ರಂಗಂಪೇಟೆ:ಡಾ:ಬಿ.ಆರ್ ಅಂಬೇಡ್ಕರ್ ಕಾಲೇಜಲ್ಲಿ ಅಂಬೇಡ್ಕರ್ ಓದು ಕಾರ್ಯಕ್ರಮ

0
6

ಸುರಪುರ : ನಗರದ ರಂಗಂಪೇಟೆಯ ಡಾ.ಬಿ.ಆರ್.ಅಂಬೇಡ್ಕರ್ ಪದವಿ, ಪದವಿ ಪೂರ್ವ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಯಾದಗಿರಿ ಸಂಯುಕ್ರಾಶ್ರಯದಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಕಾಲೇಜಿನ ಪ್ರಾಂಶುಪಾಲ ನಾಗಣ್ಣ ಪೂಜಾರಿ ಮಾತನಾಡಿ, ಇಂದಿನ ಯುವ ಜನಾಂಗ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಾಬಾ ಸಾಹೇಬ ಅಂಬೇಡ್ಕರರ ತತ್ತ್ವದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.

Contact Your\'s Advertisement; 9902492681

ಸಾಹಿತಿ ಮತ್ತು ಶಿಕ್ಷಕ ಸುರೇಶ ಶಿರೋಳಮಠ ಉಪನ್ಯಾಸ ನೀಡಿ, ಸಮಾಜದಲ್ಲಿ ಸತ್ಪ್ರಜೆಯಾಗಿ ಬದುಕಿ ವ್ಯಕ್ತಿತ್ವವನ್ನು ರೂಪಿಸಿಕೊಂಡು ಇತರರ ಬಾಳಿಗೆ ಬೆಳಕಾಗುವುದನ್ನು ತೋರಿಸಿಕೊಟ್ಟ ಮಹಾನ್ ಮಾನವತಾವಾದಿ ಅಂಬೇಡ್ಕರರು ಎಂದು ಹೇಳಿದರು. ಉಪನ್ಯಾಸಕ ಡಾ.ಉಮಾದೇವಿ ದಂಡೋತಿ ಮಾತನಾಡಿ, ಅಂಬೇಡ್ಕರ್‍ರು ಸಮಾಜದಲ್ಲಿ ತುಳಿತಕ್ಕೊಳಗಾದವರ ಪರ ಹೋರಾಟ ಮಾಡಿ ಹಗಲಿರುಳು ಶ್ರಮಿಸಿದರು ಎಂದರು.

ಪದವಿ ಕಾಲೇಜಿನ ಪ್ರಾಚಾರ್ಯ ಕೆ.ಕೆ.ಪತ್ತಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತಿಗಳಾದ ಶರಣಗೌಡ ಪಾಟೀಲ್ ಜೈನಾಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ವೇದಿಕೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾ ನಡೆಸಲಾದ ವಿವಿಧ ಸ್ಪರ್ಧೆಗಳಾದ ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಕವಿತಾ(ಪ್ರಥಮ), ಹಯ್ಯಾಳಪ್ಪ(ದ್ವಿತೀಯ), ಸವಿತಾ(ತೃತೀಯ) ಸ್ಥಾನ ಪಡೆದರು. ವಿಜಯಲಕ್ಷ್ಮೀ, ಸಿಮ್ರಾನ್, ಶಿವಕುಮಾರ ಸಮಾಧಾನಕರ ಬಹುಮಾನ ಪಡೆದರು. ಅವರಿಗೆ ಬಹುಮಾನ ರೂಪದಲ್ಲಿ ಪುಸ್ತಕ ಮತ್ತು ಪ್ರಮಾಣ ಪತ್ರ ನೀಡಲಾಯಿತು. ಅಂಬೇಡ್ಕರ್ ಕುರಿತು ಮಹಾಂತೇಶ ಕವನ ವಾಚಿಸಿದರು. ಉಪನ್ಯಾಸಕರಾದ ಗಂಗಾಧರ ರುಮಾಲ್, ಕವಿತಾ, ಭಾರತಿ, ಈಶ್ವರಪ್ಪ ಇದ್ದರು. ಬಸವರಾಜ ಸಿನ್ನೂರ ಸ್ವಾಗತಿಸಿದರು. ಬಿ.ಎನ್.ದೊಡಮನಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here