ನೀಟ್ ಫಲಿತಾಂಶ ಬಳಿಕ ವಿದ್ಯಾರ್ಥಿ ಆತ್ಮಹತ್ಯೆ: NEET ಪರೀಕ್ಷೆ ರದ್ದುಗೊಳಿಸಿಲು ಕ್ಯಾಂಪಸ್ ಫ್ರಂಟ್ ಆಗ್ರಹ

0
24

ಕುಂದಾಪುರ: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಪಡೆದ ಕಾರಣಕ್ಕಾಗಿ ತನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಸ್ಥಾನ ಸಿಗುವುದಿಲ್ಲವೆಂದು ಮನನೊಂದು ಕುಂದಾಪುರ ತಾಲೂಕಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾದ ಸಾಯಿಷ್ ಶೆಟ್ಟಿ ಆತ್ಮಹತ್ಯೆಗೈದಿದ್ದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕುಂದಾಪುರ ಸಮಿತಿ ಸಂತಾಪ ವ್ಯಕ್ತಪಡಿಸದೆ.

ನೀಟ್ ಎಂಬ ಕೇಂದ್ರೀಕೃತ ಪರೀಕ್ಷೆಯ ಪರಿಣಾಮವಾಗಿ ಹಲವಾರು ವಿದ್ಯಾರ್ಥಿಗಳು ತಮ್ಮ ಜೀವವನ್ನು ಕಳೆದಿದ್ದು, ಇಂದು ನೀಟ್ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುತ್ತಿದೆ. ನೀಟ್ ಪರೀಕ್ಷೆಯ ಲೋಪ ದೋಷ ಗಳನ್ನು ಅರಿತು ತಮಿಳುನಾಡು ಸರ್ಕಾರ ನಿರ್ಣಯವನ್ನು ಸಹ ಮಂಡಿಸಿತ್ತು.

Contact Your\'s Advertisement; 9902492681

ಸಿ.ಈ. ಟಿ ಸೀಟ್ ಹಂಚಿಕೆಯ ವಿಚಾರದಲ್ಲೂ ಬದಲಾವಣೆ ತರಲು ಈಗಾಗಲೇ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿತು. ಈ ನೀಟ್ ಎಂಬ ಅರ್ಹತಾ ಪರೀಕ್ಷೆಯಿಂದ ದೊಡ್ಡ ಪ್ರಮಾಣದ ನಷ್ಟ ತುಳಿತಕ್ಕೊಳಗಾದ ಸಮುದಾಯಗಳಿಗೆ ಆಗುತ್ತಿರುವುದು ಪರೀಕ್ಷೆಯ ಮೂಲಕ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಆಯ್ಕೆಯಾಗಿರುವ ವರ್ಗದ ವಿದ್ಯಾರ್ಥಿಗಳ ಅಂಕಿ ಅಂಶಗಳೇ ಸಾರಿ ಹೇಳುತ್ತವೆ.

ಇದೆಲ್ಲವನ್ನು ಗಮನಿಸುವಾಗ ಹಲವು ರೀತಿಯ ಗೊಂದಲಗಳಿಂದ ಕೂಡಿರುವ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಹಾಗೂ ವಿದ್ಯಾರ್ಥಿ ಸಾಯಿಷ್ ಶೆಟ್ಟಿ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಕ್ಯಾಂಪಸ್ ಫ್ರಂಟ್ ಕುಂದಾಪುರ ಅಧ್ಯಕ್ಷರಾದ ಮುಜಾಹಿದ್ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here