ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ವೀರಶೈವ -ಲಿಂಗಾಯತ ಧರ್ಮದ ಮುತ್ಸದ್ದಿಗಳು, ಕಟ್ಟಾ ಧರ್ಮ ಪ್ರತಿಪಾದಕರು, ಸಮಾಜದ ಹಿರಿಯ ನೇತಾರರು ಅದ, ಡಾ. ಶಾಮನೂರು ಶಿವಶಂಕಪ್ಪಾ ರವರು, ಜಗಜ್ಯೋತಿ ಬಸವೇಶ್ವರರ 887ನೇ ಜಯಂತ್ಯೋತ್ಸವದ ಆಚರಣೆಯಕುರಿತು ಅಧಿಕೃತವಾಗಿ, ಸ್ಪಷ್ಟ ಆದೇಶ, ಮಾರ್ಗದರ್ಶನ ಮಾಡಿದ್ದು, ವೀರಶೈವ -ಲಿಂಗಾಯತ ಧರ್ಮಾಭಿಮಾನಿಗಳು, ಬಸವೇಶ್ವರರ ಭಾವಚಿತ್ರ ಪೂಜೆ ಸರಳವಾಗಿ ತಮ್ಮ ತಮ್ಮ ಮನೆಗಳಲ್ಲಿಯೇ ಮಾಡಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕ ಪ್ರಧಾನ ಕಾರ್ಯದರ್ಶಿ ಶಾಂತ್ ರೆಡ್ಡಿ ಪೆಟ್ ಸಿರೂರ್ ತೋರಿದ್ದಾರೆ.
ಈ ಮೂಲಕ ಭಕ್ತಿ ಭಂಡಾರಿಗೆ, ಭಕ್ತಿ ಪೂರ್ವಕ ಪೂಜೆ ಸಲ್ಲಿಸುವದರ ಮೂಲಕ ವಿಶ್ವಕ್ಕೆ ಮಹಾಮಾರಿಯಾಗಿ ಕಾಡುತ್ತಿರುವ ಕರೋನಾ ವೈರಸ್ ನಿರ್ಮೂಲನೆ ಯಾಗಲಿ ಯೆಂದು ಪ್ರಾರ್ಥಿಸಿ, ಕಡ್ಡಾಯವಾಗಿವಾಗಿ ಮನೆಯಲ್ಲಿಯೇ ಇರುವದರ ಮೂಲಕ, ಜೊತೆಗೆ ದಯವೇ ಧರ್ಮದ ಮೂಲವಯ್ಯ, ಎನ್ನುವ ಅಣ್ಣನವರ ವಚನದಂತೆ ತಮ್ಮ ತಮ್ಮ ಶಕ್ತಿಯಾನುಸಾರ ನಿರ್ಗತಿಕರಿಗೆ ದವಸ ಧಾನ್ಯಗಳು ದಾನ ಮಾಡುವದರ ಮೂಲಕ, ಅರ್ಥ ಪೂರ್ಣವಾಗಿ ಬಸವೇಶ್ವರ ಜಯಂತಿ ಆಚರಿಸಿಯೆಂದು, ಕರೆಕೊಟ್ಟಿದ್ದಾರೆಂದು ತಿಳಿಸಿದ್ದಾರೆ.