ಕಲ್ಯಾಣ ಕರ್ನಾಟಕ ವಿಮೋಚನೆ: ರಾಜಸತ್ತೆಯ ವಿರುದ್ಧ ನಡೆದ ಪ್ರಜಾಸತ್ತೆಯ ಹೋರಾಟ

0
51

ಕಲಬುರಗಿ: ಹೈದರಾಬಾದ್ ಸಂಸ್ಥಾನವನ್ನು ಆಳ್ವಿಕೆ ಮಾಡುತ್ತಿದ್ದ ನಿಜಾಮ ಮೀರ್‌ಉಸ್ಮಾನ್ ಅಲಿ ಖಾನ್ ಬಳಿಯಿದ್ದ ರಜಾಕರ ಪಡೆಯ ಕಾಶಿಂ ರಜ್ವಿಯ ಉಪಟಳದಿಂದ ಬೇಸತ್ತಿದ್ದ ಈ ಭಾಗದಜನತೆ ನಿಜಾಮ ಸರ್ಕಾರದ ವಿರುದ್ಧ ಬಂಡೆದ್ದುದರ ಫಲವಾಗಿಯೇ ಸೆ. ೧೭, ೧೯೪೮ರಂದು ಈ ಭಾಗಕ್ಕೆ ಸ್ವಾತಂತ್ರö್ಯದೊರೆಯಿತುಎAದು ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ತಿಳಿಸಿದರು.

ಜಿಲ್ಲಾಡಳಿತ, ಪದವಿಪೂರ್ವ ಶಿಕ್ಷಣ ಇಲಾಖೆ, ಸಾರ್ವಜಿಕ ಶಿಕ್ಷಣ ಇಲಾಖೆ ಹಾಗೂ ಕಲ್ಯಾಣಕರ್ನಾಟಕಕನ್ನಡಪರ ಸಂಘಟನೆಗಳ ಒಕ್ಕೂಟದಆಶ್ರಯದಲ್ಲಿ ಮಂಗಳವಾರ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆಕಾಲೇಜಿನಲ್ಲಿ ಜರುಗಿದ ವಿಮೋಚನಾ ಸಪ್ತಾಹ ಕಾರ್ಯಕ್ರಮದಲ್ಲಿ ವಿಮೋಚನೆ ಅಂದು-ಇAದು ವಿಷಯಕುರಿತು ವಿಶೇಷ ಉಪನ್ಯಾಸ ನೀಡಿದಅವರು, ಶರಣಗೌಡ ನಾಮದಾರ್, ಅಚ್ಚಪ್ಪಗೌಡ ಸುಬೇದಾರ, ಚನ್ನಬಸಪ್ಪ ಕುಳಗೇರಿ, ರಾಜಾ ವೆಂಕಟಪ್ಪ ನಾಯಕ, ಮಟಮಾರಿ ನಾಗಪ್ಪ, ದತ್ತಾತ್ರೇಯಅವರಾದಿ, ಸ್ವಾಮಿರಮಾನಂದತೀರ್ಥರು ಸೇರಿದಂತೆ ನೂರಾರುಜನರು ಈ ಭಾಗದ ಬಿಡುಗಡೆಗಾಗಿ ಹೋರಾಡಿದರುಎಂದರು.

Contact Your\'s Advertisement; 9902492681

ಹಿರಿಯರತ್ಯಾಗ ಬಲಿದಾನ ವಿಮೋಚನೆಗೆ ರಹದಾರಿ ಹಾಕಿಕೊಟ್ಟಿತುಎಂದು ಹೇಳಿದರು.ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಈ ಪ್ರದೇಶದಅಸಮತೋನ ನಿವಾರಣೆಗಾಗಿ ನಂಜುAಡಪ್ಪ ವರದಿ, ೩೭೧(ಜೆ), ಕೆಕೆಆರ್‌ಡಿಬಿಗಳು ರಚನೆಯಾಗಿಕಲ್ಯಾಣಕರ್ನಾಟಕ ಪ್ರದೇಶಎಂದು ಮರುನಾಮಕರಣವಾದರೂ ಈ ಭಾಗದ ಸಮಸ್ಯೆಈವರೆಗೆ ನೀಗಿಲ್ಲ.

ಕಲ್ಯಾಣಕರ್ನಾಟಕ ವಿಮೋಚನಾ ಹೋರಾಟರಾಜಸತ್ತೆಯ ವಿರುದ್ಧ ನಡೆದ ಪ್ರಜಾಸತ್ತೆಯ ಹೋರಾಟವಾಗಿದ್ದು, ಕೇಂದ್ರ ಮತ್ತುರಾಜ್ಯ ಸರ್ಕಾರಗಳ ಮಲತಾಯಿಧೋರಣೆ, ಈ ಭಾಗದ ರಾಜಕಾರಣಿಗಳ ಇಚ್ಛಾಶಕ್ತಿಯಕೊರತೆಯಿಂದಾಗಿಅಭಿವೃದ್ಧಿಎAಬದುಇನ್ನೂ ಮರೀಚಿಕೆಯಾಗಿ ಉಳಿದಿದ್ದು, ಅಭಿವೃದ್ಧಿಗೆ ಆಗ್ರಹಿಸಿ ಜನತೆ ಹೋರಾಟ ಮಾಡಬೇಕಾದ ಪ್ರಸಂಗವನ್ನು ತಂದುಕೊಳ್ಳಬಾರದು ಎಂದುಅವರುಖೇದ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಚಾರ್ಯೆಡಾ.ಶಮೀಮ್ ಸುಲ್ತಾನಾ ಅಧ್ಯಕ್ಷತೆ ವಹಿಸಿದ್ದರು.ಜೆಡಿಎಸ್ ಮುಖಂಡ ಬಸವರಾಜ ಬಿರಬಿಟ್ಟಿ ಮುಖ್ಯಅತಿಥಿಯಾಗಿದ್ದರು.ಜಗನ್ನಾಥ ಸೂರ್ಯವಂಶಿ ನೇತೃತ್ವ ವಹಿಸಿದ್ದರು. ಶಿವಾನಂದ ಮಠಪತಿ, ಸಂತೋಷ ಹಂಪ್ಳಿ, ಮಂಜುನಾಥ ನಾಲವಾರಕರ್, ಸಚಿನ್ ಫರಹತಾಬಾದ್, ದತ್ತು ಭಾಸಗಿ ವೇದಿಕೆಯಲ್ಲಿದ್ದರು.ಜ್ಯೋತಿರೆಡ್ಡಿ ನಿರೂಪಿಸಿದರು.

ಡಾ. ಮೀನಾಕ್ಷಿ ವಿಜಯಕುಮಾರ ಸ್ವಾಗತಿಸಿದರು.ಸಿದ್ಧಾರ್ಥ ಹಾಗೂ ಸಂಗಡಿಗರು ಪ್ರಾರ್ಥಿಸಿದರು.ಡಾ. ಮಹಾದೇವ ಬಡಿಗೇರ, ಡಾ.ಪದ್ಮರಾಜರಾಸಣಗಿ, ಪ್ರಕಾಶ ಪಾಟೀಲ, ಸೂರ್ಯಕಾಂತ ಸೊನ್ನದಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here