ಜೇವರ್ಗಿ: ತಾಲೂಕಿನ ಅಶೋಕ ಸಾಹುಕಾರ ಗೋಗಿ ಅಭಿಮಾನಿಗಳ ಬಳಗದ ವತಿಯಿಂದ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಜರಗಿತು.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷರಾದ ಎಸ್ ಕೆ ಬಿರೇದಾರ ಮಾತನಾಡಿದರು. ತಾಲೂಕಿನ ಧೀಮಂತ ನಾಯಕ ಬಡವರ ಬಂಧು ದೀನ ದಲಿತರ ಆಶಾಕಿರಣ ಕಷ್ಟದಲ್ಲಿ ಮಿಡಿಯುವ ಹೃದಯಗಳಾದ ಅಶೋಕ ಸಾಹುಕಾರ ಅವರ ಅಭಿನಂದನ ಸಮಾರಂಭ ಮತ್ತು ಅಭಿನಂದನ ಗ್ರಂಥ ಬಿಡುಗಡೆ ಸಮಾರಂಭ ಇದೇ ತಿಂಗಳ 14ರಂದು ಬಿಜಾಪುರ ರಸ್ತೆ ದತ್ತ ನಗರ ಎದುರುಗಡೆ ಗೋಗಿ ಲೇಔಟಿನಲ್ಲಿ ಜರಗುವುದು ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ.ಸಿದ್ಧ ತೋಟೇoದ್ರ ಶಿವಾಚಾರ್ಯ ಮಹಾಸ್ವಾಮಿಗಳು ಕೋರಿಸಿದ್ದೇಶ್ವರ ಸಂಸ್ಥಾನ ಮಠ ಸುಕ್ಷೇತ್ರ ನಾಲವಾರ ಹಾಗೂ ಷಟಸ್ಥಲ ಬ್ರಹ್ಮ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಗಚ್ಚಿನಮಠ ಮಧರಕಿಯವರ ವಹಿಸಿದ್ದಾರೆ.
ಕಾರ್ಯಕ್ರಮಕ್ಕೆ ನಾಡಿನ ಮಠಾಧೀಶರು ಶರಣರು ಸಂತರು ಸೂಪಿಗಳು ಹಾಗೂ ರಾಜಕೀಯ ಮುಖಂಡರು ಆಗಮಿಸಲಿದ್ದಾರೆ. ಹಾಗೂ ಕಲರ್ಸ್ ಕನ್ನಡ ಎದೆತುಂಬಿ ಹಾಡುವೆನು ಖ್ಯಾತ ಗಾಯಕರಾದ ಸೂರ್ಯಕಾಂತ ಗಡಿಲಿಂಗದಲ್ಲಿ ಇವರಿಂದ ಸಂಗೀತ ಕಾರ್ಯಕ್ರಮ ಜರಗುವುದು.
ಆದಕಾರಣ ಜೇವರ್ಗಿಯ ಸಮಸ್ತ ತಾಲೂಕಿನ ಸಾರ್ವಜನಿಕರು ಪಕ್ಷಾತೀತವಾಗಿ ಜಾತ್ಯಾತೀತವಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಎಸ್ ಕೆ ಬಿರಾದರ ಮನವಿ ಮಾಡಿಕೊಂಡರು.
ಗೋಗಿಯವರ ಸುಪುತ್ರ ಕೋರಿಸಿದ್ದೇಶ್ವರ ಆರತಕ್ಷತೆ ಸಮಾರಂಭವು ಜರುಗುತ್ತದೆ ಆದ ಕಾರಣ ಎಲ್ಲರೂ ಆಗಮಿಸಿ ವಧು ವರರಿಗೆ ಶುಭ ಹಾರೈಸಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಲ್ಲಶೆಟ್ಟೆಪ್ಪಗೌಡ ಹಿರೇಗೌಡರ, ಪ್ರಕಾಶ್ ಚಂದ್ರ ಪಾಟೀಲ್ ಕೊಡಿ, ವಿಜಯ್ ಕುಮಾರ್ ಪಾಟೀಲ್ ಸೇಡಂ, ಪರಮೇಶ್ವರ ಬಿರಾಳ, ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.