ಸುರಪುರ: ತಾಲೂಕಿನ ಆಲ್ದಾಳ ಗ್ರಾಮ ಪಂಚಾಯ್ತಿಯಲ್ಲಿ ೧೫ನೇ ಹಣಕಾಸು ಯೋಜನೆ ಅನುದಾನ ದುರ್ಬಳಕೆ ಮಾಡಿಕೊಂಡ ಪಿಡಿಒ ವಿರುದ್ಧ ಕಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಮೂರನೇ ದಿನದಲ್ಲಿ ಗ್ರಾಪಂ ಸದಸ್ಯರು ತಾಲೂಕು ಕಚೇರಿ ಪ್ರವೇಶ ದ್ವಾರಕ್ಕೆ ಮುಳ್ಳಿಟ್ಟು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ರಾಜಾ ಕುಮಾರ ನಾಯಕ, ಪಿಡಿಒ ಅವರನ್ನು ಅಮಾನತುಗೊಳಿಸಿದರೆ ಸದಸ್ಯರ ಹೋರಾಟಕ್ಕೆ ಅರ್ಥಪೂರ್ಣವಾಗುವುದಿಲ್ಲ. ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ೧೩.೩೦ ಲಕ್ಷ ರೂ. ವಾಪಸ್ ಸರಕಾರದ ಬೊಕ್ಕಸಕ್ಕೆ ಪಾವತಿಸಬೇಕು. ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ತಾಕತ್ತು ಕಾಂಗ್ರೆಸ್ ಪಕ್ಷಕ್ಕಿದೆ. ತಾಪಂ ಕಚೇರಿಯಿಲ್ಲದೇ ನಗರದ ಗಾಂಧೀಜಿ ವೃತ್ತ, ಸುರಪುರ ಬಂದ್ ಮಾಡಿ ಪ್ರತಿಭಟಿಸಲಾಗುತ್ತದೆ ಎಂದರು.
ಮುಖಂಡರಾದ ಗ್ರಾಪಂ ಅಧ್ಯಕ್ಷೆ ನಾಗರತ್ನ ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ ಹಾಗೂ ಪಂಚಾಯತ್ ಸದಸ್ಯರು ಮಾತನಾಡಿದರು. ರಾಜ್ಯ ಕೆಪಿಸಿಸಿ ಹಿಂದುಳಿದ ವರ್ಗದ ಕಾರ್ಯಾಧ್ಯಕ್ಷ ಭಂಡಾರಪ್ಪ ನಾಟೇಕರ್, ಗ್ರಾಪಂ ಅಧ್ಯಕ್ಷ ನಾಗರತ್ನ, ಉಪಾಧ್ಯಕ್ಷ ನರಸಮ್ಮ ಸದಸ್ಯರಾದ ನಿಂಗಣ್ಣ ಕಿಲ್ಲೇದ, ತಿರುಪತಿ ಹುದ್ದಾರ, ಶಿವಗಂಗಮ್ಮ ದೊರೆ, ನಬೀ ಪಟೇಲ್, ಲಕ್ಷ್ಮೀ ಅನಸೂರ, ವೆಂಕಟಯ್ಯ ನಾಯಕ, ಈರಪ್ಪ, ಶಾಂತಪ್ಪ, ಶಂಕರಗೌಡ, ಶ್ರೀನಿವಾಸ, ದೇವೇಂದ್ರಪ್ಪ ಇತರರಿದ್ದರು.