ಜ್ಞಾನವಿಕಾಸ ಕೇಂದ್ರ ಸಿರಿಧಾನ್ಯ ಬಳಕೆ ಕುರಿತು ಮಾಹಿತಿ

0
16

ಸುರಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಹಸನಾಪುರ ವಲಯದ ತಿಮ್ಮಾಪುರ ಬಿ ಕಾರ್ಯಕ್ಷೇತ್ರದ ಸಿರಿ ಜ್ಞಾನ ವಿಕಾಸ ಕೇಂದ್ರದ ಸಿರಿ ಧಾನ್ಯ ಬಳಕೆ ಕುರಿತು ಮಾಹಿತಿ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೌಶಲ್ಯಭಾಯಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಡಾ:ನಾಗರತ್ನ ಅವರು ಮಾತನಾಡಿ,ಸಿರಿ ಧಾನ್ಯಗಳಾದ ರಾಗಿ,ನೆವಣೆ,ಜೋಳ,ಸಜ್ಜೆ,ಉದ್ದು,ಬರಗು ಸೇರಿದಂತೆ ೯ ಧಾನ್ಯಗಳು ಮನುಷ್ಯನ ಆರೋಗ್ಯಕ್ಕೆ ಅತ್ಯವಶ್ಯವಾಗಿವೆ.ಈ ಸಿರಿಧಾನ್ಯಗಳನ್ನು ಸೇವಿಸುವುದರಿಂದ ಮನುಷ್ಯನು ದೀರ್ಘಕಾಲದ ಕಾಯಿಲೆಗಳಾದ ಮಧುಮೇಹ,ರಕ್ತದೊತ್ತಡದಂತಹ ಕಾಯಿಲೆಗಳಿಂದ ದೂರವಿರಬಹುದು ಹಾಗೂ ಸಿರಿಧಾನ್ಯಗಳು ಮನುಷ್ಯನಿಗೆ ಅನೇಕ ರೀತಿಯ ಪೌಷ್ಟಿಕಾಂಶವನ್ನು ನೀಡಲಿದೆ,ಆದ್ದರಿಂದ ಎಲ್ಲರು ಸಿರಿಧಾನ್ಯವನ್ನು ಸೇವಿಸುವಂತೆ ಸಲಹೆ ನೀಡಿದರು.

Contact Your\'s Advertisement; 9902492681

ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಸವಿತಾ ಮಾತನಾಡಿ,ಜ್ಞಾನವಿಕಾಸ ಕೇಂದ್ರದ ಕಾರ್ಯಕ್ರಮಗಳು,ಪಿಆರ್‌ಕೆ,ಸಾಮಾನ್ಯ ಸೇವಾ ಕೇಂದ್ರಗಳ ಸೇವೆ,ಶಿಷ್ಯ ವೇತನ ಸೇರಿದಂತೆ ಸಂಸ್ಥೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ಸೇವಾ ಪ್ರತಿನಿಧಿ ನಾಗರತ್ನ ಸೇರಿದಂತೆ ಕೇಂದ್ರದ ಅನೇಕ ಸದಸ್ಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here