371 (ಜೆ) ಸಮರ್ಪಕವಾಗಿ ಅನುಷ್ಠಾನಕ್ಕೆ ಸರಕಾರ ಬದ್ಧ: ಅಮರನಾಥ ಪಾಟೀಲ್

0
35

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಸಂವಿಧಾನ 371 ಕಲಂ ತಿದ್ದುಪಡಿಗಾಗಿ ಈ ಭಾಗದ ಅನೇಕ ಜನರ, ಹೋರಾಟಗಾರ,ಅಲ್ಲದೇ ಎಲ್ಲಾ ಪಕ್ಷದ ನಾಯಕರ ಶ್ರಮದಿಂದ ಈ ಭಾಗಕ್ಕೆ 371ಕಲಂ ( ಜೆ) ತಿದ್ದುಪಡಿ ನಂತರ ಈ ಭಾಗದ ಅಭಿವೃದ್ಧಿ, ಸೇರಿದಂತೆ ಸಮಗ್ರ ಅನುಷ್ಠಾನಕ್ಕೆ ರಾಜ್ಯ ಸರಕಾರ ಸಂಪೂರ್ಣ ಬದ್ಧವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್ ಹೇಳಿದರು,

ನಗರದ ಸರ್ವಜ್ಞ ಪಿ,ಯು ಕಾಲೇಜುನಲ್ಲಿ  ಜಿಲ್ಲಾಳಿತ ಮತ್ತು ಕಲ್ಯಾಣ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟ ವಿವಿಧ ಇಲಾಖೆಗಳ ಸಹಯೋಗದಲ್ಲಿ ವಿಮೋಚನಾ ಸಪ್ತಾಹದ ಅಂಗವಾಗಿ ಜರುಗಿದ ಕಲ್ಯಾಣ ಕರ್ನಾಟಕ ಚಿಂತನ-ಮಂಥನ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಉಪನ್ಯಾಸಕರಾಗಿ ಆಗಮಿಸಿದ್ಸ ಸಾಹಿತಿ ಡಾ,ರಾಜಶೇಖರ ಮಾಂಗ್ ರವರು ಮಾತನಾಡಿ, ಮೂಲಭೂತವಾಗಿ ನಿಜಾಮರು ಒಳ್ಳೆಯ ಆಡಳಿತಗಾರರು. ರಜಾಕಾರರ ಹಿಂಸೆ, ದಬ್ಬಾಳಿಕೆಗಳಿಗೆ ನಿಜಾಮರು ಕಂಗಾಲಾಗಿದ್ದರು. ನಿಜಾಮರು ಈ ಭಾಗದಲ್ಲಿ ಅಭಿವೃದ್ಧಿಗೆ ನಾಂದಿ ಹಾಡಿದ್ದರು. ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ರವರಿಂದ ಈ ಭಾಗದ ವಿಮೋಚನಾದ ರೂವಾರಿ ಎಂದು ಹೇಳಿದರು

ಮುಖ್ಯ ಅತಿಥಿಯಾಗಿದ್ದ. ಒಕ್ಕೂಟದ. ಕಾರ್ಯಧ್ಯಕ್ಷರಾದ ಸಚೀನ ಫರಹತಾಬಾದ, ಒಕ್ಕೂಟದ ಗೌರವಧ್ಯಕ್ಷರಾದ ಜಗನ್ನಾಥ ಸೂರ್ಯವಂಶಿ, ಅಧ್ಯಕ್ಷತೆ ಸರ್ವಜ್ಞ ಕಾಲೇಜಿನ ಸಂಸ್ಪಾಪಕರಾದ ಪ್ರೊ.ಚನ್ನಾರೆಡ್ಡಿ ಪಾಟೀಲ ರವರ ವಹಿಸಿದರು, ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕೂಟದ ಅಧ್ಯಕ್ಷರಾದ ಮಂಜುನಾಥ ಶ,ನಾಲವಾರಕರ್, ಜಿಲ್ಲಾಡಳಿತ, ಸೇರಿದಂತೆ ವಿವಿಧ ಇಲಾಖೆಯ ಮತ್ತು ಕಲ್ಯಾಣ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟ ವತಿಯಿಂದ ವಿಮೋಚನಾ ಚಿಂತನಾ- ಮಂಥನಾ ಕಾರ್ಯಕ್ರಮಗಳು ಆಯೋಜನೆ ಮಾಡಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here