ಸುರಪುರ: ನಗರದ ವಾರ್ಡ್ ಸಂಖ್ಯೆ ೬ ರಲ್ಲಿ ಮೂಲಭೂತ ಸಮಸ್ಯೆಗಳ ನಿವಾರಿಸಲು ಆಗ್ರಹಿಸಿ ಅನೇಕ ಜನರು ಇಲ್ಲಿಯ ನಗರಸಭೆ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನೇಕರು,ವಾರ್ಡ್ ಸಂಖ್ಯೆ ೬ ರಲ್ಲಿ ಸಮಸ್ಯೆಗಳು ತಾಂಡವವಾಡುತ್ತಿವೆ,ಸ್ವಚ್ಛತೆ ಎಂಬುದು ಮರೀಚಿಕೆ ಎನ್ನುವಂತಾಗಿದೆ.ಎರಡು ವಾರಕ್ಕೊಮ್ಮೆ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ,ದೋಬಿ ಮೊಹಲ್ಲಾದಲ್ಲಿ ಚರಂಡಿಗಳು ತುಂಬಿ ನಿಂತಿದ್ದು ಇಡೀ ವಾರ್ಡ್‌ನ ಅನೇಕ ಮನೆಗಳ ಜನರು ದುರ್ವಾಸನೆಯಿಂದ ನಿತ್ಯವು ನರಳುವಂತಾಗಿದೆ.ಮಳೆ ನೀರು ಮನೆಯ ಒಳಗಡೆ ನುಗ್ಗುತ್ತಿವೆ,ವಾರ್ಡ್‌ನಲ್ಲಿ ಮಹಿಳಾ ಶೌಚಾಲಯ ಇಲ್ಲದೆ ಮಹಿಳೆಯರು ಬಹಿರ್ದೆಶೆಗೆ ಹೋಗುವುದು ಕಷ್ಟವಾಗಿದೆ,ಬೀದಿ ದೀಪಗಳಿಲ್ಲದೆ ಕತ್ತಲು ಆವರಿಸಿ ಜನರು ಮನೆಯಿಂದ ಸಂಜೆಯಾದರೆ ಹೊರಬರದಂತ ಸ್ಥಿತಿ ನಿರ್ಮಾಣವಾಗಿದೆ.ಆದ್ದರಿಂದ ವಾರ್ಡ್ ಸಂಖ್ಯೆ ೬ ರಲ್ಲಿನ ಈ ಎಲ್ಲಾ ಬೇಡಿಕೆಗಳ ಈಡೇರಿಸಬೇಕು ಇಲ್ಲವಾದಲ್ಲಿ ವಾರ್ಡ್‌ನ ಎಲ್ಲಾ ಜನರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ವಾರ್ಡ್‌ನ ಸಾರ್ವಜನಿಕರಾದ ಸಂಗನಗೌಡ,ಪ್ರಕಾಶ ಹೂಗಾರ, ಉದಯ,ಚಂದ್ರಶೇಖರ,ರೋಹಿತ್,ಗುರುನಾಥರಡ್ಡಿ,ಸಚಿನಕುಮಾರ ನಾಯಕ,ಸಂತೋಷ,ಭರತ,ಮುತ್ತುಗೌಡ,ಪ್ರೇಮ್ ಹಾಗೂ ಸುನೀಲ ಸೇರಿದಂತೆ ಅನೇಕರಿದ್ದರು.