕಣ್ಣಿ, ಕತ್ತಿ, ಘಂಟೆ, ಗಾಧಾ ಹಾಗೂ ಗುರುಸ್ವಾಮಿಗಳಾದ ಕಲ್ಲಪ್ಪ ಯಾದವ, ದೀಪಕ ಹೊಡಲ್, ವಿಶ್ವಾನಾಥ ಜೀವಣಗಿ, ಪ್ರಮೋದ ಧುಮಾಳೆ, ಶ್ರೀನಿವಾಸ ರಂಚೇರಿ, ಪ್ರಜ್ವಲ್ ವೆಂಕಟರಾವ, ರಾಜು ಲಾರಾ ಟೇಲರ್, ಪವನ ಆರ್. ಚಿತ್ತಾಪೂರ ಸೇರಿದಂತೆ ಅನೇಕರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ್ದಾರೆ.