ಮಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ವತಿಯಿಂದ 6 ನೇ ವರ್ಷದ ಪ್ರಶಸ್ತಿ ಪ್ರದಾನ

0
37

ಕಲಬುರಗಿ: ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿರುವ ಇಂದಿನ  ದಿನಗಳಲ್ಲಿ ವ್ಯವಹಾರಿಕ ದೃಷ್ಟಿಕೋನ ಹೆಚ್ಚುತ್ತಿದೆ, ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ ತೊಡಗಿರುವ ಹೊತ್ತಿನಲ್ಲಿ ಮಾನವೀಯ ಸಂಬಂಧಗಳು ಬಲಪಡಿಸುವ ಅಗತ್ಯವಿದೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ಮಲ್ಲೆಪುರಂ ಜಿ. ವೆಂಕಟೇಶ ಅವರು ಹೇಳಿದರು.

ಅವರು ಮಮಾತೋಈರಮ್ಮ ವಡ್ಡನಕೇರಿ ಪ್ರತಿಷ್ಠಾನದ ವತಿಯಿಂದ ರಂಗಾಯಣ ಸಭಾಂಗಣದಲ್ಲಿ ಹಮ್ಮಿಕೊಂಡ 6 ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

Contact Your\'s Advertisement; 9902492681

ಜಗತ್ತು ತಾಂತ್ರಿಕವಾಗಿ ಸಾಕಷ್ಟು ಮುಂದುವರೆದಿದ್ದರೂ ನಮ್ಮೊಳಗಿನ ಮಾನವೀಯ ಸಂಬಂಧಗಳು ದೂರವಾಗಬಾರದು, ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳು ಶೀತಲವಾಗುತ್ತಿರುವುದು ಕಳವಳ ಕಾರಿ ಸಂಗತಿಯಾಗಿದೆ. ಪರಿವಾರಕ ವಾತಾವರಣ ಸೃಷ್ಟಿಯಾಗಬೇಕಾಗಿದೆ. ನಮ್ಮತನವನ್ನು ಅರಿತಾಗ ಮಾತ್ರ ನಮ್ಮ ಸಂಸ್ಕೃತಿ ಉಳಿವು ಸಾಧ್ಯ ಎಂದರು.

ಯಾವುದೇ ಲಾಬಿ ಮಾಡದೆ ಸಾಧನೆಯನ್ನ ಗುರುತಿಸಿ ನೀಡುವ ಪ್ರಶಸ್ತಿಗೆ ಮಾತ್ರ ಇಂದು ಜನಮನ್ನಣೆ ಸಿಗುತ್ತದೆ ಆ ನಿಟ್ಟಿನಲ್ಲಿ ಡಾ. ಶರಣಬಸಪ್ಪ ವಡ್ಡನಕೇರಿ ಅವರು ತಮ್ಮ ತಾಯಿಯವರ ಹೆಸರಿನಲ್ಲಿ “ಅವ್ವ ಪ್ರಶಸ್ತಿ”ಯನ್ನು ನೀಡುವುದರ ಮೂಲಕ ತಾಯಿಯ ಘನತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಡಾ. ಶರಣಬಸಪ್ಪ ವಡ್ಡನಕೇರಿ ರಚಿಸಿದ ಏಳು ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಬಸವರಾಜ ಕೊನೆಕ್ ಅವರು ಶರಣಬಸಪ್ಪ ನಮ್ಮ ಪ್ರಕಾಶನದ ಲೇಖಕರಾಗಿದ್ದು ಹಲವಾರು ಪುಸ್ತಕಗಳನ್ನು ರಚಿಸಿ ರಾಜಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅಂಥವರು ತಮ್ಮ ತಾಯಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವುದರ ಮೂಲಕ ಸಮಾಜಕ್ಕೆ ಒಂದಿಷ್ಟು ಕೊಡುಗೆ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.     ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರಂಗಾಯಣದ ನಿರ್ದೇಶಕರಾದ ಪ್ರಭಾಕರ ಜೋಶಿ ಮಾತನಾಡಿ ಅತ್ಯುತ್ತಮ ಕೃತಿಗಳಿಗೆ ಪ್ರಶಸ್ತಿ ನೀಡಲಾಗಿದೆ. ಅಲ್ಲದೆ ಮೌನವಾಗಿದ್ದುಕೊಂಡೆ ನಿಸ್ವಾರ್ಥತೆಯಿಂದ ಕೆಲಸ ಮಾಡುವಂತಹ ಈ ಭಾಗದ ಪ್ರತಿಭಾವಂತ ಯುವ ಸಾಹಿತಿಯಾಗಿದ್ದಾರೆ ಆ ಕಾರಣಕ್ಕಾಗಿ ಅವರ ಪ್ರಶಸ್ತಿಗೆ ಇಂದು ರಾಜ್ಯಮಟ್ಟದಲ್ಲಿ ಮೌಲ್ಯ ಸಂಗತಿ .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆ ಮಾತನಾಡಿ ಅವ್ವನಿಲ್ಲದ ಬದುಕು ಉಹಿಸಿಕೊಳ್ಳುವುದು ಕಷ್ಟ. ಆಕೆಯನ್ನು ಗೌರವಿಸುವುದು, ಸ್ಮರಿಸುವುದು  ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಆ ನಿಟ್ಟಿನಲ್ಲಿ ನಮ್ಮ ಗ್ರಾಮದ ಪ್ರತಿಭಾವಂತ  ಯುವಕರಾದ ಡಾ. ಶರಣಬಸಪ್ಪ ತಮ್ಮ ತಾಯಿ ಹೆಸರಿನಲ್ಲಿ ಪ್ರಶಸ್ತಿಯನ್ನು ಕೊಡುವುದರ ಮೂಲಕ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು.

