ಕಲಬುರಗಿ: ಅದ್ಧೂರಿಯಾಗಿ ನಡೆದ ಶ್ರೀ ಜಡೆ ಶಂಕರಲಿಂಗ ಪಲ್ಲಕ್ಕಿ ಉತ್ಸವ

0
278
ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಲಭ್ಯ: ಅಲ್ಲಮಪ್ರಭು ಪಾಟೀಲ್

ಕಲಬುರಗಿ: ಜಿಲ್ಲಾ ಬಣಗಾರ ಸಮಾಜ ಹಾಗೂ ಶ್ರೀ ಜಡೆ ಶಂಕರಲಿಂಗ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡ ವಿವಿಧ ಧಾರ್ಮಿಕ, ಪ್ರವಚನ ಕಾರ್ಯಕ್ರಮಗಳು ಇಂದು ನಡೆದ ಅದ್ಧೂರಿಯಾಗಿ ನಡೆದ ಪಲ್ಲಕ್ಕಿ ಮಹೋತ್ಸವದೊಂದಿಗೆ ಮುಕ್ತಾಯವಾಯಿತು.

ಭಾನುವಾರದಂದು ಶ್ರೀ ಶಂಕರಲಿಂಗ ಪ್ರವಚನ ಮುಕ್ತಾಯ, ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.

Contact Your\'s Advertisement; 9902492681

ಸಮಾರಂಭವನ್ನು ಶಾಸಕ ದತ್ತಾತ್ರೆಯ ಪಾಟೀಲ್ ರೇವೂರು ಉದ್ಘಾಟಿಸಿದರು. ಮಕ್ತಂಪುರ ಶ್ರೀ ಗುರುಬಸವ ಬ್ರಹನ್ಮಠದ ಶ್ರೀ ಶಿವಾನಂದ ಮಹಾಸ್ವಾಮೀಜಿ, ಗದ್ದುಗೆ ಮಠದ ಶ್ರೀ ವಿಜಯ ಮಹಾಂತೇಶ ದೇವರು ಸಾನಿಧ್ಯ ವಹಿಸಿದ್ದರು. ಪಾಲಿಕೆ ಸದಸ್ಯ ವಿಜಯಕುಮಾರ ಸೇವಲಾನಿ, ಮಾಜಿ ಸದಸ್ಯ ಬಸವರಾಜ ನಾಶಿ ಸೇರಿದಂತೆ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

ಸೋಮವಾರ ಮಧ್ಯಾಹ್ನ ಅದ್ಧೂರಿಯಾಗಿ ಪಲ್ಲಕ್ಕಿ ಮಹೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಮುಖಂಡರಾದ ಅಲ್ಲಮಪ್ರಭು ಪಾಟೀಲ್ ಅವರು ಪಾಲ್ಗೊಂಡು, ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುವುದರ ಜೊತೆಗೆ, ಸಮಾಜದಲ್ಲಿ ನಾವೆಲ್ಲರೂ ಒಂದೇ ಎಂಬ ಭ್ರಾತೃತ್ವ ಭಾವನೆ ಮೂಡುತ್ತದೆ ಎಂದು ಹೇಳಿದರು.

ಬಣಗಾರ ಸಮಾಜದವರು ಒಗ್ಗಟ್ಟಿನೊಂದಿಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಈ ಸಮಾಜ ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಲು, ಸರಕಾರದ ಸೌಲಭ್ಯಗಳನ್ನು ಪಡೆಯುವುದು ಅಗತ್ಯವಾಗಿದೆ. ಇದಕ್ಕಾಗಿ ರಾಜಕೀಯವಾಗಿಯೂ ಗುರುತಿಸಿಕೊಳ್ಳುವುದು ಅಗತ್ಯವಾಗಿದೆ. ಇದಕ್ಕಾಗಿ ತಾವು ಸಹಕರಿಸುವುದಾಗಿ ಭರವಸೆ ನೀಡಿದರು.

ಪಲ್ಲಕ್ಕಿ ಮೆರವಣಿಗೆಯಲ್ಲಿ ಪುರವಂತರು, ಕಳಸದೊಂದಿಗೆ ಸುಮಂಗಲೆಯರು ಪಾಲ್ಗೊಂಡಿದ್ದರು. ಬ್ಯಾಂಡ್, ಬಾಜಾ ಭಜಂತ್ರಿ, ವಾದ್ಯ ಮೇಳದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು.

ಮುಖಂಡರಾದ ಬಸವರಾಜ ನಾಶಿ ಸೇರಿದಂತೆ, ಶ್ರೀ ಜಡೆ ಶಂಕರಲಿಂಗ ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷ ಶಾಂತವೀರಪ್ಪ ಕಲ್ಯಾಣಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಧನಶೆಟ್ಟಿ, ಮಲ್ಲಿಕಾರ್ಜುನ ದೊಡಕುಂಡಿ, ಆನಂದ ದಂಡೋತಿ, ಜಿಲ್ಲಾ ಬಣಗಾರ ಸಮಾಜದ ಅಧ್ಯಕ್ಷ ಘಾಳೇಪ್ಪ ದೊಡ್ಡಮನಿ, ಪ್ರಧಾನ ಕಾರ್ಯದರ್ಶಿ ಶಾಂತಪ್ಪ ವ್ಹಿ.ಘೂಳಿ, ನಾಗಪ್ಪ ರೋಣದ, ರವೀಂದ್ರಕುಮಾರ ಕಾಳಗಿ, ಬಸವಲಿಂಗಪ್ಪ ಎಸ್ ದೇವಾಪುರ, ನಾಗೇಶ ಸಿ.ಹಂಪಾಗೋಳ, ಸಿದ್ದಣ್ಣ ಕಮರಡಗಿ, ರವೀಂದ್ರ ದಂಡೋತಿ, ವಿನೋದ ಮೇಲಕೇರಿ, ಶ್ರೀದೇವಿ ಬೈರಾಮಡಗಿ, ದೀಪಾ ದಂಡೋತಿ, ಸರಸ್ವತಿ ಕಾಳಗಿ, ಚಂದ್ರಕಲಾ ಚೌಧರಿ, ಶೋಭಾ ಹಂಪಾಗೋಳ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here