ಶಹಾಬಾದ್: ತಾಲೂಕಿನ ತೊನಸನಳ್ಳಿ (ಎಸ್) ಗ್ರಾಮದ ಭಾವೈಕ್ಯತೆಯ ತಾಣವಾದ ಶ್ರೀ ಅಲ್ಲಮಪ್ರಭು ಸಂಸ್ಥಾನ ಮಠದ ಪೀಠದ ಪೀಠಾಧಿಪತಿ ಮಲ್ಲಣ್ಣಪ್ಪ ಮಹಾಸ್ವಾಮಿಯವರ ನೇತೃತ್ವದಲ್ಲಿ ಶಹಾಬಾದ ತಾಲೂಕಿನ ಸುಕ್ಷೇತ್ರ ತೊನಸನಹಳ್ಳಿ ಗ್ರಾಮದಲ್ಲಿರುವ ಶ್ರೀ ಅಲ್ಲಮಪ್ರಭು ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಮಂಗಲೋತ್ಸವ ಹಾಗೂ ಧರ್ಮ ಸಭೆ ಕಾರ್ಯಕ್ರಮಕ್ಕೆ ರಾವೂರನ ಸಿದ್ಧಲಿಂಗೇಶ್ವರ ಸಂಸ್ಥಾನ ವಿರಕ್ತಮಠದ ಪೂಜ್ಯ ಶ್ರೀ ಸಿದ್ಧಲಿಂಗ ದೇವರು ಕಾರ್ಯಕ್ರಮ ಉದ್ಘಾಟಿಸಿದರು.
ಪೇಠಶಿರೂರನ ಸಿದ್ಧಲಿಂಗೇಶ್ವರ ಸಂಸ್ಥಾನ ವಿರಕ್ತಮಠದ ಶ್ರೀ ಮ.ನಿ.ಪ್ರ ಸಿದ್ಧಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದರು.
ಮಾಜಿ ಸಚಿವರು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ನೂತನ ವಿಧಾನ ಪರಿಷತ್ ಸದಸ್ಯ ಬಾಬುರಾವ ಚಿಂಚನಸೂರ ಹಾಗೂ ಕೇಂದ್ರ ಆಹಾರ ನಿಗಮ ಮಂಡಳಿಯ ರಾಜ್ಯ ಸಲಹಾ ಸಮಿತಿ ಸದಸ್ಯರು ಭಾರತ ಸರಕಾರ ಹಾಗೂ ಚಿತ್ತಾಪೂರನ ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಅಮರೇಶ್ವರಿ ಬಾಬುರಾವ ಚಿಂಚನಸೂರ ದಂಪತಿಗಳನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು.
ನೂತನ ವಿಧಾನ ಪರಿಷತ್ ಸದಸ್ಯ ಬಾಬುರಾವ ಚಿಂಚನಸೂರ ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಅಲ್ಲಮಪ್ರಭು ಸಂಸ್ಥಾನ ಮಠ ತೊನಸನಹಳ್ಳಿ ,ಕಲ್ಯಾಣ ಕರ್ನಾಟಕದ ಪ್ರತಿಷ್ಠಿತ ಮಠವಾಗಿದೆ, ಇನ್ನೂ ಈ ಮಠದ ಪ್ರಗತಿಗಾಗಿ ಮುಂಬರುವ ದಿನಗಳಲ್ಲಿ ,ತನು ,ಮನ, ಧನ, ದಿಂದ ದುಡಿವದಾಗಿ ಹೇಳಿದರು.
ಸಭೆಯ ಅಧ್ಯಕ್ಷತೆ ಶ್ರೀಭಿಮಣ್ಣ ಸುಣಗಾರ ಸಿಂಧಗಿ ವಹಿಸಿದ್ದರು. ಅಥಿತಿಗಳಾಗಿ ಬಸವರಾಜ ಹರವಾಳ, ದೇವಿಂದ್ರ ಜೈನಾಪೂರ, ಶರಣಪ್ಪ ಹೊಸೂರ್, ನಿಂಗಪ್ಪ ಹುಳಗೋಳಕರ್, ಶರಣಪ್ಪ ಸಣಮೋ, ಆನಂದ ಕೊಡಸಾ, ನಾಗೇಂದ್ರ ಬೊಮ್ಮನಳ್ಳಿ ವಾಡಿ, ಚಂದ್ರಶೇಖರ್ ಕೋಟಾರಗಸ್ತಿ, ಶಿವಾನಂದ ದಂಡಪಗೋಳ, ಅಣೀವೀರಪ್ಪ ಯಾಕಾಪೂರ, ದಶರಥ ತೆಗನೂರ್ ಕುಸನೂರ್, ತೊನಸನಹಳ್ಳಿ ಎಸ್ ಗ್ರಾಂ .ಪಂ.ಅಧ್ಯಕ್ಷೆ ಕಾವೇರಿ ಮಹಾಲಿಂಗ ಮದ್ದರಕಿ, ಗುರು ಜುಲ್ಪಿ, ನಿಂಗಣ್ಣಗೌಡ ಮಾಲೀಪಾಟೀಲ್, ಮಹಾದೇವ ಬಂದಳ್ಳಿ, ಮಲ್ಲಿಕಾರ್ಜುನ್ ಎಸ್ ಗೊಳೇದ, ವಿರೇಶ್ ಜೀ ಗೋಳೇದ, ಅಶೋಕ ಕಟ್ಟಿ, ದೇವಿಂದ್ರಪ್ಪ ಯಲಗೋಡ್, ಕಾಶಣ್ಣ ಚೆನ್ನೂರ್, ಮಲ್ಲಿಕಾರ್ಜುನ್ ಇಟಗಿ ಮಾಲಗತ್ತಿ, ಕಾಶಿನಾಥ ಬೆಲ್ಲದ ಹಾಗೂ ಇತರರು ಗಣ್ಯರು ಭಾಗವಹಿಸಿದರು.
ಅಶೋಕ ಎಂ. ನಾಟೀಕಾರ್ ನಿರೂಪಿಸಿದರು. ನಂತರ ಭಜನಾ ಸೇವೆಯನು ಮಹೇಶ ನರಬೋಳಿ ಮತ್ತು ಮಾತೋಶ್ರೀ ಸಾತಮ್ಮ ತಾಯಿ ಭಜನೆ ಮೇಳದವರು ನಡೆಸಿಕೊಟ್ಟರು.