ಪ್ರಶಸ್ತಿಗೆ 363 ಕೃತಿಗಳು ಬಂದಿದ್ದು ಪ್ರಶಸ್ತಿಯ ಶ್ರೇಷ್ಠತೆಯನ್ನು ಎತ್ತಿ ಹಿಡಿದಂತಾಗಿದೆ. ಅಲ್ಲದೆ ಪಾರ್ದರ್ಶಕವಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ  ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಶರಣಬಸಪ್ಪ  ವಡ್ದನಕೇರಿ ಪ್ರಾಸ್ತಾವಿಕ ನುಡಿಯಲ್ಲಿ ಹೇಳಿದರು.

ಡಾ.ಎಚ್ ಟಿ.ಟಪೋತೆ ಅವರ “ಮಹಾ ಬಿಂದು”, ಸಿದ್ದರಾಮ ಹೊನಕಲ್ ಅವರ “ಆಕಾಶಕ್ಕೆ ಹಲವು ಬಣ್ಣಗಳು “ಕೃತಿಗೆ  ಪ್ರಶಸ್ತಿ ಲಭಿಸಿದ್ದು.ಡಿಜಿಟಲ್ ಗ್ರಂಥಾಲಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಡಾ. ಸತೀಶ ಕುಮಾರ ಹೊಸಮನಿ,ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ ಶ್ರೀಮತಿ ಶಶಿಕಲಾ ಮಾಲಿ ಪಾಟೀಲ,  ಶಿಕ್ಷಣ ಮತ್ತು ಸಂಶೋಧನ ಕ್ಷೇತ್ರದ ಸಾಧನೆಗೆ ಡಾ. ವಿಜಯಕುಮಾರಿ ಕರಿಕಲ್, ಹಾಗೂ ಸಮಾಜಸೇವೆ ಕ್ಷೇತ್ರದಲ್ಲಿನ ಸಾಧನೆಗೆ  ಸಿದ್ದಪ್ಪ ತಳ್ಳಳ್ಳಿ ಅವರನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡಲಾಗಿದ್ದು.

ಇದೇ ಸಂದರ್ಭದಲ್ಲಿ ಎಸ್. ಎಸ್ ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕುಪೇಂದ್ರ ಪಾಟೀಲ್, ಎ. ಎಸ್.ಪಾಟೀಲ, ಡಾ. ಎನ.ಎಚ್.ಪಾಟೀಲ,ಬಸವರಾಜ ಮರಬದ್, ಡಾ. ನಾಗಪ್ಪ ಗೋಗಿ, ಬಿ.ಎಚ್. ನಿರಗುಡಿ, ಶರಣಗೌಡ ಪಾಟೀಲ ಪಾಳಾ,ಶಂಕ್ರಯ್ಯ ಸ್ವಾಮಿ ಹಿರೇಮಠ, ಶಿವರಾಜ್ ಕಾರಮಗಿ, ಬಸವರಾಜನಕಟ್ಟಿ, ಮಲ್ಲಿಕಾರ್ಜುನ ವಡ್ದನಕೇರಿ, ಶ್ರೀಮತಿ ಕಾಶಿಬಾಯಿ ಹರಕಂಚಿ, ಪ.ಮನು ಸಾಗರ, ವೆಂಕಟೇಶ್ ನಿರಡಗಿ, ಚಿ. ಸಿ. ನಿಂಗಣ್ಣ, ಸದಾನಂದ ಪೆರ್ಲ,ಗವಿಸಿದ್ದಪ್ಪ ಪಾಟೀಲ, ಅಣವಿ ರಪ್ಪ ರುದ್ರವಾಡಿ, ಸಿದ್ದರಾಮಪ್ಪ ಮೂಲಗೆ, ಅಂಬಾರಾವ ವಡ್ಡನಕೇರಿ  ಮೊದಲಾದವರು ಉಪಸ್ಥಿತರಿದ್ದರು. ಅಂಬಾರಾಯ ಮಡ್ಡೆ,ಕಾರ್ಯಕ್ರಮ ನಿರೂಪಿಸಿದರೆ, ಡಾ. ನಾಗಪ್ಪ ಗೋಗಿ ವಂದಿಸಿದರು ಸಿದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here