ಚಿಂಚೋಳಿ: ಅಸಮಾನತೆಯ ವಿರುದ್ದ ಸಿಡಿದೆದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಚಳುವಳಿಯ ಸಿದ್ದಾಂತ ಅರಿತು ನೋಡಿದಾಗ ಅವರು ಕೇವಲ ಒಂದು ಜಾತಿಯ ಗುರುವಲ್ಲಾ ವಿಶ್ವಕ್ಕೆ ಗುರು ಎಂದು ಒಪ್ಪಿಕೋಳ್ಳುವುದರಲ್ಲಿ ಯಾವುದೆ ಸಂದೇಹವಿಲ್ಲಾವೆಂದು ಸಮಾಜಿಕ ಹೋರಾಟಗಾರ ಮಾರುತಿ ಗಂಜಗಿರಿ ಅಭಿಪ್ರಾಯ ವ್ಯಕ್ತಪಡಿಸಿದರು.
ರವರು ಶನಿವಾರ ಚಂದಾಪೂರ ಪಟ್ಟಣದ ಎನ್.ಬಿ.ಸಿ.ಇ.ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡ ೧೬೮ ನೆ ನಾರಾಯಣ ಗುರುಗಳ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಕರು ಸಮಾಜಿಕ ವ್ಯವಸ್ಥೆ ಪರಿವರ್ತನೆ ಗಾಗಿ ಹೋರಾಟ ಮಾಡಿದ ಮಾಹತ್ಮರ ಸಂದೇಶ ಅರಿಯುವುದು ಮುಖ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಮರೆಡ್ಡಿ ಸುಲೇಪೇಟ, ಸಿದ್ದಪ್ಪ ರಂಗನೂರ, ಪುಟ್ಟರಾಜ ಹೋಡೆಬೀರನಳ್ಳಿ, ಮಲ್ಲಿಕಾರ್ಜುನ ಪಾಟೀಲ್, ಸೂರ್ಯಕಾಂತ ಸೇರಿ, ಪ್ರಶಾಂತ ಜಾಧವ, ಅರವಿಂದ ಚವ್ಹಾಣ, ಪ್ರೇಮ ರಾಠೋಡ ಮುಂತಾದವರು ಉಪಸ್ಥಿತರಿದ್ದರು.